ಸಂಕೇಶ್ವರ : ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆ ಮೇಲೆ ವ್ಯಾಪಾರಸ್ಥರು ಮಾಡಿಕೊಂಡಿದ್ದ ಒತ್ತುವರಿಯನ್ನು ಪುರಸಭೆಯ ಅಧಿಕಾರಿಗಳು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡರು.
ಪುರಸಭೆಯ ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ್ ಅವರ ಆದೇಶದ ಮೇರೆಗೆ ಸುಭಾಷ ರಸ್ತೆ, ಮಡ್ಡಿಗಲ್ಲಿಯ ಶ್ರೀ ರೇಣುಕಾ ಮಂದಿರದವರೆಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಪುರಸಭೆಯ ಅವರು ಅನಧಿಕೃತ ಒತ್ತುವರಿಯನ್ನು ತೆರವುಗೋಳಿಸಿದರು.
ಅನಧಿಕೃತ ಒತ್ತುವರಿಯನ್ನು ತೆರವುಗೋಳಿಸಲು ಕನ್ನಡ ಪರ ಸಂಘಟನೆಯವರು ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಕಾರ್ಯಾಚರಣೆಯಲ್ಲಿ ಆರೋಗ್ಯ ಕಿರು ನಿರೀಕ್ಷಕರಾದ ಶ್ರೀಧರ ಬೆಳವಿ,ಕೃಷ್ಣಾ ಖಾತೆದಾರೆ, ಸುನೀಲ ಪಾಟೀಲ, ಸಿಬ್ಬಂದಿಗಳಾದ ಪ್ರಕಾಶ ಸತ್ಯನಾಯಿಕ ಸೇರಿದಂತೆ ಅನೇಕರು ಇದ್ದರು.