LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Koppal

ಖಾಶೀಮ್ ಸಾಬ ಇವರ ನಿಧನಕ್ಕೆ ಗಣ್ಯರ ಕಂಬನಿ, ಸಂತಾಪ,,* 

ಕುಕನೂರು :  ಪಟ್ಟಣದ ಹಿರಿಯ ಜೀವಿ ಹಾಗೂ ಮುಸ್ಲಿಂ ಸಮಾಜದ ಮುಖಂಡರು, ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರಾದ ಖಾಶೀಮ್ ಸಾಬ ತಳಕಲ್ (80)ಅವರು ಮಂಗಳವಾರದಂದು ಅನಾರೋಗ್ಯದಿಂದ ನಿಧನರಾದರು.
ಖಾಶೀಮ್ ಸಾಬ ತಳಕಲ್ ಅವರ ಅಪರೂಪದ ರಾಜಕಾರಣಿಗಳಾಗಿದ್ದು, ರಾಜ್ಯದ ಹಿರಿಯ ರಾಜಕಾರಣಿಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದವರಾಗಿದ್ದ ಇವರ ಅಗಲಿಕೆ ನೋವು ತುಂಬಾ ವಿಷಾದನೀಯವಾಗಿದೆ ಎಂದು ಈರಪ್ಪ ಕುಡುಗುಂಟಿ ವಿಷಾದ ವ್ಯಕ್ತ ಪಡಿಸಿದರು. 
ಕಾಶೀಮ್ ಸಾಬ ಅವರು ಸಾಮಾಜಿಕ ಚಿಂತಕರು, ಸರ್ವ ಸಮುದಾಯದವರನ್ನು ಪ್ರೀತಿಸುವ ಗುಣ ಹೊಂದಿದ ಇವರು ಎಲ್ಲಾ ವರ್ಗದ ಜನರೊಂದಿಗೆ ಉತ್ತಮ ಒಡನಾಟಹೊಂದಿದವರಾಗಿದ್ದರು. ಇಂತಹ ವ್ಯಕ್ತಿಗಳನ್ನು ನಾವು ಇಂದು ಕಳೆದುಕೊಂಡಿದ್ದು ತುಂಬಾ ನೋವುಂಟಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿಯನ್ನು ಕರುಣಿಸಲಿ ಎಂದು ಈರಪ್ಪ ಕುಡುಗುಂಟಿ ಸಂತಾಪ ಸೂಚಿಸಿದರು.
ನಂತರ ನವೀನಕುಮಾರ ಗುಳಗಣ್ಣವರ ಸಂತಾಪ ಸೂಚಿಸಿ ಮಾತನಾಡಿ ಪ್ರಭಾವಿ ಮುಖಂಡರು, ಸರ್ವ ಸಮುದಾಯವನ್ನೊಳಗೊಂಡು ಪ್ರತಿಯೊಬ್ಬರೊಂದಿಗೆ ಉತ್ತಮ ಒಡನಾಟ ಹೊಂದಿದ ಕಾಶೀಮ್ ಸಾಬ ತಳಕಲ್ ಅವರ ನಿಧನದ ಸುದ್ದಿ ತಿಳಿದು, ನಮಗೆ ತುಂಬಾ ಆಘಾತವೆನಿಸಿತು. ಇಂತಹ ಮಹಾನ್ ಚೇತನರಿಗೆ ಆ ಭಗವಂತ ಶಾಂತಿ ನೀಡಲಿ, ಕುಟುಂಬಕ್ಕೆ  ನೋವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ವೇಳೆ ಚೆಂಡೂರ ಗ್ರಾಮದ ಜಗನ್ನಾಥ ಗೌಡ್ರ ಸಂತಾಪ ಸೂಚಿಸಿ ಮಾತನಾಡಿ ಖಾಶೀಮ್ ಸಾಬರು ಹಿರಿಯ ರಾಜಕೀಯ ಮುತ್ಸದ್ದಿಗಳು ಹಾಗೂ ಖಾದಿ ಗ್ರಾಮೋದ್ಯೋಗದ ಅಧ್ಯಕ್ಷರಾಗಿ  ಹಗಲಿರುಳು ಸಮಾಜಿಕ ಚಿಂತನೆ ನಡೆಸುವ ವ್ಯಕ್ತಿಗಳಾಗಿದ್ದರು. ಖಾದಿ ಗ್ರಾಮೋದ್ಯೋಗವನ್ನು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಸುವ ಕನಸ್ಸನ್ನು ಹೊತ್ತಿದ್ದ ಇವರು ಇಂದು ನಮ್ಮನ್ನೆಲ್ಲಾ ಅಗಲಿದ್ದು, ತಾಲ್ಲೂಕಿಗೆ ಹಾಗೂ ನಮಗೆ ತುಂಬಾ ನೋವನ್ನುಂಟುಮಾಡಿದೆ. ಮೃತರ ಆತ್ಮಕ್ಕೆ ಅಲ್ಲಾಹನು ಶಾಂತಿಯನ್ನು ದಯಪಾಲಿಸಿ, ಕುಟುಂಬ ವರ್ಗದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ವೇಳೆ ಪಟ್ಟಣದ ಮುಖಂಡರಾದ ಜಶವಂತರಾಜ್ ಜೈನ್, ಶಿವಕುಮಾರ ನಾಗಲಾಪೂರಮಠ, ಸಾಹಿತಿಗಳಾದ ಡಾ. ಕೆ. ಬಿ ಬ್ಯಾಳಿ, ಆರ್. ಪಿ ರಾಜೂರು, ಎಮ್. ಎಸ್ ಹಿರೇಮಠ, ಸಿದ್ದಯ್ಯ ಕಳ್ಳಿಮಠ, ರಾಮಣ್ಣ ಮುಂದಲಮನಿ, ಸಿದ್ದು ಉಳ್ಳಾಗಡ್ಡಿ, ಈರಪ್ಪ ಗುತ್ತಿ, ರೆಹಮಾನ್ ಸಾಬ ಮಕ್ಕಪ್ಪನವರ್, ಕಳಕಪ್ಪ ಕಂಬಳಿ, ಸಿದ್ದಲಿಂಗಯ್ಯ ಹಿರೇಮಠ, ಸಿದ್ದಲಿಂಗಯ್ಯ ಬಂಡಿ, ಈರಣ್ಣ ಅಣ್ಣಿಗೇರಿ, ಪರಶುರಾಮ್ ಸಕ್ರಣ್ಣವರ್, ಜಯಸಿಂಗರಾವ್ ಜಾಧವ್, ಯಮನೂರಪ್ಪ ಗೊರ್ಲೆಕೊಪ್ಪ, ನಿಂಗಪ್ಪ ಗೊರ್ಲೆಕೊಪ್ಪ, ಗಗನ ನೋಟಗಾರ, ರಫೀಸಾಬ ಹಿರೇಹಾಳ, ಯುವರಾಜ್ ಜಾಧವ್, ಶೇಖಪ್ಪ ಕಂಬಳಿ ಹಾಗೂ ಗ್ರಾಮದ ಸರ್ವ ಸಮಾಜದ ಮುಖಂಡರು ಗಣ್ಯರು ಖಾಸೀಮ್ ಸಾಬ ಅವರ ನಿಧನಕ್ಕೆ ಕಂಬನಿ ಮಿಡಿದು ಸಂತಾಪ ಸೂಚಿಸಿದರು.
ಕಾಂಗ್ರೆಸ್ ಹಿರಿಯ ಜೀವಿ ಖಾಶೀಮ್ ಸಾಬ ತಳಕಲ್ ಇವರ ನಿಧನದ ಸುದ್ದಿ ತಿಳಿದು ಸಚಿವ ಬಸವರಾಜ ರಾಯರಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ ದೂರವಾಣಿ ಮೂಲಕ ಸಂತಾಪ ಸೂಚಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ