LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಕಿಯಾ ಘಟಕದಲ್ಲಿ ಬರೋಬ್ಬರಿ 900 ಕಾರು ಇಂಜಿನ್​ಗಳು ಕಳ್ಳತನ

ಪೆನುಗೊಂಡ (ಆಂಧ್ರ ಪ್ರದೇಶ): ಇಲ್ಲಿನ ಕಿಯಾ ಘಟಕದಲ್ಲಿ ಬರೋಬ್ಬರಿ 900 ಕಾರು ಇಂಜಿನ್​ಗಳು ಕಳ್ಳತನವಾಗಿರುವ ಪ್ರಕರಣ ಬಯಲಾಗಿದೆ. ಶ್ರೀ ಸತ್ಯ ಸಾಯಿ ಜಿಲ್ಲೆಯ ಪೆನುಕೊಂಡದಲ್ಲಿರುವ ಕಿಯಾ ಘಟಕದಲ್ಲಿ ನಡೆದಿರುವ ಈ ಬೃಹತ್​ ಕಳ್ಳತನ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಇದು ಗಂಭೀರ ಆತಂಕವನ್ನು ಸೃಷ್ಟಿಸಿದೆ.


ಆರಂಭದಲ್ಲಿ ಕಿಯಾ ಮಂಡಳಿ ಆತಂರಿಕವಾಗಿ ಈ ಕಳ್ಳತನ ಪ್ರಕರಣ ತನಿಖೆಗೆ ಮುಂದಾಯಿತು. ಆದರೆ, ಇದು ಬಗೆಹರಿಯದ ಹಿನ್ನೆಲೆ ಅವರು ಮಾರ್ಚ್​ 19ರಂದು ಪೊಲೀಸರ ಮೊರೆ ಹೋಗಿದ್ದಾರೆ. ಆದರೆ, ಅಧಿಕೃತ ದೂರಿನ ಬಳಿಕವೇ ಈ ಪ್ರಕರಣ ಕುರಿತು ತನಿಖೆ ಕೈಗೆತ್ತಿಕೊಳ್ಳಲು ಸಾಧ್ಯ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ ಬೆನ್ನಲ್ಲೇ ಕಿಯಾ ಪ್ರತಿನಿಧಿಗಳು ಅಧಿಕೃತ ದೂರು ಸಲ್ಲಿಸಿದ್ದಾರೆ. ಇದೀಗ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ವಿಶೇಷ ತಂಡವನ್ನು ಜಿಲ್ಲಾಡಳಿತ ಪೊಲೀಸರು ರಚಿಸಿದ್ದು, ತನಿಖೆ ಸಾಗಿದೆ.


ವಿವಿಧ ಸ್ಥಳಗಳಿಂದ ಕಿಯಾದ ಬಿಡಿ ಭಾಗಗಳು ಬರುತ್ತವೆ. ಕಾರ್​ ಇಂಜಿನ್​ ತಮಿಳುನಾಡಿನಿಂದ ಬರುತ್ತದೆ ಎಂದು ಕಿಯಾ ಮೂಲಗಳು ತಿಳಿಸಿವೆ. ತಮಿಳುನಾಡಿನಿಂದ ಬರುವಾಗ ಕಾರಿನ ಇಂಜಿನ್​ಗಳು ನಾಪತ್ತೆಯಾಗಿವೆಯಾ ಅಥವಾ ಪೆನುಕೊಂಡಾಗೆ ಬಂದ ಬಳಿಕ ಇವು ಕಣ್ಮರೆಯಾಗಿವೆಯಾ ಎಂಬ ಎರಡು ದಿಕ್ಕಿನಲ್ಲಿ ತನಿಖೆ ಸಾಗಿದೆ. ಈ ತನಿಖೆ ಹೆಚ್ಚು ಸಂಕೀರ್ಣತೆಯಿಂದ ಕೂಡಿದ್ದು, ಶೀಘ್ರದಲ್ಲಿ ಈ ಕುರಿತು ಪೊಲೀಸರು ಮಾಧ್ಯಮಗೋಷ್ಟಿ ನಡೆಸಿ ವಿವರ ನೀಡುವ ಸಾಧ್ಯತೆ ಇದೆ. ಸದ್ಯ ಕಿಯಾ ಘಟಕದಲ್ಲಿ ನಡೆದಿರುವ ಇಷ್ಟು ದೊಡ್ಡ ಮಟ್ಟದ ಕಳ್ಳತನ ಪ್ರಕರಣ ಸಾಕಷ್ಟು ಅನುಮಾನ ಮತ್ತು ಅಚ್ಚರಿಗೆ ಕಾರಣವಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್