ಯರಗಟ್ಟಿ : ತಾಲೂಕಿನ ಸತ್ತಿಗೇರಿ ಗ್ರಾಮದ ರಾಮಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ರುದ್ರಾಭಿ?ಕ, ಬಿಲ್ವಾರ್ಚನೆ ಸಹಸ್ರನಾಮಾವಳಿ ಹಾಗೂ ವಿಶೇ? ಪೂಜೆ ಭಕ್ತರು ಸಲ್ಲಿಸಿದರು.
ರಾಮಲಿಂಗೇಶ್ವರ ಜಾತ್ರಾಮಹೋತ್ಸವದಲ್ಲಿ ಶಾಸಕ ವಿಶ್ವಾಸ ಭಾಗವಹಿಸಿ, ಶ್ರೀ ದೇವರ ದರ್ಶನ ಪಡೆದು ವಿಶೇ? ಪೂಜೆ ಸಲ್ಲಿಸಿದರು ದೇವಸ್ಥಾನ ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿದರು.
ರಾಮಲಿಂಗೇಶ್ವರ ಆಶೀರ್ವಾದ ಸದಾ ನಮ್ಮ ಸವದತ್ತಿ ಕ್ಷೇತ್ರದ ಸಮಸ್ತ ಜನತೆಯ ಮೇಲಿರಲಿ ನಾಡಿಗೆ ಸಮೃದ್ಧ ಮಳೆ ಬೆಳೆ ಮತ್ತು ರೈತರ ಬಾಳಿಗೆ ಚೈತನ್ಯ ಸಿಗಲಿ ಎಂದು ಪ್ರಾರ್ಥಿಸಿದರು.
ಸಂಜೆ ಸಕಲ ವಾದ್ಯ ಮೇಳ ಗಳೊಂದಿಗೆ ರಾಮಲಿಂಗೇಶ್ವರ ರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು ಭಕ್ತರು ಕಾರಿಕ ಬಾಳೆಹಣ್ಣು ಎಸೆದು ಭಕ್ತಿ ಪರಾಕಾ? ಮೆರೆದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ. ಪಂ. ಅಧ್ಯಕ್ಷ ಬಂಗಾರೆಪ್ಪ ಹರಳಿ, ತಾ.ಪಂ. ಮಾಜಿ ಸದಸ್ಯ ಮಲಿಕಸಾಬ ಬಾಗವಾನ, ಡಾ. ವ್ಹಿ. ಎಸ್. ವಾಲಿ, ಉಮೇಶ ಮಾಗುಂಡನ್ನವರ, ಶಿವಾನಂದ ಯರಗಣವಿ, ಶಿವಾನಂದ ಬಳಿಗಾರ, ಶ್ರೀಶೈಲ ಯರಗಣವಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಬಿ.ಪಾಟೀಲ, ?ಣ್ಮುಖ ಬಳಿಗಾರ, ಬಸವರಾಜ ಹೂಗಾರ, ಸುಧೀರ ಗೋಡಿ, ರಾಮಣ್ಣ ಹೂಗಾರ, ಬಸವರಾಜ ರಂಗಣ್ಣವರ ಪ್ರವೀಣ ರೋಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.