ಬಳ್ಳಾರಿ , 26 : ಗ್ರಂಥಾಲಯಕ್ಕೆ ಪ್ರತಿದಿನ ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ನೂರಾರು ಜನ ಓದಲು ಬರುತ್ತಾರೆ. ಅದರಲ್ಲೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಬರುತ್ತಾರೆ. ನೇಮಕಾತಿಗಳು ಬಹಳ ಸಮಯದಿಂದಲೂ ನಡೆದಿರಲಿಲ್ಲ.
ಇತ್ತೀಚಿಗೆ ನಡೆದ ಹಲವಾರು ಯುವಜನರ ಹೋರಾಟಗಳ ಪ್ರತಿಫಲವಾಗಿ ಇಂದು ನೇಮಕಾತಿಗಳಾಗುತ್ತಿರುವುದರಿಂದ ಅಭ್ಯರ್ಥಿಗಳು ತಯಾರಿಯನ್ನು ನಡೆಸಬೇಕಿದೆ. ಮನೆಗಳಲ್ಲಿ ಓದುವ ವಾತಾವರಣ ಇಲ್ಲದ ಕಾರಣ, ನಗರದ ಗ್ರಂಥಾಲಯಗಳಲ್ಲಿ ಬಂದು ಓದುತ್ತಿರುವ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕ ಗ್ರಂಥಾಲಯಗಳು ಪ್ರತಿ ಸೋಮವಾರ, ಎರಡನೇ ಮಂಗಳವಾರ, ನಾಲ್ಕನೇ ಶನಿವಾರ ಮತ್ತು ಸರ್ಕಾರಿ ರಜೆಗಳು ಹೀಗೆ ಹಲವಾರು ರಜೆಗಳಿರುವುದರಿಂದ ಉದ್ಯೋಗಾಕಾಂಕ್ಷಿಗಳು ನಿರಂತರ ಓದುವ ಅಭ್ಯಾಸಕ್ಕೆ ಸಮಸ್ಯೆ ಉಂಟಾಗುತ್ತದೆ. ಇಲ್ಲವಾದಲ್ಲಿ ಖಾಸಗಿ ಗ್ರಂಥಾಲಯಕ್ಕೆ ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ಕೊಟ್ಟು ಓದಬೇಕಿದೆ. ಉದ್ಯೋಗವನ್ನು ಅರಸುತ್ತಿರುವ ವಿದ್ಯಾರ್ಥಿಗಳಿಗೆ ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವುದು ಕಷ್ಟ.. ಹಾಗಾಗಿ ರಜೆ ದಿನಗಳಲ್ಲೂ ಸಾರ್ವಜನಿಕ ಗ್ರಂಥಾಲಯ ತೆರೆದರೆ ಸಹಾಯವಾಗುತ್ತದೆ. ಹಾಗಾಗಿ ಈ ಕೆಳಗಿನ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿ
ಈ ಸಂದರ್ಭದಲ್ಲಿ ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್, ಸದಸ್ಯರಾದ ಪ್ರಮೋದ್ .E .H ಮತ್ತು ಸಿದ್ದು ಮತ್ತು ವಿದ್ಯಾರ್ಥಿಗಳಾದ ರಂಗಸ್ವಾಮಿ, ಹನುಮೇಶ, ಯುವರಾಜ್ .ಕೆ, ಶಿವಶಂಕರ, ಮೋಹನ ಇತರರು ಭಾಗವಹಿಸಿದ್ದರು.