ಕಾಗವಾಡ:ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ತಾಲೂಕು ಆಡಳಿತ ಹಾಗೂ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ನಡೆಯಿತು.
ತಹಶಿಲ್ದಾರ ರವಿಂದ್ರ ಹಾದಿಮನಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜನರ ಸಮಸ್ಯೆಗಳನ್ನು ಆಲಿಸಿ, ಸಾರ್ವಜನಿಕರ ಅಹವಾಲುಗಳನ್ನು ಸ್ಥಳದಲ್ಲೇ ಸ್ವೀಕರಿಸಿ ತ್ವರಿತವಾಗಿ ಪರಿಹಾರ ಒದಗಿಸುವ ವೇದಿಕೆಯಾಗಬೇಕು ಎಂದು ತಾಪಂ ಕಾರ್ಯನಿರ್ವಾಹಕ ವಿರಣ್ಣಾ ವಾಲಿ ಅಧಿಕಾರಿಗಳಿಗೆ ಸೂಚಿಸಿದರು.
ತಹಶಿಲ್ದಾರ ರವಿಂದ್ರ ಹಾದಿಮನಿ ಮಾತನಾಡಿ, ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಸ್ಥಳದಲ್ಲಿ ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇವೇಳೆ.ಸಿಡಿಪಿಓ ಸಂಜೀವಕುಮಾರ ಸದಲಗಿ, ಬಿಇಓ ಚೆನ್ನಿಗ ರಾಮಯ್ಯ, ರವೀಂದ್ರ ಪೂಜಾರಿ,ಪಿಎಸ್ಐ ರಾಘವೇಂದ್ರ ಖೋತ,ಗ್ರೇಡ್ 2 ತಹಶೀಲ್ದಾರ ರೇಶ್ಮಿ ಜಕಾತಿ, ಉಪ ತಹಶೀಲ್ದಾರ ಅಣ್ಣಾಸಾಬ ಕೋರೆ, ರಾಘವೇಂದ್ರ ಗೋರಪಡೆ, ಶಫೀಕ್ ಮುಲ್ಲಾ,ಡಿ ಜೆ ಕಾಂಬಳೆ,ಕೆ ಕೆ ಗಾವಡೆ, ಮಹಾಂತೇಶ ಕವಲಾಪುರೆ,,ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.