LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಶಾಸಕ ನಾಡಗೌಡರು ಹಸಿ ಸುಳ್ಳುಗಳ ಸರದಾರರು-ನಡಹಳ್ಳಿ ಟೀಕೆ

ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹ:

 

 

 

ಮುದ್ದೇಬಿಹಾಳ : ಮತಕ್ಷೇತ್ರದ ರೈತರಿಂದ ಆಯ್ಕೆಯಾಗಿರುವ ನೀವು ಅವರ ಬದುಕಿಗೆ ಸಂಕಷ್ಟ ಎದುರಾದಾಗ ಸ್ಪಂದಿಸುವ ಕೆಲಸ ಮಾಡಬೇಕು.ಅದು ಬಿಟ್ಟು ಮೂವ್ವತ್ತು ವರ್ಷಗಳಿಂದ ಹಸಿ ಸುಳ್ಳುಗಳನ್ನೇ ಹೇಳುತ್ತಾ ರಾಜಕಾರಣ ಮಾಡಿಕೊಂಡು ಬಂದಿದ್ದೀರಿ.ಜನ ಇನ್ನು ಮುಂದೆ ನಿಮ್ಮನ್ನು ನಂಬುವುದಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ಬರ ಘೋಷಣೆಗೆ ಆಗ್ರಹಿಸಿ ನಡೆದಿರುವ ಬಿಜೆಪಿಯ ಎರಡನೇ ದಿನದ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಅವರು ಮಾತನಾಡಿದರು.

ಈ ಹೋರಾಟ ಎ.ಎಸ್.ಪಾಟೀಲ ನಡಹಳ್ಳಿಯ ಹೋರಾಟವಲ್ಲ.ಇದು ತಾಲ್ಲೂಕಿನ ರೈತರ ಬದುಕಿನ ಹೋರಾಟ.ತಾಲ್ಲೂಕಿನ ರೈತರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಸರ್ಕಾರದ ಕೊರಳುಪಟ್ಟಿ ಹಿಡಿದು ಕೇಳೋಣ.ಯಾಕೆ ಬರಗಾಲ ಎಂದು ತಾಲ್ಲೂಕನ್ನು ಘೋಷಣೆ ಮಾಡುತ್ತಿಲ್ಲ.ನಿಯಮಾವಳಿ ಪ್ರಕಾರ ಎಲ್ಲ ಅಂಶಗಳು ಬರಗಾಲಕ್ಕೆ ಅರ್ಹ ತಾಲ್ಲೂಕು ಎಂದು ಹೇಳುತ್ತಿದ್ದರೂ ರೈತರ ಬದುಕಿನೊಂದಿಗೆ ನಾಡಗೌಡರು ಯಾಕೆ ಚೆಲ್ಲಾಟ ಆಡುತ್ತಿದ್ದೀರಿ ? ಎಂದು ಪ್ರಶ್ನಿಸಿದರು.

 ಉಸ್ತುವಾರಿ ಸಚಿವರು-ಕ್ಷೇತ್ರದ ಶಾಸಕರು ನಿಮ್ಮ ರಾಜಕೀಯ ಜಗಳವನ್ನು ರಾಹುಲ್ ಗಾಂಧಿ ,ಮುಖ್ಯಮಂತ್ರಿಗಳ ಮುಂದೆ ಮಾಡಿ.ರೈತರಿಗೆ ಪರಿಹಾರವನ್ನು ಕೊಡಿಸುವ ಕೆಲಸ ಮಾಡಬೇಕು.ಅದು ಉಸ್ತುವಾರಿ ಮಂತ್ರಿಗಳು,ಶಾಸಕರ ಜವಾಬ್ದಾರಿ ಆಗಿದೆ.ರೈತರ ಹೋರಾಟ ಆರಂಭವಾಗಿದೆಯೋ ಆಗ ಅಪ್ಪಾಜಿ ನಾಡಗೌಡರು ಹಸಿ ಸುಳ್ಳು ಹೇಳುತ್ತಾರೆ.ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ.ಆದಷ್ಟು ಶೀಘ್ರ ಬರಗಾಲ ಘೊಷಣೆ ಆಗುತ್ತದೆ ಎಂದು ಹೇಳಿಕೆ ಕೊಡುತ್ತಾರೆ.ಹಾಗಿದ್ದರೆ ಸತ್ಯಾಗ್ರಹ ಮಾಡುತ್ತೇನೆ ಎಂದು ಹೇಳಿದ್ದೇಕೆ ಎಂದು ಮಾಜಿ ಶಾಸಕ ನಡಹಳ್ಳಿ ಪ್ರಶ್ನಿಸಿದರು.

ರೈತರ ಹೋರಾಟ ಕಂಡು ನಾಡಗೌಡರಿಗೆ ನಡುಕ ಶುರುವಾಗಿದೆ.ರೈತರು ಸಾಲ ಕಟ್ಟಲು ಹೋಗಬೇಡಿ.ಬೆಳೆ ಬೆಳೆಯುವುದಕ್ಕೆ ನಮ್ಮ ರೈತ ಸಾಲ ಮಾಡಿದ್ದಾನೆ.ಅದನ್ನು ಕಟ್ಟುವ ಅವಶ್ಯಕತೆ ಇಲ್ಲ.ಸರಕಾರ ಐದು ಲಕ್ಷದವರೆಗೆ ರೈತರ ಬೆಳೆಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆದಿರುವ ಪಾದಯಾತ್ರೆಯಲ್ಲಿ ಹಕ್ಕೊತ್ತಾಯ ಮಾಡಲಾಗಿದೆ.ರೈತರಿಗೆ ಐವತ್ತು ಸಾವಿರಗಳಂತೆ ಹೆಕ್ಟೇರ್‌ಗೆ ಪರಿಹಾರ ನೀಡಬೇಕು ಎಂದು ನಡಹಳ್ಳಿ ಹೇಳಿದರು.

ತಾಲ್ಲೂಕಿನ ದುರದೃಷ್ಟ ನಾನಿಗ ವಿಧಾನಸಭೆಯ ಒಳಗಿಲ್ಲ.ನಾನು ಶಾಸಕನಿದ್ದ ಸಮಯದಲ್ಲಿ ಕೆರೆ ತುಂಬಿಸುವ ಕೆಲಸ ಮಾಡಿದ್ದೇನೆ.ಅಭಿವೃದ್ಧಿ ಕೆಲಸ ಮಾಡಿಸಿದ್ದೇವೆ.ಈ ಕಷ್ಟದ ಸಮಯದಲ್ಲಿ ನನಗೆ ಆಶೀರ್ವಾದ ಮಾಡಬೇಕಿತ್ತು.ಕೊರೊನಾ,ಅತಿವೃಷ್ಟಿ ಸಮಯದಲ್ಲಿ ನಮ್ಮ ಕುಟುಂಬದಿಂದ ಹಗಲಿರುಳು ನೊಂದವರ,ಸಂಕಷ್ಟಕ್ಕೀಡಾದವರಿಗೆ ನೆರವಿನ ಸಹಾಯಹಸ್ತ ಚಾಚಿದ್ದೇವೆ ಎಂದು ನಡಹಳ್ಳಿ ಹೇಳಿದರು.

 ಮುಖಂಡರಾದ ಮಲಕೇಂದ್ರಗೌಡ ಪಾಟೀಲ,ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ,ಪ್ರೇಮಸಿಂಗ ಚವ್ಹಾಣ,ಸೋಮನಗೌಡ ಬಿರಾದಾರ ಕವಡಿಮಟ್ಟಿ,ಅಕ್ಷಯ ನಾಡಗೌಡ,ನಿಖಿಲ್‌ಗೌಡ ಪಾಟೀಲ, ಗಿರೀಶಗೌಡ ಪಾಟೀಲ,ಮದನ್‌ಸ್ವಾಮಿ ಹಿರೇಮಠ,ಸಂಗನಗೌಡ ಪಾಟೀಲ,ಬಸವರಾಜ ನಂದಿಕೇಶ್ವರಮಠ,ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ,ಗೌರಮ್ಮ ಹುನಗುಂದ,ಸುಭಾಷ ಕಟ್ಟಿಮನಿ,ಸಂಗು ಹತ್ತಿ,ಗುರುನಾಥ ದೇಶಮುಖ ಮತ್ತಿತರರು ಪಾಲ್ಗೊಂಡಿದ್ದರು.

ಹೋರಾಟದಲ್ಲಿ ಯುವಕರು ಭಾಗಿಯಾಗಲು ಭರತಗೌಡ ಕರೆ: ಬೆಂಗಳೂರಿನಿಂದ ಆಗಮಿಸಿದ್ದ ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ದೇಶದ ಬೆನ್ನೆಲುಬು ರೈತ.ಅವರಿಗೆ ಸಂಕಷ್ಟ ಎದುರಾದಾಗ ನಾವೆಲ್ಲ ಅವರ ಬೆನ್ನಿಗೆ ನಿಲ್ಲುವ ಕಾರ್ಯ ನಾವೆಲ್ಲ ಯುವ ಸಮೂಹ ಮಾಡಬೇಕು.ಕ್ಷೇತ್ರದ ಶಾಸಕರು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ.ಸರ್ಕಾರವನ್ನು ಎಚ್ಚರಿಸಲು ಯುವ ಸಮೂಹ ರೈತರ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಯುವ ಉದ್ಯಮಿ ಭರತಗೌಡ ಕರೆ ನೀಡಿದರು

ಹೋರಾಟದಲ್ಲಿ ಭಾಗಿಯಾದ ರೈತರಿಗೆಲ್ಲ ಪಲಾವ್ ವ್ಯವಸ್ಥೆಯನ್ನು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಭಿಮಾನಿ ಬಳಗದಿಂದ ಕೈಗೊಳ್ಳಲಾಗಿತ್ತು.ಅಲ್ಲದೇ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟೆಂಟ್ ಹಾಗೂ ಕುಡಿವ ನೀರಿನ ವ್ಯವಸ್ಥೆಯನ್ನು ಹೋರಾಟದ ಸ್ಥಳದಲ್ಲಿ ಕೈಗೊಳ್ಳಲಾಗಿದೆ.ಇಂದಿನ ರಕ್ಕಸಗಿ ಜಿಪಂ ವ್ಯಾಪ್ತಿಯ ರೈತರು,ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರನ್ನ ಅಜರಾಮರ: ಮಲ್ಲಿಕಾರ್ಜುನ ಅರಬಿ೧೦೦ ಮೀಟರ್ ಓಟದಲ್ಲಿ ದ್ವಿತೀಯ: ಜಿಲ್ಲಾ ಮಟ್ಟಕ್ಕೆ ಚೇತನ ನ್ಯಾಮಗೌಡಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹ