LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಮಹಾರಾಷ್ಟ್ರದಲ್ಲಿ ಕೋವಿಡ್​ ಹೊಸ ರೂಪಾಂತರಿ ಪತ್ತೆ: 91 ಮಂದಿಯಲ್ಲಿ ಸೋಂಕು​ ದೃಢ

ನವದೆಹಲಿ: ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ಹೊಸ ಕೋವಿಡ್ 19 ರೂಪಾಂತರಿ 'ಎಫ್ಎಲ್ಐಆರ್​ಟಿ' (FLiRT- ಫ್ಲರ್ಟ್​) ಪ್ರಕರಣ ಇದೀಗ ಮಹಾರಾಷ್ಟ್ರದಲ್ಲೂ ಪತ್ತೆಯಾಗಿದೆ. ಆದರೆ, ಈ ಸೋಂಕಿನ ಬಗ್ಗೆ ತಕ್ಷಣಕ್ಕೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.


ಫ್ಲರ್ಟ್​ ಎಂದು ಕರೆಯಲ್ಪಡುತ್ತಿರುವ ಈ ಸೋಂಕು ಕೆಪಿ.1.1 ಮತ್ತು ಕೆಪಿ.2 ತಳಿಗಳ ರೂಪಾಂತರ ಒಳಗೊಂಡಿದೆ. ಈ ತಳಿಗಳ ರೂಪಾಂತರಗಳ ತಾಂತ್ರಿಕ ಹೆಸರುಗಳ ಆಧಾರದ ಮೇಲೆ ಅವುಗಳನ್ನು ಹೆಸರಿಸಲಾಗಿದೆ. ಒಂದು ರೂಪಾಂತರ ಎಫ್​ ಮತ್ತು ಎಲ್ ಅಕ್ಷರ​ ಒಳಗೊಂಡಿದ್ದರೆ, ಮತ್ತೊಂದು ರೂಪಾಂತರ ಆರ್​ ಮತ್ತು ಟಿ ಅಕ್ಷರ ಹೊಂದಿದೆ.


ಮಾರ್ಚ್​ ಮತ್ತು ಏಪ್ರಿಲ್​ನಲ್ಲಿ ಸಂಗ್ರಹಿಸಲಾದ ಜಿನೋಮ್​ ಸೀಕ್ವೆನ್ಸಿಂಗ್​ನಲ್ಲಿ ಕೆಪಿ.2ನ 91 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿವೆ. ಇದರಲ್ಲಿ ಪುಣೆಯಲ್ಲಿ 51, ಥಾಣೆ 20, ಅಮರಾವತಿ 7, ಔರಂಗಬಾದ್​ 7, ಸೋಲಪುರ್ 2, ಅಹಮದ್​​ನಗರ 1, ನಾಸಿಕ್ 1, ಲಾತೂರ್​ 1 ಮತ್ತು ಸಾಂಗ್ಲಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ. ಆದರೆ, ಯಾವುದೇ ಪ್ರಕರಣದಲ್ಲೂ ಆಸ್ಪತ್ರೆಗೆ ದಾಖಲಾಗುವ ಅಥವಾ ತೀವ್ರತರದ ಕಾಯಿಲೆ ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆತಂಕ ಬೇಕಿಲ್ಲ ಎಂದು ಸೋಂಕು ರೋಗ ತಜ್ಞ ಡಾ.ಈಶ್ವರ್​ ಗಿಲಡಾ ತಿಳಿಸಿದ್ದಾರೆ.


ಅಷ್ಟೇ ಅಲ್ಲದೇ, ಪಾಸಿಟಿವ್​ ದರ ಕೂಡ ಕೇವಲ ಶೇ.1ರಷ್ಟಿದೆ. ಸದ್ಯ ರಾಜ್ಯದಲ್ಲಿ ಕೋವಿಡ್​ ಸೋಂಕಿನ ಪ್ರಮುಖ ತಳಿ ಕೆಪಿ.2 ಆಗಿದೆ. ಆದಾಗ್ಯೂ ಈ ತಳಿ ಸೋಂಕಿತರ ಆಸ್ಪತ್ರೆ ದಾಖಲೀಕರಣ ಅಥವಾ ತೀವ್ರತರದ ಪ್ರಕರಣಗಳು ವರದಿಯಾಗಿಲ್ಲ ಎಂದು ಪ್ರಮುಖ ಆಂಗ್ಲ ಮಾಧ್ಯಮ ವರದಿ ಮಾಡಿದೆ.


ಓಮಿಕ್ರಾನ್​ ವಂಶಾವಳಿಯ ಹೆಚ್ಚು ಹರಡುವ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ರೂಪಾಂತರ ಸೋಂಕು ಇದಾಗಿದೆ. ಫ್ಲರ್ಟ್​ ಮೊದಲ ಬಾರಿಗೆ ಜನವರಿಯಲ್ಲಿ ಜಾಗತಿಕವಾಗಿ ಪತ್ತೆಯಾಗಿತ್ತು. ಓಮ್ರಿಕಾನ್​ ಮೂಲ ಕೆಪಿ.2 ತಳಿ. ಅಮೆರಿಕದ ರೋಗ ನಿಯಂತ್ರಣ ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಏಪ್ರಿಲ್​ ಕೊನೆ ವಾರದಲ್ಲಿ ದೇಶದಲ್ಲಿ ಕೆಪಿ.2 ಅನುಕ್ರಮ ಪ್ರಸರಣದ ಪಾಲು ಶೇ 25ರಷ್ಟು ಇರಲಿದೆ.


ಲಕ್ಷಣಗಳು: ಈ ತಳಿ ಕೂಡ ಈ ಹಿಂದೆ ಕೋವಿಡ್​ ತಳಿಗಳು ಹೊಂದಿದ್ದಂತಹ ಮೂಗು ಸೋರುವಿಕೆ, ಗಂಟಲು ಕೆರೆತ, ಸುಸ್ತು, ಜ್ವರ, ತಲೆನೋವು, ಸ್ನಾಯು ನೋವು, ಕೆಲವು ಬಾರಿ ರುಚಿ ಅಥವಾ ವಾಸನೆ ನಷ್ಟದ ಲಕ್ಷಣಗಳನ್ನು ಹೊಂದಿದೆ.


ಕೋವಿಡ್​ ಸಂಪೂರ್ಣವಾಗಿ ಸಮಾಜದಿಂದ ಹೋಗಿಲ್ಲ. ಆದರೆ, ಇದು ಹೆಚ್ಚು ಆತಂಕ ಸೃಷ್ಟಿಸುತ್ತಿಲ್ಲ. ಆಸ್ಪತ್ರೆ ದಾಖಲೀಕರಣ ಮತ್ತು ಸಾವಿಗೆ ಕಾರಣವಾಗುತ್ತಿಲ್ಲ. 'ಸೌಮ್ಯ ಸ್ವಭಾವ'ದ ಜ್ವರದಂತೆ ಇದೆ. ಇದನ್ನು ಪ್ರತ್ಯೇಕ ರೋಗ ಎಂದು ಪರಿಗಣಿಸಲಾಗದು. ಇದನ್ನು 'ಕೋವಿ-ಜ್ವರ' ಎಂದು ಕರೆಯಬಹುದಾಗಿದೆ ಎಂದು ಮುಂಬೈನ ಇನ್ಫೆಕ್ಷಸ್​​ ಡೀಸಿಸ್​ ಯುನಿಸೊನ್​ ಮೆಡಿಕೇರ್​ ಆ್ಯಂಡ್​ ರಿಸರ್ಚ್‌ನ ಸಮಲೋಚಕರಾದ ಡಾ.ಗಿಲಡಾ ಮಾಹಿತಿ ನೀಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್