ಸಂಕೇಶ್ವರ : ಕರ ಬಾಕಿ ಉಳಿಸಿಕೊಂಡಿರುವ ಮನೆಗಳು, ವಾಣಿಜ್ಯ ಮಳಿಗೆಗಳ ನಲ್ಲಿ ಸಂಪರ್ಕ ಕಡಿತಗೊಳಿಸಲು ಪಟ್ಟಣದ ಪುರಸಭೆ ಮುಂದಾಗಿದ್ದು, ಗುರುವಾರದಿಂದ ಕಾರ್ಯಾಚರಣೆ ನಡೆಸಿದೆ. ಹುಕ್ಕೇರಿ ರಸ್ತೆಯಲ್ಲಿನ ವಿವಿಧ ವಾಣಿಜ್ಯ ಮಳಿಗೆಗಳಿಗೆ ತೆರಳಿದ ಸಿಬ್ಬಂದಿಗಳು ₹20,000ಕ್ಕೂ ಹೆಚ್ಚು ಕರ ಉಳಿಸಿಕೊಂಡು ಸತಾಯಿಸುತ್ತಿದ್ದವರ ನಲ್ಲಿ ಸಂಪರ್ಕ ಕಡಿತಗೊಳಿಸಿದರು.
ಕಂದಾಯ ಅಧಿಕಾರಿ ವಿನಾಯಕ ಬಬಲೇಶ್ವರ ಮಾತನಾಡಿ, ಪುರಸಭೆಯ ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ್ ಅವ ಮಾರ್ಗದರ್ಶನದಲ್ಲಿ ಕರ ವಸೂಲಿಗೆ ತಂಡ ರಚಿಸಲಾಗಿದ್ದು, ಉಳವರೆ ಹೆಚ್ಚಾಗಿ ಕರ ಬಾಕಿ ಉಳಿಸಿಕೊಂಡಿದ್ದು, ಸಂಪನ್ಮೂಲ ಸಂಗ್ರಹ, ಸಿಬ್ಬಂದಿ ವೇತನ ಪಾವತಿಗೆ ಕರ ಬಾಕಿ ವಸೂಲಿ ಮಾಡಲಾಗುತ್ತಿದೆ ಎಂದರು. ಈ ಸಂಧರ್ಭದಲ್ಲಿ ವಸೂಲಿ ಸಹಾಯಕರಾದ ಅಶೋಕ ಹೆಗಡೆ, ಸಿಬ್ಬಂದಿಗಳಾದ ಆನಂದ ಟೆಂಬರೆ, ರಾಜು ಪಾಟೀಲ, ವಿರುಪಾಕ್ಷಿ ಕಾಕೋಳಿ, ಬಾಳು ಸುತ್ತಾರ ಶ್ರವಣ ಹಲಗೆ, ಕೃಷ್ಣಾ ದವಡತೆ , ಪ್ರವೀಣ ರಾಯಣ್ಣವರ ಹಾಜರಿದ್ದರು.