Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಅಥಣಿ ಪೊಲೀಸರಿಂದ ಅಂತಾರಾಜ್ಯ ಕಳ್ಳರ ಬಂಧನ

ಅಥಣಿ : ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಜನದಟ್ಟಣೆಯ ಮಧ್ಯೆ ಪ್ರಯಾಣಿಕರೊಬ್ಬರ ಕುತ್ತಿಗೆಯಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಚೈನ್ ಕಳವು ಮಾಡಿದ್ದ ಅಂತರರಾಜ್ಯ ಕಳ್ಳರನ್ನು ಅಥಣಿ ಪೊಲೀಸರು ಬಂಧಿಸುವಲ್ಲಿ  ಯಶಸ್ವಿಯಾಗಿದ್ದಾರೆ.
ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ಅಣ್ಣಾಸಾಬ ಕುಂಬಾರ (66) ಎಂಬುವರು ನ.4ರಂದು ಅಥಣಿ ನಿಲ್ದಾಣದಲ್ಲಿ ಬಸ್ ಹತ್ತುವಾಗ ಅವರ ಕೊರಳಲ್ಲಿ ಇದ್ದ 35 ಗ್ರಾಂ ತೂಕದ, ಅಂದಾಜು 4.20 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಮಾಡಲಾಗಿತ್ತು. ಈ ಕುರಿತು ಅಥಣಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಹಾಗೂ ಅಥಣಿ ಡಿಎಸ್‌ಪಿ ವಿರೇಂದ್ರ ಕುಮಾರ ಪಿ. ಮಾರ್ಗದರ್ಶನದಲ್ಲಿ ಅಥಣಿ ಸಿಪಿಐ ಸಂತೋಷ ಹಳ್ಳೂರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಪಿಎಸ್‌ಐ ಸೋಮೇಶ ಗೆಜ್ಜಿ (ಅವಿ) ಮುಂದಾಳತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಶಿರೂರ ಕಾಸಾರ ತಾಲೂಕಿನ ಹಿವರಶಿಂಗಾ ಗ್ರಾಮದ ಲಕ್ಷ್ಮಣ ರಾಮದಾಸ ಜಾಧವ ಮತ್ತು ನವನಾಥ ಮುರಳಿಧರ ಶೇಳಕೆ ಎಂಬ ಇಬ್ಬರು ಆರೋಪಿಗಳನ್ನು ನ.17ರಂದು ಬಂಧಿಸಿದ್ದಾರೆ. ಆರೋಪಿಗಳಿಂದ 35 ಗ್ರಾಂ ತೂಕದ ಬಂಗಾರದ ಸರ ಹಾಗೂ 6 ಗ್ರಾಂ ತೂಕದ ಬಂಗಾರದ ಬೋರಮಾಳ ವಶಪಡಿಸಿಕೊಳ್ಳಲಾಗಿದೆ. ಒಟ್ಟು 41 ಗ್ರಾಂ ತೂಕದ 4.92 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಅಥಣಿ ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಿಎಚ್‌ಸಿ ಎ.ಎ. ಈರಕರ, ಎಚ್‌.ಸಿ ಜೆ.ಆರ್. ಅಸೋದೆ, ಸಿಪಿಸಿಗಳಾದ ಭೀ.ಎಂ. ತಳವಾರ, ಎ.ಎ ಮೈಗೂರ, ಸಚಿನ ಪಾಟೀಲ ಹಾಗೂ ಬೆಳಗಾವಿ ತಾಂತ್ರಿಕ ವಿಭಾಗದ ವಿನೋದ ಠಕ್ಕಣ್ಣವರ ಪಾಲ್ಗೊಂಡಿದ್ದರು.ಈ ಕಾರ್ಯವನ್ನು ಎಸ್ಪಿ ಬೆಳಗಾವಿ ಹಾಗೂ ಸಾರ್ವಜನಿಕರು ಶ್ಲಾಘಿಸಿರುತ್ತಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗುಡಿಕೊಟಬಾಗಿಯಲ್ಲಿ ನೂತನ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ಇಂದು ರಾಜ್ಯಮಟ್ಟದ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿಗೆ ಮಹಮ್ಮದ್ ಪಟೇಲ್ ಭಾಜನಡಾ. ಸುಜಾತಾ ಚಲವಾದಿ ಅವರಿಗೆ ೨೦೨೬ನೇ ಸಾಲಿನ ಪುಸ್ತಕ ಬಹುಮಾನಕೃಷಿ ಸಂಘದಿಂದ ರೈತರ ಅಭಿವೃದ್ಧಿ ಸಾಧ್ಯ : ಮಹಾಂತೇಶ ದೊಡ್ಡಗೌಡರ ಅಥಣಿ ಪೊಲೀಸರಿಂದ ಅಂತಾರಾಜ್ಯ ಕಳ್ಳರ ಬಂಧನಟಿಪ್ಪು ಸುಲ್ತಾನ್ ಜೀವನ, ಸಂದೇಶ ಜನರಿಗೆ ತಲುಪಿಸುವ ಉದ್ದೇಶ: ಖಾಜಿಹಸಿದ ಹೊಟ್ಟೆಗೆ ಅನ್ನದ ಆಸರೆ..! ಕಾಗವಾಡದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ, ಬಡವರಿಗೆ ಕಡಿಮೆ ದರದಲ್ಲಿ ಊಟದ ಸೌಲಭ್ಯ*ದೇಶದಲ್ಲಿ ಅರಾಜಕತೆ ಮತ್ತು ಅಶಾಂತಿಯನ್ನು* *ಉಂಟುಮಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ, ಮತ್ತು ಕಾಂಗ್ರೆಸ್‌* *ಸರ್ಕಾರದ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆರಾಣಿ ಹಳ್ಳಿ ಅವರನ್ನು ಬಳಗೇರಿಗೆ ಮರುನಿಯೋಜಿಸಲು ರೈತರು, ಗ್ರಾಮಸ್ಥರ ಆಗ್ರಹಸಾರ್ವಜನಿಕ ಸ್ಥಳಗಳ ಅನಧಿಕೃತ ಒತ್ತುವರಿಗೆ ಬ್ರೇಕ್ ಹಾಕಿದ ಸಂಕೇಶ್ವರ ಪುರಸಭೆ