ಯರಗಟ್ಟಿ: ತಾಲೂಕಿನಾದ್ಯಂತ ರಕ್ಷಾ ಬಂದನ ಎಂದರೆ ಅಣ್ಣಾ ತಂಗಿಯ ನಡುವಿನ ಭರವಸೆಯ ಪ್ರೀತಿ ಅಂತಾನೇ ಹೇಳಬಹುದು , ತಂಗಿಯ ರಕ್ಷಣೆಯ ಭರವಸೆ ನೀಡುವುದೇ ಈ ಹಬ್ಬದ ವಿಷೇಶತೆ ಅಂತಾ ಹೇಳಬಹುದು.
ಶುಕ್ರವಾರ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ಸರಕಾರಿ ಮಾದರಿ ಶಾಲೆಯ, ಬಸವೇಶ್ವರ ಪ್ರೌಢಶಾಲೆ, ಕರ್ನಾಟಕ ಪ್ರಾಥಮಿಕ ಶಾಲಾ, ವಿಶ್ವಕರ್ಮ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಂದ ರಾಖಿ ಕಟ್ಟಿ ಆರತಿ ಬೆಳಗಿ ಸಿಹಿ ನೀಡುವುದರ ಮೂಲಕ ಅಣ್ಣ ತಂಗಿಯರ ನಡುವಿನ ಪ್ರೀತಿ ರಕ್ಷಣೆಗೆ ಈ ಕಾರ್ಯಕ್ರಮವು ಸಾಕ್ಷಿಯಾಯಿತು.