ನೇಸರಗಿ. ಕೆ ಪಿ ಸಿ ಸಿ ಸದಸ್ಯರು, ಮಾಜಿ ಜಿ ಪಂ ಸದಸ್ಯರು ಆದ ಶ್ರೀಮತಿ ರೋಹಿಣಿ ಪಾಟೀಲ ಹಾಗೂ ಅನೇಕ ಮಹಿಳೆಯರಿಂದ ಆಯೋಜಿಸಲಾಗಿದ್ದ ಶ್ರಾವಣ ಮಾಸದ ಪ್ರಯುಕ್ತ ಸಮೀಪದ ನೇಗಿನಹಾಳ ಗ್ರಾಮದ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಇವರ ನೇಗಿನಹಾಳ ನಿವಾಸದಲ್ಲಿ ಶುಕ್ರವಾರದಂದು ಶ್ರೀ ಗುರು ಬಸವ ಭಾವಪೂಜೆ, ಅನುಭವ ಶ್ರೀಗುರು ಬಸವ ಶ್ರೀ ರಕ್ಷೆ ಕಾರ್ಯಕ್ರಮ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಿತ್ತೂರು ಮತಕ್ಷೇತ್ರದ ಅನೇಕರು ಶ್ರೀಮತಿ ರೋಹಿಣಿ ಪಾಟೀಲ ಅವರಿಂದ ಶ್ರೀರಕ್ಷೆ ಕಟ್ಟಿಸಿಕೊಂಡು ಅದ್ದೂರಿಯಾಗಿ ಶ್ರೀ ಗುರು ಬಸವ ಶ್ರೀ ರಕ್ಷೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಿದರು. ಕಾರ್ಯಕ್ರಮವನ್ನು ರೋಹಿಣಿ ಮೇಡಂ ಅವರ ಮಹಿಳಾ ಬಳಗ ಹಾಗೂ ಅಭಿಮಾನಿಗಳು ಶ್ರಾವಣ ಮಾಸದ ಪ್ರಯುಕ್ತ ಸಡಗರ ಸಂಭ್ರಮದಿಂದ ಅಸರಿಸಿದರು.