ಬಳ್ಳಾರಿ. ಆ. 24:: ತಾಲೂಕಿನ ಚರಕುಂಟೆ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ನೆರೆಯ ಆಂಧ್ರಪ್ರದೇಶದಿಂದ ಭತ್ತದ ಸಸಿ ನಾಟಿ ಮಾಡಲು ಬಂದ ಉದ್ದೆಹಾಳ್ ಗ್ರಾಮದ ಕೃಷಿ ಕಾರ್ಮಿಕರು ಮಹೇಂದ್ರ ಜೀತು ಗೂಡ್ಸ್ ಗಾಡಿ ಯ ಟೈಯರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿದೆ, ಈ ಅಪಘಾತದಲ್ಲಿ ಸುಮಾರು 15ರಿಂದ 20 ಜನ ಗಾಯಗೊಂಡಿದ್ದಾರೆ,
ಪ್ರತಿ ದಿಂದಂತೆ ಈ ದಿನವೂ ಸಹ ಕೃಷಿ ಕಾರ್ಮಿಕರು ಕೃಷಿ ಕೆಲಸಕ್ಕೆ ಮಹಿಂದ್ರಾ ಜಿತೋ ಗಾಡಿಯಲ್ಲಿ ಬಂದಿದ್ದಾರೆ ಈ ಗಾಡಿಯಲ್ಲಿ 16 ಜನ ಮಹಿಳೆಯರು 10 ಜನ ಪುರುಷ ಕೂಲಿ ಕಾರ್ಮಿಕರಿದ್ದು ಅಪಘಾತದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾದರೆ ನಾಲ್ಕೈದು ಜನರು ಮೂಳೆಮುರಿತದಂತ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ ಎಲ್ಲರನ್ನೂ ಎರಡು ಆಂಬುಲೆನ್ಸ್ ಗಳಲ್ಲಿ ಟ್ರಾಮಾ ಕೆರ್ ಸೆಂಟರ್ ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ನಾಲ್ಕು ಜನ ಗಂಭೀರ ಗಾಯಗೊಂಡಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.