LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ರಾಮದುರ್ಗದಲ್ಲಿ ಶ್ರೀರಾಮ ಸೇನೆ ಸಮಾವೇಶ: ಕಾಂಗ್ರೆಸ್ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ


ರಾಮದುರ್ಗ: ವಂದೇ ಮಾತರಂ ಗೀತೆಯಲ್ಲಿ ಭಾರತಮಾತೆಯ ವರ್ಣನೆ ಇದೆ. ದೇಶಾಭಿಮಾನದ ಕಿಚ್ಚಿದೆ.  ಆದರೆ ಕಾಂಗ್ರೆಸ್‌ನವರು ಕೇವಲ ನಾಲ್ಕು ಸಾಲು ಗೀತೆಯಷ್ಟು ಹಾಡಲಾಗುವುದು ಎಂದು ಕಾಂಗ್ರೆಸ್ ಸಭೆಯ ನಿರ್ಣಯ ತೆಗೆದುಕೊಂಡಿದ್ದು ಭಾರತ ದೇಶದ ದುರ್ದೈವದ ಸಂಗತಿ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಅಂಬಾಭವಾನಿ ದೇವಸ್ಥಾನದ ಸಭಾಭವನದಲ್ಲಿ ಶ್ರೀರಾಮ ಸೇನೆಯ ಸದಸ್ಯತ್ವ ಅಭಿಯಾನ ಹಾಗೂ ಪದಾಧಿಕಾರಿಗಳ ಪ್ರದಗ್ರಹಣ-೨೦೨೬ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಬಗ್ಗೆ ಮಾತನಾಡುವ ಕಾಂಗ್ರೆಸ್ ಮುಖಂಡರು ಮುಸ್ಲಿಂರ ಓಟಿಗೋಸ್ಕರ ನಾಲ್ಕೆ ಸಾಲು ಹಾಡುವದು ಎಂದು ಹೇಳುವುದು ಇವರಲ್ಲಿ ದೇಶಾಭಿಮಾನ ಇದೆಯಾ, ಕಾಂಗ್ರೆಸ್‌ನವರು ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕದಿನವೇ ಕೆಲ ರಾಷ್ಟ್ರ ನೇತಾರರ ವಿರೋಧದ ಮಧ್ಯ ಪಾಕಿಸ್ತಾನ ಪ್ರತ್ಯೇಕಿಸಿ ಆ ದೇಶಕ್ಕೂ ಸ್ವಾತಂತ್ರ್ಯ ನೀಡಿದ ನಂತರ ೨೦ ಲಕ್ಷ ಹಿಂದೂಗಳು ಕಗ್ಗೊಲೆ, ೩೦ ಲಕ್ಷ ಹಿಂದೂಗಳನ್ನು ದೇಶ ಬಿಟ್ಟು ಓಡಿಸಿದರು. ಲಕ್ಷಾಂತರ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿದರು. ಅಂಬೇಡ್ಕರ್ ಅವರು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ನೀಡುವದಕ್ಕೆ ವಿರೋಧ ಮಾಡಿದರು. ದೇಶದಲ್ಲಿರುವ ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಕಳಿಸಬೇಕು. ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಭಾರತಕ್ಕೆ ಕಳಿಸಿದ ನಂತರವೇ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಗೋಷಿಸಿ ಎಂದು ಅಂಬೇಡ್ಕರ್ ಅವರು ಅವತ್ತೆ ಒತ್ತಾಯಿಸಿದ್ದರೂ ಮಹಾತ್ಮಾ ಗಾಂಧೀ ಮೌನ ವಹಿಸಿದರು.  ಹಾಗಾಗಿ ಮಹಾತ್ಮಾ ಗಾಂಧೀಗಿಂತ ಬಿ.ಆರ್. ಅಂಬೇಡ್ಕರ್ ಅವರೇ ದೇಶದ ಅಪ್ಪಟ ದೇಶ ಪ್ರೇಮಿ ಎಂದು ಅವರು ಬಣ್ಣಿಸಿದರು.
ಭಾರತವನ್ನು ಮುಶ್ಲಿಂ ರಾಷ್ಟ್ರವ ಮಾಡಲು ಸ್ವಾತಂತ್ರ್ಯ ನಂತರ ಪಾಕಿಸ್ತಾನ ಭಾರತದ ವಿರುದ್ದ ೬ ಭಾರಿ ಯುದ್ದ ಮಾಡಿತು. ಅಲ್ಲಲ್ಲಿ ಭೀಕರವಾಗಿ ಬಾಂಬ್ ದಾಳಿ ಮಾಡಿತು. ಆದರೆ ೨೦೧೪ ನಂತರ ನರೇಂದ್ರ ಮೋದಿ ಭಾರತದ ಪ್ರಧಾನಿ ಆದ ಮೇಲೆ ಇಡೀ ದೇಶವನ್ನು ಸಂಘಟಿಸುವ, ಒಗ್ಗೂಡಿಸುವ, ದೇಶಾಭಿಮಾನ ಮೂಡಿಸುವ ಕೆಲಸ ಮಾಡಿದ್ದರಿಂದ ಇಲ್ಲಿಯ ವರೆಗೂ ಪಾಕಿಸ್ತಾನದಿಂದ ಒಂದೂ ಬಾಂಬ್ ಸ್ಟೋಟ್ ಮಾಡಲಿಲ್ಲ ಎಂದು ಹೇಳಿದರು.
ಸಿಂದೋಗಿ-ಮುನವಳ್ಳಿಯ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಸಂಘಟನೆಯಲ್ಲಿ ಬಲವಿದೆ. ಸಂತ್ಸಂಗದ ಸಂಘ ಬೆಳೆಸಿಕೊಂಡು ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಹೋಗಬೇಕು. ಮುಸ್ಲಿಂರು ಲವ್ ಜಿಹಾದ್, ಕ್ರಿಶ್ಚಿಯನ್ ರು ಹಣದ ಆಸೆ ಇಟ್ಟು ಮತಾಂತರ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಸಿದ್ದರೆ ಹಿಂದೂ ಧರ್ಮಕ್ಕೆ ಉಳಿಗಾಲವಿಲ್ಲ. ಸನಾತನ ಹಿಂದೂ ಧರ್ಮ, ಸ್ವಾಭಿಮಾನ, ಸಂಸ್ಕೃತಿ ಬಗ್ಗೆ ತರಬೇತಿ ನೀಡುವುದು ಅಗತ್ಯವಿದೆ. ನಮ್ಮ ಆಚರಣೆಯಿಂದ ಜನರ ಮನಸ್ಸು ಗೆಲ್ಲಬೇಕೆ ಹೊರತು ದಬ್ಬಾಳಿಕೆಯಿಂದಲ್ಲ ಎಂದು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಶ್ರೀರಾಮ ಸೇನೆಯ ಉತ್ತರ ಪ್ರಾಂತ ಅಧ್ಯಕ್ಷ ರವಿ ಕೋತೇಕರ್ ಹಿಂದುತ್ವದ ಬಗ್ಗೆ ಮಾತನಾಡಿದರು. ಡಾ. ಬಸವರಾಜ ಮಾದನ್ನವರ ಪ್ರಾಸ್ತಾವಿಕ ಮಾತನಾಡಿದರು.  ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ವಿನಯ ಅಂಗ್ರೊಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಡಾ. ಕೆ.ವಿ. ಪಾಟೀಲ, ಮುಖಂಡರಾದ ಗೋಪಾಲರಡ್ಡಿ ಸಂಶಿ, ಬಸವರಾಜ ಕೊನನ್ನವರ, ಮಲ್ಲಿಕಾರ್ಜುನ ಭಾವಿಕಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಸಂಜು ಭಜಂತ್ರಿ ಸ್ವಾಗತಿಸಿದರು. ಸಿದ್ದು ಗುಡೆನ್ನವರ ನಿರೂಪಿಸಿ, ವಂದಿಸಿದರು. 

 

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ