LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಎತ್ತಿನ ಬೂದಿಹಾಳ ಗ್ರಾಮದ ಯುವಕರು ಕರವೇ ಶಿವರಾಮೇಗೌಡ ಬಣ ಸೇರ್ಪಡೆ 

ಬಳ್ಳಾರಿ. ಸೆ. 08:: ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ದ ತಾಲೂಕಿನ ಎತ್ತಿನಬೂದಿ ಹಾಳ್  ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಅಜಯ್ ಅವರನ್ನು ನೇಮಕ ಮಾಡಲಾಯಿತು.
 ಇಂದು ಭಾನುವಾರದಂದು ನಗರದ ಪಾರ್ವತಿ ನಗರದಲ್ಲಿರುವ  ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಎತ್ತಿನ ಬೂದಿಹಾಳ್  ಗ್ರಾಮದ ಹಲವು ಕನ್ನಡ ಕಾರ್ಯಕರ್ತರನ್ನು ವೇದಿಕೆಗೆ ಸ್ವಾಗತಿಸಿ  ಎಲ್ಲರ ಸಮ್ಮುಖದಲ್ಲಿ ವಿಜಯನಗರ ಮತ್ತು ಬಳ್ಳಾರಿ  ಜಿಲ್ಲಾಧ್ಯಕ್ಷ ಕುರಿಹಟ್ಟಿ ರಾಜಣ್ಣ (ರಾಜಶೇಖರ್ ) ಅಜಯ್ ಅವರನ್ನು ಗ್ರಾಮ ಘಟಕದ ಅಧ್ಯಕ್ಷ ಎಂದು ಘೋಷಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ರಾಜಣ್ಣ, ಕೇವಲ ಕನ್ನಡ ಶಾಲು ಹಾಕಿಕೊಂಡು  ತೋರಿಕಿಗಾಗಿ ಮಾತ್ರ ರಕ್ಷಣಾ ವೇದಿಕೆಯ ಕಾರ್ಯಕರ್ತರ ಆಗಬಾರದು ಕನ್ನಡ ನಾಡು ನುಡಿಯ ಬಗ್ಗೆ ಸದಾ ಕಾಳಜಿಯನ್ನು ವಹಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ರಾಜ್ಯದ ಹಿತಾಸಕ್ತಿಗೆ ಕನ್ನಡ ಭಾಷೆಗೆ ಧಕ್ಕೆ  ಬಂದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಲು ಹಿಂಜರಿಯಬಾರದು ಮತ್ತು ಸಮಾಜದಲ್ಲಿ ಅಮಾಯಕ ಜನರಿಗೆ ಅನ್ಯಾಯವಾದಲ್ಲಿ ನ್ಯಾಯ ಒದಗಿಸಲು ಹೋರಾಟಕ್ಕೆ  ಸಿದ್ಧರಾಗಿರಬೇಕು, ವೇದಿಕೆಯ ನಿಯಮ ನಿಬಂಧನೆಗಳನ್ನು ತತ್ವ ಸಿದ್ಧಾಂತಗಳನ್ನು  ಮೆಚ್ಚಿಕೊಂಡು ಸ್ವ ಇಚ್ಛೆಯಿಂದ ವೇದಿಕೆಗೆ ಸೇರ್ಪಡೆಗೊಂಡಿರುವ ಎಲ್ಲರೂ ನಿಯಮ ನಿಬಂಧನೆಗಳನ್ನು ಮೀರದೆ ನಡೆದುಕೊಳ್ಳಬೇಕು  ಎಂದು ಕರೆ ನೀಡಿದರು. ಜೊತೆಗೆ ಯಾರು ಸಹ ವೇದಿಕೆ ಹೆಸರನ್ನು ದುರುಪಯೋಗ ಮಾಡಿಕೊಳ್ಳಬಾರದು ಅನ್ಯಾಯ ಕಂಡಲ್ಲಿ ಹಿಂದೂ ಮುಂದು ನೋಡದೆ ಪ್ರತಿಭಟನೆಗೆ ಮುಂದಾಗಬೇಕು ಎಂದು ನೂತನ ಜಿಲ್ಲಾಧ್ಯಕ್ಷ ಅಜಯ್ ಮತ್ತು ಗ್ರಾಮ ಘಟಕದ ಇತರ ಪದಾಧಿಕಾರಿಗಳಿಗೆ  ತಿಳಿಸಿದರು.
 ಈ ಸಂದರ್ಭದಲ್ಲಿ ನೂತನವಾಗಿ ಗ್ರಾಮ ಘಟಕ ಜಿಲ್ಲಾಧ್ಯಕ್ಷರಾಗಿ ನೇಮಕವಾದ ಅಜಯ್ ಮಾತನಾಡಿ, ಜಿಲ್ಲಾಧ್ಯಕ್ಷ ರಾಜಣ್ಣನವರು ನನ್ನನ್ನು ಒಂದೇ ಮಾತಿಗೆ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ನನ್ನ ಮೇಲೆ ಅವರು ಹೊಂದಿರುವ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡು ವೇದಿಕೆಯನ್ನು ನಮ್ಮ ಗ್ರಾಮದ ಅಕ್ಕ ಪಕ್ಕದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಂಘಟಿಸುವುದಾಗಿ ತಿಳಿಸಿದರು.
 
 ಇದೇ ಸಂದರ್ಭದಲ್ಲಿ ಗ್ರಾಮ ಘಟಕದ ಗೌರವ ಅಧ್ಯಕ್ಷರನ್ನಾಗಿ ನಾಗಭೂಷಣ್, ಉಪಾಧ್ಯಕ್ಷರಾಗಿ ತಳಾರಿ ಬಸಪ್ಪ ಖಜಾಂಚಿಯಾಗಿ ಕೆ ಬಸಪ್ಪ ಇವರುಗಳನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಉಪಾಧ್ಯಕ್ಷರಾದ ಮಾರಣ್ಣ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಟಗಿ ಸೂರಿ ರಾಜಶೇಖರ್ ರಾಜು ಉಮೇಶ್ ಜಡೆಪ್ಪ ಮೊಕ ಮಲ್ಲಯ್ಯ ಕಚೇರಿ ಕಾರ್ಯದರ್ಶಿ ನರೇಶ್ ವಿಜಯಕುಮಾರ್ ರಾಮು ಈಶ್ವರ್ ಮತ್ತು  ಗ್ರಾಮ ಘಟಕದ ಸದಸ್ಯರಾದ ನಂದೀಶ ಸ್ವಾಮಿ ಗಣೇಶ್ ವಿಜಯ ಭಾಸ್ಕರ್ ನಾಗೇಶ್ ರಾಮಾಂಜನಿ ಭರತ್ ಕುಮಾರ್ ವೀರಭದ್ರ ಸ್ವಾಮಿ ಅನಿಲ್ ನಿಖಿಲ್ ಸೇರಿದಂತೆ ಇತರರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಮತ್ತೆ ₹9 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್*34 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಶೀಘ್ರ ಚಾಲನೆ: ಸಚಿವ ಬಸವರಾಜ ರಾಯರಡ್ಡಿಧರ್ಮಸ್ಥಳ ಯೋಜನೆ ವತಿಯಿಂದ ಉಚಿತ ಅರೋಗ್ಯ ತಪಾಸಣೆ ಶಿಬಿರ.ವಿಶ್ವ ಪಿಜಿಯೋಥೆರಪಿ ದಿನ ಆಚರಣೆ.ಘಟಪ್ರಭಾದಲ್ಲಿ ಗಣೇಶ ಹಬ್ಬದ  ಪೂರ್ವಭಾವಿ ಸಭೆಜೀನ್ಸ್ ರಫ್ತುದಾರರಿಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ನೆರವು: ಜಂಟಿ ನಿರ್ದೇಶಕ ಬಿ. ವಿಠಲರಾಜದೇವರಹಿಪ್ಪರಗಿ, ತಾಳಿಕೋಟಿ ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಲು ಸೆ.೮ರಂದು ಬೃಹತ್ ಪ್ರತಿಭಟನೆಭಕ್ತಿ ಭಾವದಿಂದ ಶ್ರೀ ವರಬಸವೇಶ್ವರ ಸ್ವಾಮಿ ರಥೋತ್ಸವಎತ್ತಿನ ಬೂದಿಹಾಳ ಗ್ರಾಮದ ಯುವಕರು ಕರವೇ ಶಿವರಾಮೇಗೌಡ ಬಣ ಸೇರ್ಪಡೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹ: ಬಳ್ಳಾರಿಯಲ್ಲಿ ಗುತ್ತಿಗೆ ಕಾರ್ಮಿಕರ ಪತ್ರ ಚಳುವಳಿ