ನೇಸರಗಿ.,ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಸಣ್ಣ ಟ್ರ್ಯಾಕ್ಟರ್, ದೊಡ್ಡ ಟ್ರ್ಯಾಕ್ಟರ್ ತೆಗೆದುಕೊಳ್ಳುವ ಸಲುವಾಗಿ ಡಿ ಸಿ ಸಿ ಬ್ಯಾಂಕ 4 ಎಕರೆ ಭೂಮಿ ಇರುವ ರೈತನಿಗೆ 3% ರಂತೆ ಪಿ ಕೆ ಪಿ ಎಸ್ ಸಂಘಗಳ ಮೂಲಕ ಸಾಲ ನೀಡುತ್ತಿದ್ದು, ಜಿಲ್ಲೆಯಲ್ಲಿಯೇ ಟ್ರ್ಯಾಕ್ಟರ್ ಸಾಲಗಳು ಕಾಟಬಾಕಿ ಇಲ್ಲ, ಅದಕ್ಕಾಗಿ ರೈತರು ತಮ್ಮ ಕೃಷಿ ಕೆಲಸಕ್ಕೆ ಕೃಷಿ ಸಂಘಗಳ ಮೂಲಕ ಸಾಲ ತಗೆದುಕೊಂಡು ಮುಂದೆ ಬನ್ನಿ ಎಂದು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಇಲ್ಲಿಗೆ ಸಮೀಪದ ಹೊಸಕೋಟಿ ಗ್ರಾಮದಲ್ಲಿ ನೂತನ ಪಿ ಕೆ ಪಿ ಎಸ್ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿ ರೈತರು ಕೃಷಿ ಸಂಘದ ಅನುಕೂಲಗಳನ್ನು ಪಡೆದು ಬೆಳವಣಿಗೆ ಹೊಂದಿರಿ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಇಲ್ಲಿನ ಶ್ರೀ ಮಹಾಸ್ವಾಮಿಗಳು ವಹಿಸಿದ್ದರು. ವಣ್ಣೂರ ಪಿ ಕೆ ಪಿ ಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ, ನೇಸರಗಿ ಪಿ ಕೆ ಪಿ ಎಸ್ ಅಧ್ಯಕ್ಷ ರಾಜಶೇಖರ ಯತ್ತಿನಮನಿ, ಸುತಗಟ್ಟಿ ಪಿ ಕೆ ಪಿ ಎಸ್ ಅಧ್ಯಕ್ಷ ಆರ್ ಸಿ ಪಾಟೀಲ, ಹೊಸಕೋಟಿ ಭಾಗದ ಎಲ್ಲ ಸಮಾಜದ ಮುಖಂಡರು, ರೈತ ಮುಖಂಡರು,ಹೊಸಕೋಟಿ ಪಿ ಕೆ ಪಿ ಎಸ್ ಅಧ್ಯಕ್ಷ ದ್ಯಾಮಪ್ಪ ಮುಂಡಗಿ, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು,ಕಾರ್ಯನಿರ್ವಾಹಕ ಆನಂದ ಕೊದಾನಪೂರ, ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.