Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಮಹಾರಾಣಾ ಪ್ರತಾಪಸಿಂಹ ಅವರ ಪುತ್ಥಳಿ ಅನಾವರಣ ಹೆಮ್ಮೆಯ ಸಂಗತಿ-ಕೂಚಬಾಳ

ಸರ್ವ ಸಮಾಜದ ಸಹಭಾಗಿತ್ವದಲ್ಲಿ ಐತಿಹಾಸಿಕ ಸಮಾರಂಭ * ರಾಜ್ಯದ ವಿವಿಧ ಭಾಗಗಳಿಂದ ಜನರ ಆಗಮನ

ತಾಳಿಕೋಟೆ, ಐತಿಹಾಸಿಕ ಹಿನ್ನೆಲೆಯುಳ್ಳ ತಾಳಿಕೋಟೆ ನಗರದಲ್ಲಿ ಮೇವಾಡದ ಮಹಾನ್ ದೊರೆ, ವೀರಶಿರೋಮಣಿ ಮಹಾರಾಣಾ ಪ್ರತಾಪಸಿಂಹ ಅವರ ಭವ್ಯ ಕಂಚಿನ ಪುತ್ಥಳಿ ಅನಾವರಣಗೊಳ್ಳುತ್ತಿರುವುದು ಇಡೀ ನಗರದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.
       ಮಹಾರಾಣಾಪ್ರತಾಪಸಿಂಹ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಇದೇ ದಿ.೧೫ ರಂದು ನಡೆಯಲಿರುವ ನಿಮಿತ್ಯ ಶುಕ್ರವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಮಹಾರಾಣಾ ಪ್ರತಾಪಸಿಂಹ ಅವರು ತಮ್ಮ ಜೀವನದಲ್ಲಿ ಸರ್ವಸ್ವವನ್ನೇ ಕಳೆದುಕೊಂಡರೂ ಸ್ವಾಭಿಮಾನವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂಬ ದೃಢಸಂಕಲ್ಪದೊಂದಿಗೆ ಹೋರಾಡಿದ ಮಹಾನ್ ವೀರರು. ರಾಷ್ಟ್ರದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಯಾವುದೇ ಸಂದರ್ಭದಲ್ಲಿಯೂ ಶತ್ರುಗಳ ಮುಂದೆ ತಲೆಬಾಗದೆ ವೀರೋಚಿತ ಹೋರಾಟ ನಡೆಸಿದ ಅವರ ಜೀವನಾದರ್ಶಗಳು ಇಂದಿನ ಯುವಪೀಳಿಗೆಗೆ ಸ್ಫೂರ್ತಿದಾಯಕವಾಗಿವೆ. ಇಂತಹ ಮಹಾನ್ ಚೇತನದ ಕಂಚಿನ ಪುತ್ಥಳಿಯನ್ನು ತಾಳಿಕೋಟೆ ನಗರದಲ್ಲಿ ಪ್ರತಿಷ್ಠಾಪಿಸಬೇಕು ಎಂಬುದು ಇಲ್ಲಿನ ರಜಪೂತ ಸಮಾಜದ ಬಂಧುಗಳ ಬಹುದಿನಗಳ ಕನಸಾಗಿತ್ತು. ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ರಜಪೂತ ಸಮಾಜದ ಕೆಲವೇ ಕೆಲವು ಪ್ರಮುಖರು ಹಾಗೂ ಬಂಧುಗಳು ಒಗ್ಗೂಡಿ, ಯಾವುದೇ ಸರ್ಕಾರದ ಅನುದಾನ ಅಥವಾ ಹೊರಗಿನ ಜನರ ನೆರವನ್ನು ಅವಲಂಬಿಸದೆ, ಸಮಾಜದ ಸ್ವಂತ ಸಂಪನ್ಮೂಲ ಹಾಗೂ ಸಹಕಾರದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಭವ್ಯ ಕಂಚಿನ ಪುತ್ಥಳಿಯನ್ನು ನಿರ್ಮಿಸಿರುವುದು ವಿಶೇಷವಾಗಿದೆ. ಸಮಾಜದ ಒಗ್ಗಟ್ಟು, ಅಭಿಮಾನ ಹಾಗೂ ಮಹಾನ್ ವ್ಯಕ್ತಿಯ ಮೇಲಿನ ಗೌರವಕ್ಕೆ ಈ ಕಾರ್ಯ ಸಾಕ್ಷಿಯಾಗಿದೆ ಎಂದರು.
೧೫ ರಂದು ಮೂರ್ತಿ ಅನಾವರಣ ಕಾರ್ಯಕ್ರಮ
     ನ.೧೫ರಂದು ಭಾನುವಾರ ತಾಳಿಕೋಟೆಯ ಮಹಾರಾಣಾ ಪ್ರತಾಪಸಿಂಹ ವೃತ್ತದಲ್ಲಿ ಈ ಭವ್ಯ ಕಂಚಿನ ಪುತ್ಥಳಿಯ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಮಾಜಿ ಕೇಂದ್ರ ಸಚಿವ ಹಾಗೂ ಲೋಕಸಭಾ ಸದಸ್ಯ ಅನುರಾಗ್ ಠಾಕೂರ್ ಅವರು ಪುತ್ಥಳಿಯನ್ನು ಅನಾವರಣಗೊಳಿಸಲಿದ್ದು, ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ಸರ್ಕಾರದ ಸಚಿವ ಅಜಯ್ ಸಿಂಗ್ ಅವರು ವಹಿಸಲಿದ್ದು, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಶಿವಾನಂದ ಪಾಟೀಲ, ಸ್ಥಳೀಯ ಶಾಸಕ ಸಿ.ಎಸ್. ನಾಡಗೌಡ, ರಾಜ್ಯ ಸಭಾ ಸದಸ್ಯ ನಾರಾಯಣ ಬಾಂಡಗೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಲ್ಲ ಜನರು ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರದ ವೈಭವವತೆಯನ್ನು ಹೆಚ್ಚಿಸಬೇಕೆಂದರು.
ಸರ್ವ ಸಮಾಜದ ಸಹಭಾಗಿತ್ವದಲ್ಲಿ ಕಾರ್ಯಕ್ರಮ-ಸುರೇಶ
      ಮಹಾರಾಣಾ ಪ್ರತಾಪಸಿಂಹ ಅವರು ಕೇವಲ ಒಂದು ಸಮಾಜಕ್ಕೆ ಸೇರಿದ ವ್ಯಕ್ತಿಯಲ್ಲ. ದೇಶದ ಸ್ವಾಭಿಮಾನ, ಸ್ವಾತಂತ್ರ್ಯ, ರಾಷ್ಟ್ರಪ್ರೇಮ ಹಾಗೂ ದೇಶಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ರಾಷ್ಟ್ರದ ಮಹಾನ್ ವೀರರಾಗಿದ್ದಾರೆ. ಹೀಗಾಗಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗದೆ, ಸರ್ವ ಸಮಾಜದ ಜನರ ಸಹಭಾಗಿತ್ವದಲ್ಲಿ ನಡೆಯುತ್ತಿರುವುದು ಈ ಸಮಾರಂಭದ ಮಹತ್ವವನ್ನು ಹೆಚ್ಚಿಸಿದೆ ಎಂದು ರಜಪೂತ ಸಮಾಜದ ಮುಖಂಡ ಸುರೇಶ ಹಜೇರಿ ಅವರು ಹೇಳಿದರು.
      ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಳಿಕೋಟೆ ನಗರದ ಎಲ್ಲ ಸಮಾಜಗಳ ಮುಖಂಡರು, ಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಕೈಜೋಡಿಸಿದ್ದು, ನಗರದಲ್ಲಿ ಕಳೆದ ೧೫ ದಿನಗಳಿಂದ ಸಿದ್ಧತೆಗಳು ಭರದಿಂದ ಸಾಗಿವೆ. ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಅಘೋರಿ ತಂಡದ ವಿಶೇಷತೆ
       ನ.೧೫ರಂದು ಬೆಳಿಗ್ಗೆ ರಜಪೂತ ಗಲ್ಲಿಯಿಂದ ಮಹಾರಾಣಾ ಪ್ರತಾಪಸಿಂಹ ಅವರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ವಾದ್ಯಮೇಳಗಳೊಂದಿಗೆ ಆರಂಭವಾಗಲಿದೆ. ಬೆಳಿಗ್ಗೆ ೮ರಿಂದ ೧೧.೩೦ರವರೆಗೆ ಅಥವಾ ಮಧ್ಯಾಹ್ನ ೧೨ ಗಂಟೆಯವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದೆ. ಮುಂಬೈನ ಅಘೋರಿ ತಂಡದ ವಿಶೇಷ ಪ್ರದರ್ಶನ, ನಾಸಿಕ್ ಡೋಲ್, ವಿವಿಧ ವಾದ್ಯಮೇಳಗಳು ಹಾಗೂ ಕುದುರೆ ಕುಣಿತ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಲಿವೆ. 
ರಿಮೋಟ ಕಂಟ್ರೋಲ್ ಮೂಲಕ ಅನಾವರಣ
ಮಹಾರಾಣಾಪ್ರತಾಪಸಿಂಹ್ ಅವರ ಮೂರ್ತಿ ಅನಾವರಣವನ್ನು ಉತ್ತರ ಕರ್ನಾಟಕದಲ್ಲಿಯೇ ವಿಶೇಷತೆಯಾಗಿ ರಿಮೋಟ್ ಕಂಟ್ರೋಲ್ ಮೂಲಕ ಅನಾವರಣಗೊಳಿಸುವ ಸದ್ದತೆಯನ್ನು ಮಾಡಿಕೊಳ್ಳಲಾಗಿದೆ.
ಕಾರ್ಯಕ್ರಮ ಸ್ಥಳ ಬದಲಾವಣೆ
ರಾಣಾಪ್ರತಾಪ ಮೂರ್ತಿ ಅನಾವರಣದ ನಂತರ ಕಾರ್ಯಕ್ರಮ ನಡೆಸಲು ಕನ್ನಡ ಶಾಲಾ ಮೈಧಾನದಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿತ್ತು ಆದರೆ ಕನ್ನಡ ಶಾಲಾ ಮೈಧಾನ ಚಿಕ್ಕದಾಗಿ ಮತ್ತು ವಾಹನಗಳ ನಿಲುಗಡೆ ಒಳಗೊಂಡು ಟ್ರಾಪಿಕ್ ಸಮಸ್ಯೆ ಹೆಚ್ಚಾಗಿ ಕಂಡುಬರುವದರಿಂದ ಸಮಾಜದ ಹಾಗೂ ಊರಿನ ಹಿರಿಯ ಮುಖಂಡರ ಸಲಹೆಯ ಮೇರೆಗೆ ಎಸ್.ಕೆ.ಕಾಲೇಜ್ ಮೈಧಾನದಲ್ಲಿ ಕಾರ್ಯಕ್ರಮದ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸುರೇಶ ಹಜೇರಿ ಅವರು ತಿಳಿಸಿದರು.
ಈ ಸಮಯದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಉಪಾಧ್ಯಕ್ಷ ರಥನಸಿಂಗ್ ಕೊಕಟನೂರ, ಬಾಲಾಜಿಸಿಂಗ್ ಹಜೇರಿ, ಗೋವಿಂದಸಿಂಗ್ ಮೂಲಿಮನಿ, ರಘುಸಿಂಗ್ ಹಜೇರಿ, ಗೋವಿಂದಸಿಂಗ್ ಗೌಡಗೇರಿ, ಸಂಜೀವಕುಮಾರ ಹಜೇರಿ, ಪ್ರಲ್ಹಾದಸಿಂಗ್ ಹಜೇರಿ, ಪ್ರದೀಪ ವಿಜಾಪೂರ, ಕೇಸರಸಿಂಗ್ ಹಜೇರಿ, ಜೈಸಿಂಗ್ ಮೂಲಿಮನಿ, ಸುರೇಶ ಅಂಬರಸಿಂಗ್ ಹಜೇರಿ, ಬಾಬು ಹಜೇರಿ, ವಿಠ್ಠಲಸಿಂಗ್ ಅಮರಸಿಂಗ್ ಹಜೇರಿ, ವಿಠ್ಠಲಸಿಂಗ್ ಹಜೇರಿ(ಬೇಕಿನಾಳ), ಮಾನಸಿಂಗ್ ಕೊಕಟನೂರ, ಅರುಣ ದಡೇದ, ನರಸಿಂಗ್ ವಿಜಾಪೂರ, ಸಂತೋಷ ಹಜೇರಿ, ರಮೇಶ ಗೌಡಗೇರಿ, ಮೊದಲಾದವರು ಇದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹ: ಆರಂಭಿಕ ಕ್ರಮವೇ ಪರಿಹಾರದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹ: ಆರಂಭಿಕ ಕ್ರಮವೇ ಪರಿಹಾರಮಹಾರಾಣಾ ಪ್ರತಾಪಸಿಂಹ ಅವರ ಪುತ್ಥಳಿ ಅನಾವರಣ ಹೆಮ್ಮೆಯ ಸಂಗತಿ-ಕೂಚಬಾಳಮುದ್ದೇಬಿಹಾಳದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಹಸಿರು ತೋರಣ ಬಳಗದಿಂದ ಸನ್ಮಾನಗೋದಾವರಿ ಬಯೋರಿಫೈನರೀಸ್‌ನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ: ಕೇನ್ ಕ್ಯಾರಿಯರ್ ಪೂಜೆ ನೆರವೇರಿಕೆಸಿಗ್ನಲ್ ಇಲ್ಲ, ವೈಜ್ಞಾನಿಕ ಹಂಪ್‌ಗಳಿಲ್ಲ, ಪಾದಚಾರಿ ಮಾರ್ಗವೂ ಇಲ್ಲ; ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ!"ಮೂಡಲಗಿಯಲ್ಲಿ ಶ್ರೀ ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ"ಕಲಾ ಪ್ರತಿಭೆಯೂ ಮಕ್ಕಳ ಭವಿ? ರೂಪಿಸುತ್ತದೆ: ಎ.ಆರ್. ಛಬ್ಬಿಕನ್ನಡದ ಶಕ್ತಿ ಮಹಾಕವಿ ರನ್ನ: ಚಂದ್ರಶೇಖರ ದೇಸಾಯಿಜುಜಾಟದ ಮೇಲೆ ಪೊಲೀಸರ ದಾಳಿ