Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ಡಿ 15ರವರೆಗೆ ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರು ಬಿಡಿ : ಪ್ರತಾಪ್ ರೆಡ್ಡಿ ಮನವಿ 

 ಬಳ್ಳಾರಿ ನ. 09:ಬಳ್ಳಾರಿ ಜಿಲ್ಲೆಯ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳು ಕೈ ಸೇರಲು ಡಿಸೆಂಬರ್ ತಿಂಗಳ 15ನೇ ತಾರೀಖಿನವರೆಗೆ ನೀರಿನ ಅಗತ್ಯವಿದೆ ಕಾರಣ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಈಗ ಆರಂಭಿಸಿರುವಂತೆ ಆನ್ ಅಂಡ್ ಆಫ್ ಪದ್ಧತಿಯಲ್ಲಿ ಡಿಸೆಂಬರ್ 15ರವರೆಗೆ ನೀರು ಹರಿಸಬೇಕೆಂದು ಮಾಜಿ ಬುಡ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಮನವಿ ಮಾಡಿದರು.
 ಅವರು ಇಂದು ನಗರದ ನಕ್ಷತ್ರ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ತುಂಗಭದ್ರಾ ಮಂಡಳಿಯ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದ ಜೊತೆ ಮಾತನಾಡಿ ನೀರನ್ನು ಬಳಸಿಕೊಳ್ಳಲು ಅನುಮತಿಯನ್ನು ಪಡೆದುಕೊಂಡು ಜಿಲ್ಲೆಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ನೀರನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕು ಇದರಿಂದ ಲಕ್ಷಾಂತರ ರೈತರ ಬೆಳೆಯ ಫಸಲು ಕೈಗೆ ಬಂದು ರೈತರು ನಷ್ಟ ಹೊಂದುವುದು ತಪ್ಪಿಸಬಹುದು ಎಂದು ಪ್ರತಾಪ್ ರೆಡ್ಡಿ ಅಭಿಪ್ರಾಯಪಟ್ಟರು.
 ಪೆಟ್ರೋಲ್ ನಲ್ಲಿ 10 ರಿಂದ 15% ಏತೇನಾಲ್  ಬಳಸಲು ಅವಕಾಶವಿದ್ದರೂ  ಪೆಟ್ರೋಲಿಯಂ ಕಂಪನಿಗಳು 30ಕ್ಕಿಂತಲೂ ಅಧಿಕ ಪಟ್ಟು ಬೆರೆಸುತ್ತಿದ್ದಾರೆ ಇದರಿಂದ ವಾಹನಗಳ ಮೈಲೇಜ್ ಪ್ರಮಾಣ ಕಡಿಮೆಯಾಗಿ ವಾಹನಗಳ ಇಂಜನಿಗೂ ಸಹ ಒತ್ತಡ ಬೀಳುತ್ತದೆ ಇದನ್ನು ಪತ್ತೆ ಹಚ್ಚಿದ ಆಹಾರ ನಾಗರಿಕ ಸರಬರಾಜು ಸಚಿವ ಹರ್ಷದ್ ಅಭಿನಂದನ ಅರ್ಹರು ಎಂದ ರೆಡ್ಡಿ ಇತ್ತೀಚೆಗೆ ಹೋಟೆಲ್ ನಲ್ಲಿ ಆಹಾರದ ಗುಣಮಟ್ಟ ಕಡಿಮೆಯಾಗುತ್ತಿದೆ ಹಲವು ದಿನಗಳ ಹಲವು ತಿಂಗಳುಗಳ ಮಾಂಸವನ್ನು ಶೇಖರಿಸಿಟ್ಟು ಗ್ರಾಹಕರಿಗೆ ಕಳಪೆ ಗುಣಮಟ್ಟದ ಆಹಾರವನ್ನು ಒದಗಿಸುತ್ತಾರೆ ಇದರಿಂದ ಗ್ರಾಹಕರ ಆರೋಗ್ಯದಲ್ಲಿ ಏರುಪೇರಾಗಿ ಹದಗೆಡುವ ಸಂದರ್ಭವಿರುತ್ತದೆ, ಹಣಕ್ಕೆ ತಕ್ಕ ಗುಣಮಟ್ಟದ ಆಹಾರವನ್ನು ಒದಗಿಸಲು ಕ್ರಮ ಕೈಗೊಂಡಿರುವ ಆರೋಗ್ಯ ಸಚಿವರ ಕ್ರಮ ಶ್ಲಾಘನೀಯ  ಎಂದರು.
 ಕೆ ಎಫ್ ಸಿ ಮತ್ತು ಇತರ ವಿದೇಶಿ ಕಂಪನಿಗಳ ಮಾಂಸ ಖಾದ್ಯಗಳು ಹಲವಾರು ತಿಂಗಳ ಹಳೆಯ ಸ್ಟಾಕ್ ಆಗಿದ್ದು ಇದನ್ನು ಹಲವು ರಾಸಾಯನಿಕಗಳ ಮಿಶ್ರಣದಿಂದ ಬೇಗನೆ ಕೆಡದಂತೆ ಶೇಖರಣೆ ಮಾಡಿ ಇಟ್ಟುಕೊಂಡಿರುತ್ತಾರೆ ಇದನ್ನು ಸೇವಿಸಿದಾಗ ಆರೋಗ್ಯದ ಮೇಲೆ ಗಂಭೀರವಾದ ದುಷ್ಪರಿಣಾಮ ಉಂಟಾಗುತ್ತದೆ ಇಂತಹ ಆರ ಪದಾರ್ಥಗಳನ್ನು ಬ್ಯಾನ್ ಮಾಡಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮದುರ್ಗ: ₹3.80 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಶೋಕ ಪಟ್ಟಣ ಭೂಮಿಪೂಜೆವಿವಿಧ ಸಂಸ್ಥೆಗಳಲ್ಲಿ ದೀಪಾವಳಿ ಲಕ್ಷ್ಮೀ ಪೂಜೆ: ಸಿಬ್ಬಂದಿಗೆ ಲಕ್ಷ್ಮೀ ಹೆಬ್ಬಾಳಕರ್ ಶುಭಾಶಯಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ : ಜಿ.ಪಿ. ಘೋರ್ಪಡೆಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಮತ್ತು ಕವಿಗೋಷ್ಠಿಗಳಿಗಾಗಿ ಲೇಖನಗಳ, ಕವಿತೆಗಳ ಆಹ್ವಾನ.      ರಾಯಬಾಗ: ಹೊನಲು ಬೆಳಕಿನ ರಾಷ್ಟ್ರಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ತೆರೆ – ದೇಶಿ ಕ್ರೀಡೆಗಳ ರಕ್ಷಣೆಗೆ ಪಿ. ರಾಜೀವ್ ಕರೆಹುನಗುಂದ: ದೀಪಾವಳಿ ಸಂಭ್ರಮದ ನಡುವೆ ಬೆಲೆ ಏರಿಕೆ ಬಿಸಿ - ತತ್ತರಿಸಿದ ಜನಸಾಮಾನ್ಯರುಹುನಗುಂದ ಎಟಿಎಂಗಳಲ್ಲಿ ಹಣದ ಕೊರತೆ; ದೀಪಾವಳಿ ಹಬ್ಬಕ್ಕೆ ಸಾರ್ವಜನಿಕರ ಪರದಾಟಕುಡುತಿನಿ ಕೈಗಾರಿಕಾ ಪ್ರದೇಶದ ಭೂಮಿಯನ್ನು ಅಕ್ರಮವಾಗಿ ಉತ್ತಮ ಗಾಲ್ವಾ ಕಂಪನಿಗೆ ಮಾಡಿರುವ ವರ್ಗಾವಣೆ ರದ್ದು ಪಡಿಸಲು ಭೂ ಸಂತ್ರಸ್ಥರ ಅಗ್ರಹಅಸುಂಡಿ ಹೊನ್ನೂರಪ್ಪ ಅವರಿಂದ  ನಾಮ ರತ್ನಯ್ಯ ಮತ್ತು ನಾಮ ಸಾವಿತ್ರಮ್ಮ  ಸ್ಮರಣಾರ್ಥ  ಆಸ್ಪತ್ರೆಗೆ  ಧನಸಹಾಯ ನವಂಬರ್ 14, 15 ರಂದು ಬಳ್ಳಾರಿ ಜಿಲ್ಲಾ 23 ನೇ ಕನ್ನಡ ಸಾಹಿತ್ಯ ಸಮ್ಮೇಳನ : ನಿಷ್ಠಿ ರುದ್ರಪ್ಪ