Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ:ಜೈಲಿನಲ್ಲಿದ್ದುಕೊಂಡೆ ಸ್ಫೋಟಕ್ಕೆ ಸಂಚು - ಸತ್ಯ ಬಾಯಿಬಿಟ್ಟ ಮುನೀರ್

ಬೆಂಗಳೂರು, ಏಪ್ರಿಲ್​ 08: ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ  ಪ್ರಕರಣದಲ್ಲಿ ಬಂಧಿತ ಶಂಕಿತ ಉಗ್ರ ಮಾಜ್​ ಮುನೀರ್ ಕೈವಾಡವಿರುವುದು ಧೃಡವಾಗಿದೆ. ಶಂಕಿತ ಉಗ್ರ ಮಾಜ್​ ಮುನೀರ್ ಎನ್​ಐಎ  ಕಸ್ಟಡಿಯಲ್ಲಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ.

ಮಾರ್ಚ್​ 1 ರಂದು ರಾಮೇಶ್ವರಂ ಕೇಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಇದಾದ ಬೆನ್ನಲ್ಲೇ ಎನ್​ಐಎ ಅಧಿಕಾರಿಗಳು ಮಾರ್ಚ್​ 4ರ ರಾತ್ರಿ ಪರಪ್ಪನ ಅಗ್ರಹಾರ ಸೇರಿದಂತೆ ದೇಶದ 18 ಜೈಲುಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಪರಿಶೀಲಿಸಿದ್ದರು. ಈ ಸಮಯದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಶಂಕಿತ ಉಗ್ರ ಮಾಜ್​ ಮುನೀರ್​ನನ್ನು ಎನ್​ಐಎ ಅಧಿಕಾರಿಗಳು ಎಂಟು ದಿನಗಳ ಕಾಲ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.

ಎನ್​ಐಎ ಅಧಿಕಾರಿಗಳು ಮಾಜ್ ಮುನೀರ್ ಇದ್ದ ಜೈಲು ಕೋಣೆಯನ್ನು ತಪಾಸಣೆ ನಡೆಸಿದಾಗ ನೋಟ್ ಬುಕ್ ಒಂದರಲ್ಲಿ ಕೆಲವು ಕೋಡ್ ವರ್ಡ್‌ ಬರೆಯಲಾಗಿತ್ತು. ಇವುಗಳನ್ನು ಡಿಕೋಡ್ ಮಾಡಿದಾಗ ಎನ್​ಐಎ ಅಧಿಕಾರಿಗಳಿಗೆ, ಕೆಫೆ ಸ್ಫೋಟ ಸಂಬಂಧ ಲಿಂಕ್ ಲಭ್ಯವಾಗಿತ್ತು. ಮಾಜ್ ಮುನೀರ್​ ಜೈಲಿನಲ್ಲಿದ್ದುಕೊಂಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದನು ಎಂಬುವುದು ಬಯಲಾಯಿತು.

ಮಾಜ್​ ಮುನೀರ್​ ವಿಚಾರಣೆ ನಡೆಸಿದಾಗ ಮುಜಾಮಿಲ್​ ಷರೀಫ್​ನ ಕೈವಾಡವಿರುವುದೂ ತಿಳಿಯಿತು. ಕೂಡಲೆ ಎನ್​ಐಎ ಅಧಿಕಾರಿಗಳು ಮುಜಾಮಿಲ್​ ಷರೀಫ್​ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದರು. ಆಗ ಮುಜಾಮಿಲ್​ ಷರೀಫ್​ ಮಾಜ್​ ಮುನೀರ್​ ಕೈವಾಡದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದನು. ಬಳಿಕ ಎನ್​ಐಎ ಅಧಿಕಾರಿಗಳು ಮಾಜ್​ ಮುನೀರ್​ನನ್ನೂ ಬಂಧಿಸಿದರು.

ಮಾಜ್​ ಮುನೀರ್​ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು. ಈತ ಎಂಜಿನಿಯರ್​ ಪದವಿಧರನಾಗಿದ್ದಾನೆ. ಈತನು ಕೆಲವು ವರ್ಷಗಳ ಹಿಂದೆ ನಡೆದ ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಜಾಮೀನು ಪಡೆದುಕೊಂಡು ಹೊರ ಬಂದಿದ್ದನು. ಅನಂತರ ಶಿವಮೊಗ್ಗ ಪ್ರಾಯೋಗಿಕ ಸ್ಫೋಟ ನಡೆಸಿದ್ದನು. ಈ ಪ್ರಕರಣದಲ್ಲಿ ಬಂಧಿಸಿದಾಗ ಐಸಿಸ್​ ಸಂಚು ಬಹಿರಂಗವಾಗಿದೆ.

2013ರಲ್ಲಿ ತೀರ್ಥಹಳ್ಳಿಯಲ್ಲಿ ಆರಂಭವಾಗಿದ್ದ ದಾವಾ ಸೆಂಟರ್​ಗೆ ಮಾಜ್ ಮುನೀರ್ ಹೋಗಿದ್ದರು. ದಾವಾ ಸೆಂಟರ್ ಹೆಸರಿನಲ್ಲಿ ವ್ಯಾಟ್ಸಾಪ್ ಗ್ರೂಪ್ ಕೂಡ ಆರಂಭಿಸಿದ್ದನು. ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಲು ಆಸಕ್ತನಾಗಿದ್ದ ಮಾಜ್ 2016ರಲ್ಲಿ ಐಸಿಸ್ ಸಂಘಟನೆ ಸೇರಿಕೊಂಡಿದ್ದನು. ​2019ರಲ್ಲಿ CAA, NRC ವಿಚಾರವಾಗಿ ದೇಶದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆಗ ಮಾಜ್​ ಮುನೀರ್ Ummah News ಹೆಸರಿನಲ್ಲಿ ಟೆಲಿಗ್ರಾಂ ಗ್ರೂಪ್ ರಚಿಸಿದ್ದನು.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*