LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Dharwad

ನುಲಿಯ ಚಂದಯ್ಯನವರ ಕಾಯಕದ ಆದರ್ಶಗಳು ಸಮಾಜಕ್ಕೆ ದಾರಿದೀಪ: ಐ.ಜಿ. ಸನದಿ

ಧಾರವಾಡ,28 : ಶಿವಶರಣ ನುಲಿಯ ಚಂದಯ್ಯನವರ ವಚನಗಳು ಕಾಯಕದ ಮಹತ್ವ, ಪರಿಶ್ರಮ, ಒಗ್ಗಟ್ಟು, ವಿದ್ಯೆ ಮತ್ತು ಸ್ವಾಭಿಮಾನದ ಬದುಕಿನ ಕುರಿತು ಸಮಾಜಕ್ಕೆ ಮಹತ್ವದ ಸಂದೇಶ ನೀಡುತ್ತವೆ. ಶರಣರ ಜೀವನ ಮತ್ತು ವಚನಗಳನ್ನು ಅಧ್ಯಯನ ಮಾಡುವ ಮೂಲಕ ಅವರ ಆದರ್ಶಗಳನ್ನು ಇಂದಿನ ಬದುಕಿನಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಂಸದರು ಐ ಜಿ. ಸನದಿ ಅವರು ಹೇಳಿದರು.
 ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 
ಯಾರಾದರೂ ನಮ್ಮನ್ನು ಮೇಲೆತ್ತುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳದೆ, ನಮ್ಮ ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಮುಂದೆ ಬರಬೇಕು. ಜ್ಞಾನ, ವಿದ್ಯೆ ಅಥವಾ ಆಸ್ತಿ ಇಲ್ಲದಿದ್ದರೂ ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯ. ಹೀಗಾಗಿ ಯಾರೂ ತಮ್ಮನ್ನು ಸಣ್ಣವರು ಎಂದು ಭಾವಿಸಬಾರದು.
ಸಮಾಜದಲ್ಲಿ ಪ್ರತಿಯೊಬ್ಬರ ಕಾಯಕಕ್ಕೂ ತನ್ನದೇ ಆದ ಮಹತ್ವವಿದೆ. ಮನೆಯ ಸ್ವಚ್ಛತೆ ಕಾಪಾಡುವ ಕಸಬರಿಗೆ ಕಾರ್ಮಿಕರಿಂದ ಹಿಡಿದು ಪ್ರತಿಯೊಬ್ಬರೂ ಸಮಾಜದ ಸುಸ್ಥಿತಿಗೆ ಕೊಡುಗೆ ನೀಡುತ್ತಾರೆ. ಆದ್ದರಿಂದ ಯಾವುದೇ ಕೆಲಸವನ್ನು ಕೀಳಾಗಿ ಕಾಣದೆ, ಕಾಯಕ ಮಾಡುವ ಪ್ರತಿಯೊಬ್ಬರನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಒಗ್ಗಟ್ಟಿನ ಮಹತ್ವವನ್ನು ಹಗ್ಗದ ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳಬಹುದು. ಒಂದೊಂದು ನೂಲು ಪ್ರತ್ಯೇಕವಾಗಿದ್ದರೆ ಸುಲಭವಾಗಿ ತುಂಡಾಗಬಹುದು. ಆದರೆ ಹಲವು ನೂಲುಗಳು ಒಂದಾಗಿ ಸೇರಿದಾಗ ಗಟ್ಟಿಯಾದ ಹಗ್ಗವಾಗುತ್ತವೆ. ಅದೇ ರೀತಿ ಸಮಾಜದ ಜನರು ಪರಸ್ಪರ ಕೈಜೋಡಿಸಿ, ಒಬ್ಬರನ್ನೊಬ್ಬರು ಬೆಂಬಲಿಸಿದಾಗ ಸಮಾಜವು ಬಲಿಷ್ಠವಾಗುತ್ತದೆ.
ಸಮಾಜದ ಅಭಿವೃದ್ಧಿಗೆ ವಿದ್ಯೆ ಮತ್ತು ಜ್ಞಾನ ಅತ್ಯಂತ ಅಗತ್ಯ. ವಿದ್ಯೆಯಿಂದ ಜ್ಞಾನ ದೊರೆಯುತ್ತದೆ. ಜ್ಞಾನದಿಂದ ಆತ್ಮವಿಶ್ವಾಸ ಬೆಳೆದು, ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಶಕ್ತಿ ಬರುತ್ತದೆ. ಜೊತೆಗೆ ಪರಿಶ್ರಮ, ದುಡಿಮೆ ಮತ್ತು ಹೋರಾಟದ ಮನೋಭಾವವೂ ಇರಬೇಕು.“ಕಾಯಕವೇ ಕೈಲಾಸ” ಎಂಬ ಶರಣರ ಸಂದೇಶದಂತೆ ಯಾವುದೇ ಕಾಯಕವಾಗಿರಲಿ, ಅದನ್ನು ಗೌರವದಿಂದ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಶಿವಶರಣ ನುಲಿಯ ಚಂದಯ್ಯನವರು ಕಾಯಕಜೀವಿಯಾಗಿ ತಮ್ಮ ಬದುಕಿನ ಮೂಲಕವೇ ಸಮಾಜಕ್ಕೆ ಮಾದರಿಯಾದರು.ಶರಣರ ವಚನಗಳು ಕೇವಲ ಓದಲು ಅಥವಾ ಉತ್ಸವಗಳಲ್ಲಿ ನೆನಪಿಸಿಕೊಳ್ಳಲು ಮಾತ್ರ ಸೀಮಿತವಾಗಬಾರದು. ಅವುಗಳಲ್ಲಿರುವ ವಿಚಾರಗಳನ್ನು ಅರ್ಥಮಾಡಿಕೊಂಡು ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ನುಲಿಯ ಚಂದಯ್ಯನವರ ವಚನಗಳಲ್ಲಿರುವ ವಿಚಾರರತ್ನಗಳನ್ನು ಸಮಾಜಕ್ಕೆ ಹಂಚುವ ಮೂಲಕ ಅವರ ಆದರ್ಶಗಳನ್ನು ಮುಂದುವರಿಸಬೇಕು.
ಜ್ಞಾನ, ವಿದ್ಯೆ, ಪರಿಶ್ರಮ ಮತ್ತು ಒಗ್ಗಟ್ಟಿನಿಂದ ಶಕ್ತಿಶಾಲಿ ಸಮಾಜ ನಿರ್ಮಿಸಲು ಸಾಧ್ಯ. ನುಲಿಯ ಚಂದಯ್ಯನವರ ಕಾಯಕದ ಆದರ್ಶಗಳು ಈ ದಿಸೆಯಲ್ಲಿ ಎಲ್ಲರಿಗೂ ದಾರಿದೀಪವಾಗಬೇಕು ಎಂದು ಅವರು ಹೇಳಿದರು.
ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ  ಪ್ರಾಧಿಕಾರ ಅಧ್ಯಕ್ಷ ಶಾಕೀರ ಸನದಿ ಮಾತನಾಡಿ.ಕಾಯಕವನ್ನು ಕೇವಲ ಜೀವನೋಪಾಯವೆಂದು ಪರಿಗಣಿಸದೆ, ಸಮಾಜ ಸೇವೆಯ ಮನೋಭಾವದಿಂದ ಶ್ರದ್ಧೆಯಿಂದ ನಿರ್ವಹಿಸಬೇಕು. ಕಾಯಕದ ಜೊತೆಗೆ ಮಾನವೀಯತೆಯನ್ನು ಬೆಳೆಸಿಕೊಂಡಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ. ನುಲಿಯ ಚಂದಯ್ಯ ಸೇರಿದಂತೆ ಶರಣರು ಕಾಯಕವನ್ನೇ ಜೀವನದ ಆದರ್ಶವನ್ನಾಗಿ ಮಾಡಿಕೊಂಡಿದ್ದರು ಎಂದರು.
ಇಂದಿನ ಕಾಲದಲ್ಲಿ ಕಾಯಕದ ಮೂಲ ಆಶಯದೊಂದಿಗೆ ಶಿಕ್ಷಣ ಮತ್ತು ಜ್ಞಾನಕ್ಕೂ ಆದ್ಯತೆ ನೀಡಬೇಕು. ಜಾತಿ-ಧರ್ಮದ ಭೇದವಿಲ್ಲದೆ ಮಾನವೀಯತೆ, ಸಹಕಾರ ಮತ್ತು ಸಮಾನತೆಯ ಆಧಾರದ ಮೇಲೆ ಸಮಾಜ ಕಟ್ಟಬೇಕು ಎಂದು ಹೇಳಿದರು.
 ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ ಮಾತನಾಡಿ. ಪ್ರಾಮಾಣಿಕತೆ ಮತ್ತು ಶ್ರಮದಿಂದ ಕಾಯಕ ಮಾಡುವವರಿಗೆ ಜೀವನದಲ್ಲಿ ಒಂದಲ್ಲ ಒಂದು ರೂಪದಲ್ಲಿ ಪ್ರತಿಫಲ ಹಾಗೂ ಗೌರವ ದೊರೆಯುತ್ತದೆ. ಕಾಯಕವನ್ನೇ ಜೀವನದ ಆದರ್ಶವನ್ನಾಗಿಸಿಕೊಂಡ ನುಲಿಯ ಚಂದಯ್ಯನವರಂತಹ ಕಾಯಕ ಯೋಗಿಗಳ ಜಯಂತಿಯನ್ನು ಒಗ್ಗೂಡಿ ಆಚರಿಸುತ್ತಿರುವುದು ಸಂತಸದ ವಿಚಾರ. ನುಲಿಯ ಚಂದಯ್ಯನವರು ಬಸವಣ್ಣನವರ ಸಮಾನತೆಯ ಆದರ್ಶಗಳನ್ನು ಹೊಂದಿದ್ದು, ಅವರ ವಚನಗಳಲ್ಲಿಯೂ ಒಂದೇ ರೀತಿಯ ಸಂದೇಶಗಳು ಕಂಡುಬರುತ್ತವೆ.ಪ್ರತಿಯೊಬ್ಬರೂ ಪ್ರಾಮಾಣಿಕತೆಯಿಂದ ಕಾಯಕ ಮಾಡುತ್ತಾ ಸಾಗಬೇಕು. ಪ್ರಾಮಾಣಿಕ ಕಾಯಕಕ್ಕೆ ಖಂಡಿತವಾಗಿಯೂ ಜಯ ಹಾಗೂ ಪ್ರತಿಫಲ ದೊರೆಯುತ್ತದೆ ಎಂಬ ವಿಶ್ವಾಸದಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಲಾದಗಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಪ್ರಾಚಾರ್ಯರರಾದ ಡಾ. ಸರೋಜಿನಿ ಹೊಸಕೇರಿ ಅವರು ಶಿವಶರಣ ಶ್ರೀ ನುಲಿಯ ಚಂದಯ್ಯ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.   
 ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ. ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಸಬರಗಿ ಕಟ್ಟುವದು ಮತ್ತು ನುಲು ಹೊಸಿಯುವ ಸ್ಪರ್ಧೆ ಏರ್ಪಡಿಸಿ ಪ್ರಥಮ ಹಾಗೂ ದ್ವಿತೀಯ ಬಂದವರಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ  ಅಖಿಲ ಕರ್ನಾಟಕ ಕೊರಚ ಮಹಾಸಭಾ ಗೌರವಾಧ್ಯಕ್ಷ ಮುತ್ತುರಾಜ ಜಿ. ಮಾಕಡವಾಲೆ, ಉಪಾಧ್ಯಕ್ಷ ಮಾರುತಿ ಆರ್. ಮಾಕಡವಾಲೆ,ಕೊರಮ ಸಮಾಜದ ಹಿತಾಭಿವೃದ್ಧಿ ಸಂಘ ಅಧ್ಯಕ್ಷ ನಾರಾಯಣ ಭಿ. ಭಜಂತ್ರಿ, ಉಪಾಧ್ಯಕ್ಷ ಡಾ. ಬಿ ಎಸ್.ಭಜಂತ್ರಿ, ಕೊಂಚಿ ಕೊರವರ ಸಮಾಜ ಮುಖಂಡರಾದ ರಾಮಣ್ಣ ನಾ.ಹಂಚಿನಮನಿ, ಕೊರಮ ಮಹಿಳಾ ಸಂಘ ಅಧ್ಯಕ್ಷ ಸುನಂದಾ ಎಸ್. ಭಜಂತ್ರಿ, ಜಿಲ್ಲಾಧ್ಯಕ್ಷಿ ಕಲಾವತಿ ದತ್ತವಾಡ, ವಾಯ್ ಬಿ. ಭಜಂತ್ರಿ, ಉತ್ಸವ ಸಮಿತಿ ಸಮಾಜದ ಮುಖಂಡರಾದ ಮಂಜುನಾಥ ಭಜಂತ್ರಿ, ಕಾರ್ಯದರ್ಶಿ ಸದಾಶಿವ ಭಜಂತ್ರಿ,ವಾಯ್ ಬಿ. ಭಜಂತ್ರಿ, ಜಿಲ್ಲಾ ಕೊರಮ,ಕೊರಚ,ಕುಂಚಿ,ಕೊರವರ ಹಿತಾಭಿವೃದ್ಧಿ ಸಂಘ ಹಾಗೂ
 ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
30ಕ್ಕೆ ದಿ ಗೋಲ್ಡನ್‌ ಅವರ್‌ ಪುಸ್ತಕ ಬಿಡುಗಡೆತಾಲೂಕಿನಾದ್ಯಂತ ರಾಖಿ ಕಟ್ಟಿದ ಸಹೋದರಿಯರು*ಬೆಳಗಾವಿ ಹವ್ಯಕ ಸಂಘದಿಂದ ಭಕ್ತಿಭಾವದ ಯಜ್ಞೋಪವೀತ ಧಾರಣೆ, ರಕ್ಷಾ ಬಂಧನ ಕಾರ್ಯಕ್ರಮ*ನೀಲವ್ವ ಲಕ್ಕಪ್ಪ ಧೋನಿ ನಿಧನ.ನುಲಿಯ ಚಂದಯ್ಯನವರ ಕಾಯಕದ ಆದರ್ಶಗಳು ಸಮಾಜಕ್ಕೆ ದಾರಿದೀಪ: ಐ.ಜಿ. ಸನದಿಜಿಲ್ಲೆ ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಹೋರಾಟ-ಕೂಚಬಾಳವಿಜೃಂಭಣೆಯಿಂದ ಶ್ರೀ ಶಿವಶರಣ ನೂಲಿ ಚಂದಯ್ಯನವರ ಜಯಂತಿ ಆಚರಣೆಕಾಗವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ನ್ಯಾಯಾಧೀಶೆ,ತಹಶೀಲ್ದಾರ್‌ರಿಂದ ಆಕಸ್ಮಿಕ ಭೇಟಿಝಳಕಿ : ಅಣ್ಣ ನನ್ನ ಮಾನ, ಪ್ರಾಣ ರಕ್ಷಣೆ ಕೊಡುವ ಸಂಕೇತ ರಕ್ಷಾ ಬಂಧನ ರಾಘವೇಂದ್ರ ಕಾಪಸೆ.·  ಇಂಡಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ: ತಹಶೀಲ್ದಾರ್‌ಗೆ ರೈತ ಸಂಘ ಮನವಿ