ಬಳ್ಳಾರಿ. ಸೆ. 07:: ತಾಲೂಕಿನ ಚರಕುಂಟೆ ಗ್ರಾಮದಲ್ಲಿ ಇಂದು ಶ್ರಾವಣ ಮಾಸದ ಕಡೆಯ ಶನಿವಾರವಾದ್ದರಿಂದ ಶ್ರೀ ಆಂಜನೇಯ ಸ್ವಾಮಿಯ ತನು ಬಿಂದಿಗೆ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಡೊಳ್ಳು ಕಳಸಗಳೊಂದಿಗೆ ಹಳ್ಳಕ್ಕೆ ಹೋಗಿ ಚಿಲುಮೆಯನ್ನು ತೋಡಿ ಚಿಲುಮೆಯ ಸುತ್ತ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಗಂಗೆಯನ್ನು ಬಿಂದಿಗೆಯಲ್ಲಿ ತುಂಬಿಕೊಂಡ ತನು ಬಿಂದಿಗೆಯನ್ನು ದೇವಸ್ಥಾನದ ಪೂಜಾರಿ ಹೆಗಲ ಮೇಲೆ ಹೊತ್ತುಕೊಂಡು ಕಳಸ ಮತ್ತು ಡೊಳ್ಳಿನೊಂದಿಗೆ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಯಿತು.
ನಂತರ ಆ ಬಿಂದಿಗೆಯಲ್ಲಿನ ಹೊಸ ನೀರಿನೊಂದಿಗೆ ದೇವಸ್ಥಾನದ ಆಂಜನೇಯ ಸ್ವಾಮಿ ವಿಗ್ರಹವನ್ನು ತೊಳೆದು ವಿಗ್ರಹಕ್ಕೆ ಅರಿಶಿಣ ಕುಂಕುಮಾದಿಗಳಿಂದ ಅಭಿಷೇಕವನ್ನು ಮಾಡಿ ಎಲೆ ಪೂಜೆಯನ್ನು ಕಟ್ಟಿ ಹೂವು ಹಣ್ಣು ಕಾಯಿಗಳೊಂದಿಗೆ ದಾಸರ ಶ್ರೀನಿವಾಸ್ ಅವರಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ನಂತರ ನೆರೆದ ಭಕ್ತರಿಗೆ ಪ್ರಸಾದವನ್ನು ಸಹ ವಿತರಿಸಲಾಯಿತು.
ಈ ತನುಬಿಂದಿಗೆ ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿ ಭಕ್ತಿಯನ್ನು ಮೆರೆದರು.
ಈ ಕಾರ್ಯಕ್ರಮದಲ್ಲಿ ಹೋಟೆಲ್ ಹನುಮಂತು ಉಪ್ಪರ ರಂಗಪ್ಪ ವೆಂಕಪ್ಪ ಜಯರಾಮ್ ಶರೀಫ್ ಕಟ್ಟೆ ಬಸಪ್ಪ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಾಲ್ಮೀಕಿ ಹನುಮಂತಪ್ಪ, ಓಬಳೇಶ್ ತಿಮ್ಮಪ್ಪ ಗೋವಿಂದ ರಾಮಕೃಷ್ಣ ಸೇರಿದಂತೆ ಹಲವಾರು ಜನ ಈ ತನು ಬಿಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.