Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ಬಳ್ಳಾರಿಯಲ್ಲಿ ಅರ್ಥಪೂರ್ಣ ‘ಜನಜಾತೀಯ ಗೌರವ ದಿವಸ್' ಆಚರಣೆ


ಬಳ್ಳಾರಿ,ನ.17: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ ಕೇಂದ್ರ (ಬಳ್ಳಾರಿ), ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ರಾಷ್ಟಿçÃಯ ಸೇವಾಯೋಜನಾ ಘಟಕದ ಸಹಯೋಗದೊಂದಿಗೆ ‘ಜನಜಾತೀಯ ಗೌರವ ದಿವಸ್' ಕಾರ್ಯಕ್ರಮವನ್ನು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬುಡಕಟ್ಟು ಸ್ವಾತಂತ್ರö್ಯ ಸೇನಾನಿ ಹಾಗೂ ಹೋರಾಟಗಾರ ಬಿರ್ಸಾ ಮುಂಡಾ ಅವರ 151 ನೇ ಜನ್ಮ ದಿನಾಚರಣೆ ಅಂಗವಾಗಿ ಬಳ್ಳಾರಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬುಡಕಟ್ಟು ಸಮುದಾಯಗಳ ಅಮೂಲ್ಯ ಕೊಡುಗೆಯನ್ನು ಹಾಗೂ ಭಾರತೀಯ ಸ್ವಾತಂತ್ರö್ಯ ಸಂಗ್ರಾಮಕ್ಕಾಗಿ ಅವರು ಮಾಡಿದ ಬಲಿದಾನವನ್ನು ಸ್ಮರಿಸಲು ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಮುಂಬರುವ ಪೀಳಿಗೆಗೆ ಬುಡಕಟ್ಟು ಜನರು ದೇಶಕ್ಕೆ ನೀಡಿರುವ ಕೊಡುಗೆಯನ್ನು ತಿಳಿಸುವ ಸಲುವಾಗಿ, 2021 ನೇ ವರ್ಷದ 75ನೇ ಅಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷ ನವೆಂಬರ್ 15 ರಂದು “ಜನಜಾತೀಯ ಗೌರವ ದಿವಸ್” ಆಚರಿಸಲು ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ್ದರು.
ಬಳ್ಳಾರಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ. ಸುಲೇಖಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುಡಕಟ್ಟು ಸಂಸ್ಕೃತಿಯು ಭಾರತದ ಶ್ರೀಮಂತಿಕೆಗೆ ಪ್ರತೀಕವಾಗಿದ್ದು, ಅಂತಹ ಸಂಸ್ಕೃತಿಯನ್ನು ಉಳಿಸಲು ಮತ್ತು ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಬಿರ್ಸಾ ಮುಂಡಾ ರವರ ಜೀವನವನ್ನು ಯುವ ಪೀಳಿಗೆಯವರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇತಿಹಾಸ ಉಪನ್ಯಾಸಕ ಶಾಮಣ್ಣ ಅವರು ಮಾತನಾಡಿ, ಭಾರತದ ಸ್ವಾತಂತ್ರö್ಯ ಹೋರಾಟದಲ್ಲಿ ಆದಿವಾಸಿಗಳು ಅನೇಕ ರೀತಿಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಮತ್ತು ಅವರು ಆದಿವಾಸಿಗಳ ನಿಜವಾದ ಧ್ವನಿಯಾಗಿದ್ದರು ಎಂದು ಸ್ಮರಿಸಿದರು. ಅಲ್ಲದೆ, ಬಿರ್ಸಾ ಮುಂಡಾ ಅವರನ್ನು ಪ್ರೀತಿಯಿಂದ ‘ಧರ್ತಿ ಅಬ್ಬಾ' (ಭೂಮಿಯ ಪಿತಾಮಹ) ಎಂದು ಕರೆಯಲಾಗುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಶ್ರೀನಿವಾಸ ಮೂರ್ತಿ (ಸಮಾಜಶಾಸ್ತç) ಹಾಗೂ ಚಾಂದ್ ಬಾಷಾ (ಕನ್ನಡ) ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ನಿವೇಶನ, ಕಟ್ಟಡ ಮುಟ್ಟುಗೋಲು ; ಆದೇಶದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರವೇ ಪ್ರಮುಖ ಆಧಾರಸ್ತಂಭ: ಶಾಸಕ ಯಶವಂತರಾಯಗೌಡ ಪಾಟೀಲಕಳೆದುಹೋದ ೭೫ ಸಾವಿರ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸಿದ ಪೊಲೀಸರುಇಂಡಿ: ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆಯಿಂದ ಗೋಶಾಲೆ ನಿರ್ಮಾಣಕ್ಕೆ ಭೂಮಿಪೂಜೆ; 11 ಲಕ್ಷ ರೂ. ಅನುದಾನ ಘೋಷಿಸಿದ ಶಾಸಕ ಯಶವಂತರಾಯಗೌಡ ಪಾಟೀಲ*ಕಾಮನ್‌ವೆಲ್ತ್ ಮಹಿಳಾ ಸಂಸದರು ಮತ್ತು ಶಾಸಕರ ಸಮ್ಮೇಳನದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಭಾಗಿ*ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಭಾಗ ೧ ರಲ್ಲಿ ಮಕ್ಕಳ ದಿನಾಚರಣೆಸಾಹಿತ್ಯ ಕೃತಿಗಳು ಅನುಭವದ ಜ್ಞಾನ ಹಂಚುವ ಮಾಧ್ಯಮ: ಡಾ. ವಿಶ್ವನಾಥ ಪಾಟೀಲಎರಡನೇ ಬಾರಿಗೆ ಮಾರಿಹಾಳ ಪಿಕೆಪಿಎಸ್ ಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ನಮಗೆ ಹೆಮ್ಮೆ.*ಯೋಗ ರತ್ನ ಡಾ. ಸಂತೋಷ ಗುರೂಜಿ ಅವರಿಗೆ ಸನ್ಮಾನ* ಬಿ ಆರ್ ಅಂಬೇಡ್ಕರ್ ನಿಗಮದ ಸದಸ್ಯ ನಿಂಗಪ್ಪ  ಅರಿಕೆರಿಗೆ ಸತ್ಕಾರ