LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Belagavi

ರಾಜಕಾರಣಿಗಳಿಗೂ ನಿವೃತ್ತಿಯ ವಯಸ್ಸನ್ನು ನಿಗದಿ ಮಾಡಬೇಕು : ಬಾಲಚಂದ್ರ ಜಾರಕಿಹೊಳಿ

        ಮೂಡಲಗಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ


ಮೂಡಲಗಿ : ರಾಜ್ಯದಲ್ಲಿರುವ ಕೆಲವು ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು, ನಾವೆಲ್ಲ ತಲೆ ತಗ್ಗಿಸುವ ಸಂಗತಿಯಾಗಿದೆ ಎಂದು ಶಾಸಕ ಹಾಗೂ ಬೆಮುಲ್  ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ಕಳವಳ ವ್ಯಕ್ತಪಡಿಸಿದರು.
ಶನಿವಾರ, ತಾಲ್ಲೂಕಿನ ಪಟಗುಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಾ. ಸರ್ವಪಲ್ಲಿ ರಾಧಾಕೃ?ನ್ ಜನ್ಮದಿನಾಚರಣೆ ಪ್ರಯುಕ್ತ ಜರುಗಿದ ತಾಲ್ಲೂಕು ಮಟ್ಟದ  ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಇನ್ನು ಮುಂದೆಯಾದರೂ ಸರ್ಕಾರವು ರಾಜ್ಯದಲ್ಲಿನ  ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಟ್ಟು, ಅವರ ಗೌರವವನ್ನು ಕಾಪಾಡುವಂತೆ ಸರ್ಕಾರಕ್ಕೆ ಮನವಿಯನ್ನು ಮಾಡಿದರು. ಮಕ್ಕಳಿಗೆ ನೀಡುವ ಊಟದ ವ್ಯವಸ್ಥೆಯ ಅನುದಾನವನ್ನು ಬೇಕಾದರೆ, ಕಡಿತಗೊಳಿಸಿ. ಆದರೆ, ಶೌಚಾಲಯವನ್ನು ನಿರ್ಮಿಸಲು ಮಾತ್ರ ಮರೆಯಬೇಡಿ. ಅದು ಕಾಂಗ್ರೆಸ್ ಸರ್ಕಾರವೇ ಇರಲಿ. ಅಥವಾ ಬಿಜೆಪಿ ಸರ್ಕಾರವೇ ಬರಲಿ. ಮೊದಲು ಹೆಣ್ಣು ಮಕ್ಕಳ ಗೌರವವನ್ನು ಕಾಪಾಡುವ ಕೆಲಸವು ನಮ್ಮ ಸರ್ಕಾರದ್ದು ಎಂದು ಬೇಸರದಿಂದ ನುಡಿದರು.
ಪ್ರತಿ ವ?ವೂ ಮೂಡಲಗಿ ವಲಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುತ್ತ ಬರುತ್ತಿದ್ದೇವೆ. ಇದು ಶಿಕ್ಷಕರ ಜಾತ್ರೆಯಾಗಿ ಕಂಡುಬರುತ್ತಿದೆ. ನಮ್ಮ ವಲಯವು ಪ್ರತಿ ವ? ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆಯನ್ನು ಮಾಡುತ್ತ ಬರುತ್ತಿದೆ. ಶಿಕ್ಷಕರ ಪಾತ್ರ ಇದರಲ್ಲಿ ಬಹು ಮುಖ್ಯವಾಗಿದೆ. ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟವು ದಿನೇ ದಿನೇ ಸುಧಾರಿಸುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮೂಡಲಗಿ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸುತ್ತಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸುತ್ತಿರುವ ಶಿಕ್ಷಕರ ಬಳಗಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು.
ಶಿಕ್ಷಕರು ಸೇರಿ ಅನೇಕ ಇಲಾಖೆಗಳ ನೌಕರರು ತಮ್ಮ ೬೦ ನೇ ವ?ಕ್ಕೆ ಸೇವೆಯಿಂದ ನಿವೃತ್ತರಾಗುತ್ತಾರೆ. ಆದರೆ, ಈ ನಿವೃತ್ತ ನಮ್ಮಂತಹ ಚುನಾಯಿತ ಪ್ರತಿನಿಧಿಗಳಿಗೂ ಅನ್ವಯವಾಗಬೇಕು. ವಿಧಾನಸಭಾ, ಪರಿ?ತ್ತು, ಮತ್ತು ಸಂಸತ್ತ ಸದನದ ಸದಸ್ಯರಿಗೂ ನಿವೃತ್ತಿಯ ಕುರಿತು ಆಂದೋಲನ ನಡೆಯಬೇಕಾಗಿದೆ. ಇದು ನಮ್ಮಿಂದಾನೇ ಆರಂಭವಾಗಲಿ ಎಂದು ಹೇಳಿದರು. ೮೦- ೯೦ ವ? ದಾಟಿದರೂ ಇನ್ನೂ ರಾಜಕಾರಣಿದಲ್ಲಿರುತ್ತಾರೆ. ನಾವೇ ಇದರಿಂದ ಹಿಂದೆ ಸರಿದು ಯುವಕರಿಗೆ ಅವಕಾಶವನ್ನು ಮಾಡಿಕೊಡಬೇಕು. ನಮಗೂ ವಿಶ್ರಾಂತ ಜೀವನ ಬೇಕಾಗಿದೆ. ರಾಜಕಾರಣಿಗಳಿಗೂ ನಿವೃತ್ತಿಯ ವಯಸ್ಸನ್ನು ನಿಗದಿ ಮಾಡಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಶಿಕ್ಷಕರನ್ನು ಶಾಸಕರು ಸತ್ಕರಿಸಿದರು. ವಿವಿಧ ಪ್ರತಿ?ನಗಳಿಂದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಸುಣಧೋಳಿ ಮಠದ ಶಿವಾನಂದ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ರಾಮನಗೌಡ ಪಾಟೀಲ, ತಹಶೀಲ್ದಾರ ಶ್ರೀಶೈಲ ಗುಡಮೆ, ಮೂಡಲಗಿ ವಲಯ  ಶಿಕ್ಷಣಾ?ಧಿಕಾರಿ ಪ್ರಕಾಶ ಹಿರೇಮಠ, ಎಮ್ ಜಿ. ಗಾಣಿಗೇರ, ಗ್ರಾ.ಪಂ.ತಾ.ಪಂ.ಜಿ.ಪಂ. ಪುರಸಭೆ, ಪ.ಪಂ. ಮಾಜಿ ಸದಸ್ಯರು,  ವಿವಿಧ ಇಲಾಖೆಗಳ ಆಹ್ವಾನಿತ ಗಣ್ಯರು,  ಸಹಕಾರಿ ಮುಖಂಡರು, ಶಿಕ್ಷಣ ಇಲಾಖೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪಟಗುಂದಿ ಗ್ರಾಮದ ಸಮಸ್ತ ಗುರು- ಹಿರಿಯರು,   ಎಸ್ಡಿಎಂಸಿ ಆಡಳಿತ ಮಂಡಳಿ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಮತ್ತೆ ₹9 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್*34 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಶೀಘ್ರ ಚಾಲನೆ: ಸಚಿವ ಬಸವರಾಜ ರಾಯರಡ್ಡಿಧರ್ಮಸ್ಥಳ ಯೋಜನೆ ವತಿಯಿಂದ ಉಚಿತ ಅರೋಗ್ಯ ತಪಾಸಣೆ ಶಿಬಿರ.ವಿಶ್ವ ಪಿಜಿಯೋಥೆರಪಿ ದಿನ ಆಚರಣೆ.ಘಟಪ್ರಭಾದಲ್ಲಿ ಗಣೇಶ ಹಬ್ಬದ  ಪೂರ್ವಭಾವಿ ಸಭೆಜೀನ್ಸ್ ರಫ್ತುದಾರರಿಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ನೆರವು: ಜಂಟಿ ನಿರ್ದೇಶಕ ಬಿ. ವಿಠಲರಾಜದೇವರಹಿಪ್ಪರಗಿ, ತಾಳಿಕೋಟಿ ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಲು ಸೆ.೮ರಂದು ಬೃಹತ್ ಪ್ರತಿಭಟನೆಭಕ್ತಿ ಭಾವದಿಂದ ಶ್ರೀ ವರಬಸವೇಶ್ವರ ಸ್ವಾಮಿ ರಥೋತ್ಸವಎತ್ತಿನ ಬೂದಿಹಾಳ ಗ್ರಾಮದ ಯುವಕರು ಕರವೇ ಶಿವರಾಮೇಗೌಡ ಬಣ ಸೇರ್ಪಡೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹ: ಬಳ್ಳಾರಿಯಲ್ಲಿ ಗುತ್ತಿಗೆ ಕಾರ್ಮಿಕರ ಪತ್ರ ಚಳುವಳಿ