ಬಳ್ಳಾರಿ: 29:..ಸಹೋದರತ್ವ, ಪ್ರೀತಿ, ಕಾಳಜಿ ಹಾಗೂ ಮಾನವೀಯತೆಯ ಪವಿತ್ರ ಸಂದೇಶ ಸಾರುವ ರಕ್ಷಾ ಬಂಧನವನ್ನು ಶ್ರೀವಾಸವಿ ವಿದ್ಯಾಲಯದ 10ನೇತರಗತಿಯ ವಿದ್ಯಾರ್ಥಿಗಳು ಕಂಟೋನ್ಮೆಂಟ್ ಸಮೀಪದ ಶಾಂತಿಧಾಮದಲ್ಲಿ ಅರ್ಥಪೊರ್ಣವಾಗಿ ಆಚರಿಸಿದರು.
ಕಳೆದ 5 ವರ್ಷಗಳಿಂದ ಶ್ರೀವಾಸವಿ ವಿದ್ಯಾಲಯವು ಶಾಂತಿಧಾಮದಲ್ಲಿ ರಕ್ಷಾ ಬಂಧನವನ್ನು ಆಚರಿಸುವ ಸಂಪ್ರದಾಯವನ್ನು ಮುಂದಿವರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ ಶಾಂತಿಧಾಮದ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ರಕ್ಷಾ ಬಂಧನ ಆಚರಿಸಿ, ಪ್ರೀತಿ ಮತ್ತು ಸಹೋದರತ್ವವದ ಭಾವನೆಯನ್ನು ಹಂಚಿಕೊಂಡರು.
ಮಕ್ಕಳ ಮನಸ್ಸು ಮೃದುವಾದ ಮಣ್ಣಿನಂತೆ: ಬಾಲ್ಯದಲ್ಲೇ ಬಿತ್ತಿದ ಮೌಲ್ಯಗಳೇ ಅವರ ವ್ಯಕ್ತಿತ್ವದ ಬುನಾದಿಯಾಗುತ್ತವೆ.” ಎಂಬ ಆಶಯದೊಂದಿಗೆ ಶ್ರೀ ವಾಸವಿ ಕಿಂಡರ್ಗಾರ್ಟನ್ ಪುಟಾಣಿ ವಿದ್ಯಾರ್ಥಿಗಳು ರಕ್ಷಾ ಬಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಪುಟ್ಟ ಮಕ್ಕಳ ವಯಸ್ಸಿಗೆ ತಕ್ಕಂತೆ ರಾಖಿ ಕಟ್ಟೆ ಸಿಹಿ ಹಂಚಿಕೆ ಹಾಗೂ ಪರಸ್ಪರ ಶುಭಾಶಯ ವಿನಿಮಯದ ಮೂಲಕ ಹಬ್ಬದ ಸಂಭ್ರಮವನ್ನು ಅನುಭವಿಸಿದರು.
ಬಣ್ಣಬಣ್ಣದ ರಾಖಿಗಳೊಂದಿದೆ ಕಂಗೊಳಿಸಿದ ಪುಟಾಣಿ ಮಕ್ಕಳು ಪರಸ್ಪರ ರಾಖಿ ಕಟ್ಟಿಕೊಂಡು, ನಗು-ಸಂತಸ ಹಂಚಿಕೊಂಡರು. ಅವರ ಮುಗ್ಧ ನಗು ಮತ್ತು ಉತ್ಸಾಹವು ಹಬ್ಬಕ್ಕೆ ವಿಶೇಷ ಮೆರಗು ತಂದಿತು. ಹಬ್ಬಗಳ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಪರಿಚಸುವದರ ಜೊತೆಗೆ, ಉತ್ತಮ ಮೌಲ್ಯಗಳನ್ನು ಅವರ ಮನಸ್ಸಿನಲ್ಲಿ ಬಾಲ್ಯದಲ್ಲೇ ಬಿತ್ತುವುದು ಅತ್ಯಂತ ಅಗತ್ಯ ಎಂಬ ಸಂದೇಶವನ್ನು ಈ ಆಚರಣೆ ಸಾರಿತು.
ಪ್ರತಿವರ್ಷದಂತೆ ಈ ವರ್ಷವು ರಕ್ಷಾ ಬಂಧನ ಅಚರಿಸುವ ಮೂಲಕ ಶ್ರೀವಾಸವಿ ವಿದ್ಯಾಲಯವು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನೂ ವಿದ್ಯಾರ್ಥಿಗಳ ಬದುಕಿನಲ್ಲಿ ಬಿತ್ತುವ ತನ್ನ ಬದ್ದತೆಯನ್ನು ಮತ್ತೊಮ್ಮೆ ಸಾರಿತು.
ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾರು, ಶಿಕ್ಷಕರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ತಿಳಿಸಿ, ಭಾರತೀಯ ಸಂಸ್ಕೃತಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು.