LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಧರ್ಮಸ್ಥಳ ಯೋಜನೆ ವತಿಯಿಂದ ಉಚಿತ ಅರೋಗ್ಯ ತಪಾಸಣೆ ಶಿಬಿರ.

ಘಟಪ್ರಭಾ. ಸಮೀಪದ  ಧೂಪದಾಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಭಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದಲ್ಲಿ ಬಡರೋಗಿಗಳಿಗೆ ಎಲ್ಲ ತರಹದ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ,ಬಿಪಿ ಶುಗರ್ ತಪಾಸಣೆ ಶಿಬಿರ  ನಡೆಸಲಾಯಿತು.
      ಕರವೇ ರೈತ ಘಟಕ ಜಿಲ್ಲಾಧ್ಯಕ್ಷ ರೆಹಮಾನ್ ಮೊಕಾಶಿ ಮಾತನಾಡುತ್ತಾ ಧರ್ಮಸ್ಥಳ ಮಂಜುನಾಥೇಶ್ವರ ಹೆಸರಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಹಮ್ಮಿಕೊಳ್ಳುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ, ಇವತ್ತಿನ ಈ ಕಾಲದಲ್ಲಿ ಹೆಣ್ಣು ಮಕ್ಕಳು ಆರ್ಥಿಕ ಸ್ವಾವಲಂಬಿ ಆಗಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಹಳಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದು ಇವು ಜನೋಪಕಾರಿ ಯೋಜನೆ ಆಗಿವೆ ಎಂದರು.
      ಕರವೇ ತಾಲ್ಲೂಕು ಅದ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ ಕರವೇ ರೈತ ಘಟಕ ತಾಲ್ಲೂಕು ಅದ್ಯಕ್ಷ ರವಿ ನಾವಿ ಮಾತನಾಡಿ ಇವತ್ತಿನ ಕಾಲದಲ್ಲಿ ಬೆಳೆಗಳಿಗೆ ಔಷಧ ಸಿಂಪಡಣೆಯಿಂದ ಬಿಪಿ ಶುಗರ್ ಅಂತಹ ರೋಗಗಳು ಬರುತ್ತಿರುವುದರಿಂದ ಎಲ್ಲರೂ ಆರೋಗ್ಯ ತಪಾಸಣಾ ಮಾಡಿಕೊಳ್ಳಬೇಕು ಎಂದರು.
      ಅಧ್ಯಕ್ಷತೆಯನ್ನು ಲಾಲಬೀ ಅಂಕಲಗಿ ಅವರು ವಹಿಸಿದ್ದರು.
    ಈ ಸಂದರ್ಭದಲ್ಲಿ  ರಾಜು ಗಾಡಿವಡ್ಡರ್,  ಯೋಜನಾಧಿಕಾರಿಗಳಾದ ರೋಹಿತ್ ಹೆಚ್, ಕರಿಯಪ್ಪ ಧರ್ಮಟ್ಟಿ, ಜಯರತ್ನ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಅಮೃತ್ ಪಾಟೀಲ, ವಿಠ್ಠಲ ಗಾಡಿವಡ್ಡರ,ಆರೋಗ್ಯ ಇಲಾಖೆಯ ಸಿ ಎಚ್ ಓ ರಾಜು ಕಣಗಲ್ , ರಾಯಪ್ಪ ಬಂಡಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಾಂತ ಅಂಗರಗಟ್ಟಿ, ನಿಧಿ ನಿರ್ಮಲ, ಶ್ರೀದೇವಿ,  ಆಶಾ ಕಾರ್ಯಕರ್ತರು ಧರ್ಮಸ್ಥಳ ಸಂಘದ ಪದಾಧಿಕಾರಿಗಳು   ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಮತ್ತೆ ₹9 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್*34 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಶೀಘ್ರ ಚಾಲನೆ: ಸಚಿವ ಬಸವರಾಜ ರಾಯರಡ್ಡಿಧರ್ಮಸ್ಥಳ ಯೋಜನೆ ವತಿಯಿಂದ ಉಚಿತ ಅರೋಗ್ಯ ತಪಾಸಣೆ ಶಿಬಿರ.ವಿಶ್ವ ಪಿಜಿಯೋಥೆರಪಿ ದಿನ ಆಚರಣೆ.ಘಟಪ್ರಭಾದಲ್ಲಿ ಗಣೇಶ ಹಬ್ಬದ  ಪೂರ್ವಭಾವಿ ಸಭೆಜೀನ್ಸ್ ರಫ್ತುದಾರರಿಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ನೆರವು: ಜಂಟಿ ನಿರ್ದೇಶಕ ಬಿ. ವಿಠಲರಾಜದೇವರಹಿಪ್ಪರಗಿ, ತಾಳಿಕೋಟಿ ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಲು ಸೆ.೮ರಂದು ಬೃಹತ್ ಪ್ರತಿಭಟನೆಭಕ್ತಿ ಭಾವದಿಂದ ಶ್ರೀ ವರಬಸವೇಶ್ವರ ಸ್ವಾಮಿ ರಥೋತ್ಸವಎತ್ತಿನ ಬೂದಿಹಾಳ ಗ್ರಾಮದ ಯುವಕರು ಕರವೇ ಶಿವರಾಮೇಗೌಡ ಬಣ ಸೇರ್ಪಡೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹ: ಬಳ್ಳಾರಿಯಲ್ಲಿ ಗುತ್ತಿಗೆ ಕಾರ್ಮಿಕರ ಪತ್ರ ಚಳುವಳಿ