Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಭಾಗ ೧ ರಲ್ಲಿ ಮಕ್ಕಳ ದಿನಾಚರಣೆ

ಅಥಣಿ: ಅಥಣಿಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಭಾಗ ೧ ರ  ವಸತಿ ನಿಲಯದಲ್ಲಿ ಸೋಮವಾರದಂದು ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
 ಮುಖ್ಯ ಅತಿಥಿಯಾಗಿ ಸಾಹಿತಿ ಶಿಕ್ಷಕಿ ರೋಹಿಣಿ ಯಾದವಾಡ ಅವರು ಆಗಮಿಸಿ ಮಕ್ಕಳ ದಿನಾಚರಣೆ ಆಚರಣೆಯ ಮಹತ್ವ ಕುರಿತು ಮಾತನಾಡುತ್ತ ಮಕ್ಕಳಲ್ಲಿ ಇಂದು ಸಹಜ ಮುಗ್ಧತೆ ಕಳೆದುಕೊಂಡು ಕೃತಕ ಪ್ರಬುದ್ಧತೆಯನ್ನು ಕಾಣುತ್ತಿದ್ದೆವೆ. ನಮ್ಮ ಸಂಸ್ಕ್ರತಿಯನ್ನು ಮರೆತು ಗಾಜಿನ ಪರದೆಯ ಹಿಂದೆ ( ಮೊಬೈಲ್ ನಲ್ಲಿ) ಕಳೆದು ಹೋಗುತ್ತಿದ್ದಾರೆ. ಆಧುನಿಕ ಯುಗದಲ್ಲಿ ಮಕ್ಕಳು ಆತ್ಮವಿಶ್ವಾಸ,  ವಿವಿಧ ಕೌಶಲ್ಯಗಳನ್ನು ಹೊಂದುವುದು ಮುಖ್ಯವಾಗಿದೆ  ಎಂದು ಹೇಳುತ್ತ, ಎಷ್ಟೇ ಆದುನಿಕ ತಂತ್ರಜ್ಞಾನ ಬಂದರೂ ಮನುಷ್ಯನ ಬುದ್ಧಿವಂತಿಕೆಯ ಮೇಲೆ ಅದು ನಿರ್ಮಾಣಗೊಂಡಿರುವುದು ಎಂಬುದು ತಿಳಿದಿರಬೇಕು. ಹೀಗಾಗಿ ಮಾನವನ ಬುದ್ಧಿವಂತಿಕೆಗೆ ಸರ್ವಕಾಲಕ್ಕೂ ಬೆಲೆ ಇದೆ ಎಂದು ಹೇಳಿದರು. 
ನಿಲಯ ಪಾಲಕರಾದ ಪಾರ್ವತಿ ಮಲಗೌಡರ ಮಾತನಾಡಿ ಮಕ್ಕಳು ಶಿಸ್ತು, ಶೃದ್ಧೆಯಿಂದ ತಾವಿಟ್ಟುಕೊಂಡ ಗುರಿಯನ್ನು ಮುಟ್ಟಲು ಸತತ ಪರಿಶ್ರಮಿಗಳಾಗಬೇಕೆಂದರು. ವಿದ್ಯಾರ್ಥಿನಿ ಪ್ರತೀಕ್ಷಾ ತೀರ್ಥ ಚಾಚಾ ನೆಹರು ಅವರ ಬಗ್ಗೆ ಭಾಷಣ ಮಾಡಿದಳು.
 ಅಧ್ಯಕ್ಷತೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ವೆಂಕಟೇಶ ಕುಲಕರ್ಣಿ ಅವರು ವಹಿಸಿ ಮಕ್ಕಳು ಪಠ್ಯದೊಂದಿಗೆ ಪಠ್ಯೇತರವಾಗಿಯೂ ಆಸಕ್ತಿಯನ್ನು ಬೆಳೆಸಿಕೊಂಡು ಸರ್ವತೋಮುಖವಾಗಿ ಬೆಳೆಯಬೇಕೆಂದರು.
      ಈ ಸಮಯದಲ್ಲಿ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾರಂಭದಲ್ಲಿ ನೆಹರು ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸುವುದರೊಂದಿಗೆ ಕೇಕ್ ಕತ್ತರಿಸಲಾಯಿತು.
ಈ ಸಂದರ್ಭದಲ್ಲಿ ಲಕ್ಷ್ಮಿ ಎಣ್ಣಿ, ಲಕ್ಷ್ಮಿ ಕಟ್ಟಿ, ರಾಜೇಶ್ವರಿ ತೋಡಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕುಮಾರಿ ಭಾಗ್ಯಶ್ರೀ ಮಾಳಗೊಂಡ  ಸ್ವಾಗತಿಸಿದರು . ಕುಮಾರಿ ಸವಿತಾ ತಾಂವಶಿ ಕಾರ್ಯಕ್ರಮ ನಿರೂಪಿಸಿದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ನಿವೇಶನ, ಕಟ್ಟಡ ಮುಟ್ಟುಗೋಲು ; ಆದೇಶದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರವೇ ಪ್ರಮುಖ ಆಧಾರಸ್ತಂಭ: ಶಾಸಕ ಯಶವಂತರಾಯಗೌಡ ಪಾಟೀಲಕಳೆದುಹೋದ ೭೫ ಸಾವಿರ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸಿದ ಪೊಲೀಸರುಇಂಡಿ: ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆಯಿಂದ ಗೋಶಾಲೆ ನಿರ್ಮಾಣಕ್ಕೆ ಭೂಮಿಪೂಜೆ; 11 ಲಕ್ಷ ರೂ. ಅನುದಾನ ಘೋಷಿಸಿದ ಶಾಸಕ ಯಶವಂತರಾಯಗೌಡ ಪಾಟೀಲ*ಕಾಮನ್‌ವೆಲ್ತ್ ಮಹಿಳಾ ಸಂಸದರು ಮತ್ತು ಶಾಸಕರ ಸಮ್ಮೇಳನದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಭಾಗಿ*ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಭಾಗ ೧ ರಲ್ಲಿ ಮಕ್ಕಳ ದಿನಾಚರಣೆಸಾಹಿತ್ಯ ಕೃತಿಗಳು ಅನುಭವದ ಜ್ಞಾನ ಹಂಚುವ ಮಾಧ್ಯಮ: ಡಾ. ವಿಶ್ವನಾಥ ಪಾಟೀಲಎರಡನೇ ಬಾರಿಗೆ ಮಾರಿಹಾಳ ಪಿಕೆಪಿಎಸ್ ಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ನಮಗೆ ಹೆಮ್ಮೆ.*ಯೋಗ ರತ್ನ ಡಾ. ಸಂತೋಷ ಗುರೂಜಿ ಅವರಿಗೆ ಸನ್ಮಾನ* ಬಿ ಆರ್ ಅಂಬೇಡ್ಕರ್ ನಿಗಮದ ಸದಸ್ಯ ನಿಂಗಪ್ಪ  ಅರಿಕೆರಿಗೆ ಸತ್ಕಾರ