LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಸೆ. 13ರಂದು ವಾರ್ಷಿಕೋತ್ಸವ ಹಾಗೂ ಅಧಿಕಾರ ಹಸ್ತಾಂತರ ಸಮಾರಂಭ

ಜಮಖಂಡಿ ಛಾಯಾಚಿತ್ರಗ್ರಾಹಕರ ಸಂಘದ 15ನೇ ವಾರ್ಷಿಕೋತ್ಸವ

ಜಮಖಂಡಿ: ಜಮಖಂಡಿ ತಾಲೂಕಾ ಛಾಯಾಚಿತ್ರಗ್ರಾಹಕರ ಸಂಘ (ರಿ) ವತಿಯಿಂದ ಸಂಘದ 15ನೇ ವಾರ್ಷಿಕೋತ್ಸವ ಹಾಗೂ ಅಧಿಕಾರ ಹಸ್ತಾಂತರ ಸಮಾರಂಭವನ್ನು ಸೆಪ್ಟೆಂಬರ್ 13ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿರುವ ಬಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹಾಸಿಮ್ ಅ. ಜಮಖಂಡಿ ತಿಳಿಸಿದ್ದಾರೆ.
ಜಮಖಂಡಿ ನಗರದ ಮೈಗೂರ್ ರಸ್ತೆಯಲ್ಲಿರುವ ಛಾಯಾಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಛಾಯಾಗ್ರಾಹಕರಿಗೆ ಅಗತ್ಯವಿರುವ ವಿವಿಧ ಉಪಕರಣಗಳು ಹಾಗೂ ಸೇವೆಗಳಿಗೆ ಸಂಬಂಧಿಸಿದ ವಿಶೇಷ ಮಳಿಗೆಗಳನ್ನು ಕಾರ್ಯಕ್ರಮದ ಅಂಗವಾಗಿ ಏರ್ಪಟು ಮಾಡಲಾಗುವುದು. ಅಲ್ಲದೆ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಶ್ರೀ ರಾಚೋಟೇಶ್ವರ ವಿರಕ್ತಮಠ, ಮುತ್ತೂರಿನ ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಇರಲಿದೆ. ಸಂಘದ ಅಧ್ಯಕ್ಷ ಹಾಸಿಮ್ ಅ. ಜಮಖಂಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಜಮಖಂಡಿ ವಿಧಾನಸಭಾ ಕ್ಷೇತ್ರದ ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್, ಬೆಂಗಳೂರಿನ ಅಧ್ಯಕ್ಷ ನಾಗೇಶ ಹೆಚ್.ಎಸ್. ಉಪಸ್ಥಿತರಿರುವರು.
ಬಿಡಿಸಿಸಿ ಬ್ಯಾಂಕ್, ಬಾಗಲಕೋಟೆ ನಿರ್ದೇಶಕ ಹಾಗೂ ಮಾಜಿ ಶಾಸಕ ಆನಂದ ಸಿ. ನ್ಯಾಮಗೌಡ ಅವರು ಛಾಯಾಚಿತ್ರ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಲಯನ್ಸ್ ಕ್ಲಬ್ ಜಮಖಂಡಿ ಅಧ್ಯಕ್ಷ ಹಾಗೂ ಎಂ.ಆರ್.ಎನ್. (ನಿರಾಣಿ) ಉದ್ಯಮ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ಆರ್. ನಿರಾಣಿ ಅವರು ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಅಂಜುಮನ್-ಎ-ಇಸ್ಲಾಂ ಕಮಿಟಿ ಜಮಖಂಡಿ ಅಧ್ಯಕ್ಷ ಡಾ. ತೌಫಿಕ ಪಾರ್ಥನಳ್ಳಿ, ಬಾಗಲಕೋಟೆ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ ಅಂಬಿಗೇರ, ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಂಗಳೂರಿನ ನಿರ್ದೇಶಕರಾದ ಲಕ್ಷ್ಮೀನಾರಾಯಣ ಭಟ್, ವಿಠಲ ಹಿರೇಮಠ, ಕೆಪಿಎ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆ.ಆರ್., ವಿಜಯಪುರ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ರಮೇಶ ಚವ್ಹಾಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ
ಪ್ರತಿಭಾ ಪುರಸ್ಕಾರದ ಪ್ರಾಯೋಜಕರಾಗಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರನ್ನು ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ, ಶಿರಸಂಗಿಯ ಪ್ರಧಾನ ಕಾರ್ಯದರ್ಶಿ ಅರುಣ ದುಂಡಪ್ಪ ಸೊನಾರ, ಹುನ್ನೂರಿನ ರವೀಂದ್ರ ಸ್ಟುಡಿಯೋ ಮಾಲೀಕ ರವೀಂದ್ರ ಜೆ. ಕೋಳಿ ಹಾಗೂ ಜಮಖಂಡಿಯ ಮಾಜಿ ಸೈನಿಕ ಎ.ಎಂ. ಝಂಡೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.
ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ನಿಕಟಪೂರ್ವ ಪದಾಧಿಕಾರಿಗಳಾದ ಉಪಾಧ್ಯಕ್ಷ ಸಿದ್ದು ಮಾ. ಗಡದಿ, ಕಾರ್ಯದರ್ಶಿ ರಮೇಶ ಬ. ಹಲವಾಯಿ ಹಾಗೂ ಶ್ರೀಶೈಲ ಸಾ. ಮಾಳಿ ಅವರನ್ನು ಗೌರವಿಸಲಾಗುವುದು.
ನೂತನ ಪದಾಧಿಕಾರಿಗಳಾಗಿ ಅಶೋಕ ಜೋಶಿ (ಅಧ್ಯಕ್ಷರು), ಮುಜಾಹಿದ್ ಉ. ದಿಲಾವರ (ಉಪಾಧ್ಯಕ್ಷರು), ಈರನಗೌಡ ರಾ. ಪಾಟೀಲ (ಕಾರ್ಯದರ್ಶಿ) ಹಾಗೂ ಮಲ್ಲಪ್ಪ ಬಿ. ಸಿದ್ದನವರ (ಖಜಾಂಚಿ) ತೊದಲಬಾಗಿ ವಲಯದ ಅಧ್ಯಕ್ಷರಾಗಿ  ಲಕ್ಷ್ಮಣ ಪವಾರ ಸಾವಳಗಿ ವಲಯದ ಅಧ್ಯಕ್ಷರಾಗಿ ಗುರುಶಾಂತ್ ಪಾಟೀಲ್ ಕೊಣ್ಣೂರ ವಲಯದ  ಅಧ್ಯಕ್ಷರಾಗಿ ತನವಪ್ಪ ಕವಟಗೊಪ್ಪ ಹಿಪ್ಪರಗಿ ವಲಯದ ಅಧ್ಯಕ್ಷರಾಗಿ ರಮೇಶ್ ಗಲಗಲಿ   ಅಧಿಕಾರ ಸ್ವೀಕರಿಸಲಿದ್ದಾರೆ.
ಛಾಯಾಗ್ರಹಣ ಕ್ಷೇತ್ರಕ್ಕೆ ಸಂಬಂಧಿಸಿದವರು, ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶೇಖರ್ ಹರಕಂಗಿ ರವೀಂದ್ರ ಕೋಳಿ ಆನಂದ ಪುಕಾಳೆ ಸಂಜು ಕಬ್ಬುರಿ  ಸಿದ್ದು ಮಾಳಿ  ಚಾಂದಸಾಬ್ ಬಾಗಣಿ ರವೀಂದ್ರ ಜಂಬಗಿ ಅನ್ನಪ್ಪ  ಮೋಹಿತೆ  ಅಜ್ಗರಲಿ ಶೇಖ  ಶಿವಾನಂದ್ ಪೂಜಾರಿ ಶಿವಾಜಿ ಜಾದವ್  ಹಾಗೂ ಇತರ ಇದ್ದರೂ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ