Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾರ್ಚ 16 ರಿಂದ 21 ರವರೆಗೆ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಜಾತ್ರೋತ್ಸವ








 ನೇಸರಗಿ. ಇಲ್ಲಿನ ಪ್ರತಿಷ್ಠಿತ ಶ್ರೀ

ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠ ನೇಸರಗಿ ಇದರ  ಜಾತ್ರಾ ಮಹೋತ್ಸವವು ಮಾರ್ಚ 16 ರಿಂದ ಪ್ರಾರಂಭವಾಗಿ ಮಾರ್ಚ 21 ರ ವರೆಗೆ ನೆರವೇರಲಿದ್ದು, ಜಾತ್ರೆಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶ್ರೀ ಶಿವಾನಂದ ಭಾರತಿ  ಮಹಾಸ್ವಾಮಿಗಳು ವಹಿಸುವರು, ಸಾನಿಧ್ಯವನ್ನು ನೇಸರಗಿ- ಮಲ್ಲಾಪೂರ  ಗಾಳೇಶ್ವರ ಮಠದ ಶ್ರೀ ಚಿದಾನಂದ ಶ್ರೀಗಳು ವಹಿಸುವರು. ಮಾ. 16 ರಂದು ಬೆಳಿಗ್ಗೆ  ಮೂರ್ತಿಗೆ ರುದ್ರಾಭಿಷೇಕ, ಪೂಜಾ ಸಮಾರಂಭ, 3 ಘಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಮುತ್ತೈದೆಯರಿಂದ ಕುಂಭಮೇಳ, ಪಲ್ಲಕ್ಕಿ ಉತ್ಸವ ಜರುಗುವದು, ಗ್ರಾಮದೇವಿಗೆ ಉಡಿ ತುಂಬುವದು ಸಂಜೆ 5 ಘಂಟೆಗೆ ಕಳಸರೋಹಣ ನೆರವೇರಲಿದೆ. ಮಾರ್ಚ 16 ರಿಂದ 21 ರವರೆಗೆ ಪ್ರತಿದಿನ ನಾಡಿನ ಪೂಜ್ಯರಿಂದ ಆದ್ಯಾತ್ಮ ಪ್ರವಚನ, ಮಹಾಪ್ರಸಾದ  ನೆರವೇರಲಿದೆ.ದಿ. 20-03-2026 ರಂದು ಸಂಜೆ 4 ಘಂಟೆಗೆ ಮಹಾರಥೋತ್ಸವ ನಡೆಯಲಿದೆ. ಮಾ. 21 ರಂದು ಕಳಸ ಇಳಿಸುವದು, ಲಕ್ಷ ದೀಪೋತ್ಸವ, ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರಿಂದ ನೂತನ ಕಟ್ಟಡ ಉದ್ಘಾಟನೆ, ಮಹಾಪ್ರಸಾದ ಜರುಗುವದು. ಪ್ರತಿದಿನ ಗ್ರಾಮದ ಭಜನಾ ಮಂಡಳಗಳಿಂದ ಭಜನೆ ಜರುಗುವದು.ಈ ಜಾತ್ರಾ ಮಹೋತ್ಸವಕ್ಕೆ ಆದ್ಯಾತ್ಮ ಪ್ರವಚನಕ್ಕೆ ಹುಣಶ್ಯಾಳ ಪಿ ಜಿ ಕೈವಲ್ಯಾಶ್ರಮದ ನಿಜಗುಣ ಶ್ರೀಗಳು, ಅವರೊಳ್ಳಿಯ ಚನ್ನಬಸವ ದೇವರು, ದತ್ತವಾಡದ ಹೃಷಕೇಶಾನಂದ ಮಹಾರಾಜರು,ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಶ್ರೀಗಳು, ಯರಗೋಪ್ಪದ ಶಿವಪ್ಪಜ್ಜನವರು, ಸವಟಗಿಯ ಲಿಂಗಯ್ಯ ಸ್ವಾಮಿಗಳು, ಮದನಬಾವಿಯ ಮಾತೋಶ್ರೀ ಶಿವದೇವಿ  ತಾಯಿ,ಹಾರುಗೋಪ್ಪದ ಮಾತೋಶ್ರೀ  ಶಿವಯೋಗಿಣಿ ತಾಯಿ ಅವರುಗಳು  ಭಾಗವಹಿಸಲಿದ್ದಾರೆ.

       ಟ್ರ್ಯಾಕ್ಟರ ಮಾಲೀಕರ ಸಂಘ ನೇಸರಗಿ ಇವರ ಆಶ್ರಯದಲ್ಲಿ ಸೋಮವಾರ ದಿ.16-3-2026 ರಂದು ಮದ್ಯಾಹ್ನ 12-30 ಕ್ಕೆ ಟ್ರ್ಯಾಕ್ಟರ ರಿವರ್ಸ್ ಸ್ಪರ್ಧೆ ಏರ್ಪಡಿಸಲಾಗಿದೆ.ಮಂಗಳವಾರ ದಿ. 17 ಹಾಗೂ ಬುಧವಾರ ದಿ. 18 ರಂದು ಖಾಲಿ ಗಾಡಾ ಚಕ್ಕಡಿ ಓಡಿಸುವ ಶಾರ್ಯತ್ತು ಏರ್ಪಡಿಸಲಾಗಿದೆ. ಮೊದಲನೇ ಬಹುಮಾನ ರೂ. 25,000/- ಎರಡನೇ ಬಹುಮಾನ ರೂ. 20,000/-, ಮೂರನೇ ಬಹುಮಾನ ರೂ. 18,000/- ಹೀಗೆ 12 ಜೋಡಿ ಎತ್ತುಗಳಿಗೆ ಬಹುಮಾನ ನೀಡಲಾಗುವದು ಎಂದು ಶ್ರೀ ಚನ್ನವೃಷಬೇಂದ್ರ ಅಜ್ಜನವರ ಜಾತ್ರಾ ಕಮಿಟಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಟ್ರ್ಯಾಕ್ಟರ್ ರಿವರ್ಸ್ ಸ್ಪರ್ಧೆಗೆ ಮೊ. ನಂ 9740754195,8431401312 ಹಾಗೂ  ಖಾಲಿ ಗಾಡಾ ಚಕ್ಕಡಿ ಸ್ಪರ್ಧೆಗೆ ಮೊ ನಂ.6363713660,9148323584 ಈ ನಂಬರಗೆ ಸಂಪರ್ಕಿಸಲು ಕೋರಲಾಗಿದೆ.











Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ