LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ತುಂಬಗಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ರುದ್ರಾಭಿಷೇಕ

ಲೋಕಕಲ್ಯಾಣ ಹಾಗೂ ರೈತರ ಒಳಿತಿಗಾಗಿ ವಿಶೇಷ ಪೂಜೆ

 

 

 

 

ತಾಳಿಕೋಟೆ, ತಾಲೂಕಿನ ತುಂಬಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತಾಳಿಕೋಟೆ ಪುರಸಭೆಯ ಮಾಜಿ ಸದಸ್ಯ ಜೈ ಸಿಂಗ್ ಮೂಲಿಮನಿ ಅವರ ಕುಟುಂಬಸ್ಥರ ವತಿಯಿಂದ ಶ್ರೀ ರಾಮಲಿಂಗೇಶ್ವರ ದೇವರಿಗೆ ಮಹಾ ರುದ್ರಾಭಿಷೇಕವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

 ಶ್ರಾವಣ ಮಾಸವು ಅತ್ಯಂತ ಪವಿತ್ರ ಹಾಗೂ ವಿಶೇಷ ಮಹತ್ವ ಹೊಂದಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ರಾಮಲಿಂಗೇಶ್ವರ ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.

 ಲೋಕಕಲ್ಯಾಣ, ನಾಡಿನ ಶಾಂತಿ-ಸಮೃದ್ಧಿ ರೈತರ ಒಳಿತಿಗಾಗಿ ಹಾಗೂ ತಾಳಿಕೋಟಿ ತಾಲೂಕಿನ ಜನತೆಯ ಸುಖ, ಆರೋಗ್ಯ ಮತ್ತು ಒಳಿತಿಗಾಗಿ ಈ ಮಹಾ ರುದ್ರಾಭಿಷೇಕವನ್ನು ನೆರವೇರಿಸಲಾಗಿದೆ ಎಂದು ಜೈ ಸಿಂಗ್ ಮೂಲಿಮನಿ ಕುಟುಂಬಸ್ಥರು ತಿಳಿಸಿದರು.

 ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ದೇವರಿಗೆ ವಿಶೇಷ ಅಭಿಷೇಕ, ಪೂಜಾ ವಿಧಿ-ವಿಧಾನಗಳನ್ನು ಅರ್ಚಕರ ನೇತೃತ್ವದಲ್ಲಿ ನೆರವೇರಿಸಲಾಯಿತು.

 ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರಾದ ಜಯತೀರ್ಥ ಜೋಶಿ, ಅಪ್ಪು ಜೋಶಿ, ರಾಜು ತುಂಬಿಗಿ, ಗಗನ್ ಸಿಂಗ್ ಮೂಲಿಮನಿ ಸೇರಿದಂತೆ ತುಂಬಗಿ ಗ್ರಾಮದ ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಪರಸ್ಪರ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸೋಣ: ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿತುಂಬಗಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ರುದ್ರಾಭಿಷೇಕ"ಪ್ರಜಾಸೇವೆ ಅಭಿಯಾನದ ಮೂಲಕ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು"ಜೆಡಿಎಸ್ ನಗರ ಘಟಕದ ಸಂಘಟನೆ ಕುರಿತು ಸಭೆಬರಪೀಡಿತ ಜಿಲ್ಲೆಯ ಘೋಷಣೆಗೆ ಸರ್ಕಾರದ ನಿರ್ಲಕ್ಷ ಸಲ್ಲದು-ಸೋಲಾಪೂರಪ್ರಜಾಸೇವೆ ಆಂದೋಲನಕ್ಕೆ ಚಾಲನೆದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ - ಶಾಸಕ ಪಾಟೀಲ್ ರಾಮದುರ್ಗದಲ್ಲಿ ‘ಪ್ರಜಾಸೇವೆ’ಗೆ ಚಾಲನೆ: ಅಧಿಕಾರಿಗಳಿಗೆ ಶಾಸಕ ಅಶೋಕ್ ಪಟ್ಟಣ ಎಚ್ಚರಿಕೆರಾಮದುರ್ಗ: ಕ್ರೀಡೆಯಿಂದ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯ - ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿವಿನಯ ನಾವಲಗಟ್ಟಿ ಅವರ ತಾಯಿಯ ನಿಧನಕ್ಕೆ ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ ಸಂತಾಪ