LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಶ್ರೀ ತೋಟಪ್ಪ ತಾತನವರ ಜಾತ್ರಾ ಪ್ರಯುಕ್ತ ಜನಪದ ಗೀತೆ ಗಾಯನ ಕಾರ್ಯಕ್ರಮ 

ಬಳ್ಳಾರಿ. ಸೆ. 07 : ತಾಲೂಕಿನ ಗಡಿಭಾಗದ ರಾಯಪುರ ಬಲಗುಡ್ಡ  ಗ್ರಾಮದಲ್ಲಿ ನಿನ್ನೆ ಶನಿವಾರ ಜರುಗಿದ ಶ್ರೀ ತೋಟಪ್ಪ ತಾತನವರ ಜಾತ್ರೆಯ ಅಂಗವಾಗಿ ಶ್ರೀ ವೀರಭದ್ರೇಶ್ವರ ಬಯಲಾಟ ಕಲಾವಿದರ ಸಂಘ, ಮೋಕ ಗೋನಾಳ್ ಬಳ್ಳಾರಿ ವತಿಯಿಂದ ಕಲಾವಿದ ನಾಗನಗೌಡ ಇವರ ನೇತೃತ್ವದಲ್ಲಿ ಜಾನಪದ ಗೀತೆ ಗಾಯನ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.
 ಈ ಗೀತ ಗಾಯನ ಕಾರ್ಯಕ್ರಮ ಗ್ರಾಮದ ಹಿರಿಯ ಮುಖಂಡರಾದ ವೀರಭದ್ರಯ್ಯ ಸ್ವಾಮಿ ಮಠದ ಪೀಠಾಧಿಪತಿ ಮಾತನಾಡಿ ಎಲ್ಲಾ ಸಂಗೀತಕ್ಕೂ ತಾಯಿ ಬೇರು ಜನಪದ ಸಂಗೀತವಾಗಿದೆ ಸಂಗೀತವು ಎಲ್ಲರನ್ನೂ ಮಂತ್ರಮುಕ್ತವಾಗಿಸುತ್ತದೆ ಮತ್ತು ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದರು. ಗ್ರಾಮದ ಹಿರಿಯರಾದ ಕೃಷ್ಣಪ್ಪ ಇವರ ಆಶೀರ್ವಾದದಿಂದ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು. 
ಈ ಕಾರ್ಯಕ್ರಮದಲ್ಲಿ ಗಾಯಕರಾದ ಹುಲುಗಪ್ಪ,  ಹನುಮಯ್ಯ ಮತ್ತು ಸಂಗಡಿಗರು ಜನಪದ ಗೀತ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇವರಿಗೆ ಹಾರ್ಮೋನಿಯಂ ಮುದ್ದಟನೂರು ತಿಪ್ಪೇಸ್ವಾಮಿ ಕಾಶಿಯು ವೀರಭದ್ರ ಸ್ವಾಮಿ ತಬಲಾ ಖಾಸಿಂ ಸೇರಿದಂತೆ ಇತರರು ಸಂಗೀತ ಸಾತ್ ನೀಡಿದರು. 
ಈ ಗೀತ ಗಾಯನ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗಂಗಾಧರಪ್ಪ , ಜ್ಞಾನಮೂರ್ತಿ ಸ್ವಾಮಿ ಸೇರಿದಂತೆ ಹಲವಾರು ಜನ ಸಂಗೀತ ಆಸಕ್ತರು ಮತ್ತು ಗ್ರಾಮದ ಸಾರ್ವಜನಿಕರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಪೀಟರ್ ದಳವಾಯಿ *ಮಹಾನ್ ಸಮಾಜ ಸುಧಾರಕರು, ಮಹಾತ್ಮಾ ಜ್ಯೋತಿಬಾ ಫುಲೆ ಅವರ ಜನ್ಮ ದ್ವಿ ಶತಮಾನೋತ್ಸವ ಸಮರ್ಪಿತ: ವಿದ್ಯಾರ್ಥಿ ಶಿಬಿರ* ಶ್ರೀ ತೋಟಪ್ಪ ತಾತನವರ ಜಾತ್ರಾ ಪ್ರಯುಕ್ತ ಜನಪದ ಗೀತೆ ಗಾಯನ ಕಾರ್ಯಕ್ರಮ ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಘೋಷಿಸಲು ನಡಹಳ್ಳಿ ಆಗ್ರಹಮದ್ಯವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಲು ಕರೆಚರಕುಂಟೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ತನುಬಿಂದಿಗೆ ಕಾರ್ಯಕ್ರಮ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ₹61 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ನಿರಂತರ ಆದ್ಯತೆ: ಲಕ್ಷ್ಮೀ ಹೆಬ್ಬಾಳಕರ್ಜೈನ ಸಮುದಾಯ ಭವನ ಉದ್ಘಾಟನೆ: ಜಾತಿ, ಧರ್ಮ, ಭಾಷೆಗಿಂತ ಮಾನವೀಯತೆಯೇ ಮುಖ್ಯ: ಲಕ್ಷ್ಮೀ ಹೆಬ್ಬಾಳಕರ್ಶ್ರಾವಣ ಮಾಸದ ಕೊನೆಯ ಸೋಮವಾರ: ಸಿದ್ದೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್