ಬೇಡಿಕೆಗೆ ತಕ್ಕಷ್ಟು ಮೀನು ಪೂರೈಕೆ ಆಗದ ಹಿನ್ನೆಲೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಹಕ್ಕಿ ಜ್ವರದ ಕಾರಣ ಕೋಳಿ ಮಾಂಸ ಸಿಗುತ್ತಿಲ್ಲ. ಸಿಕ್ಕಿದರೂ ಅನೇಕರು ರೋಗ ಭೀತಿಯಿಂದ ಅದನ್ನು ಖರೀದಿ ಮಾಡುತ್ತಿಲ್ಲ. ಮತ್ತೊಂದೆಡೆ, ಮಟನ್ ದುಬಾರಿಯಾಗಿದೆ. ಈ ಎಲ್ಲ ಕಾರಣಗಳಿಂದ ಮೀನಿನ ಬೇಡಿಕೆ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಮೀನು ಬೆಲೆ ಕೂಡ ದುಬಾರಿಯಾಗಿದೆ.
ನಗರದ ರಸೆಲ್ ಮಾರುಕಟ್ಟೆಗೆ ಬೇಡಿಕೆಯಷ್ಟು ಮೀನು ಬರುತ್ತಿಲ್ಲ. ಮಂಗಳೂರು, ಚೆನ್ನೈ, ಕೇರಳ, ಆಂಧ್ರಪ್ರದೇಶಗಳಿಂದ ಪೂರೈಕೆಯಲ್ಲಿ ಕುಂಠಿತವಾಗಿದೆ. ಬೇಸಿಗೆ ಹೆಚ್ಚಾಗಿರುವ ಹಿನ್ನೆಲೆ ಮೀನುಗಾರಿಕೆ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಮೀನು ದರ ವಿವರ (ಹಿಂದಿನ ದರ – ಪ್ರಸ್ತುತ ದರ ಕೆಜಿ ಲೆಕ್ಕದಲ್ಲಿ)
- ಅಂಜಲ್ 650 – 850
- ಬಂಗುಡೆ 200 – 250
- ಶಿಲಾ 350 – 400
- ವೈಟ್ ಪಂಪ್ಲೆಟ್ 900 – 1200
- ಬ್ಲಾಕ್ ಪಂಪ್ಲೇಟ್ 600 – 850
- ಪ್ರಾನ್ಸ್ 380 – 450
- ಕ್ರಾಬ್ 180 – 300
- ಶಂಕರ 250 – 320
- ತುನ 200 – 300
- ಪಾರೆ 200 – 250