Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bagalkot

ಕಲಾ ಪ್ರತಿಭೆಯೂ ಮಕ್ಕಳ ಭವಿ? ರೂಪಿಸುತ್ತದೆ: ಎ.ಆರ್. ಛಬ್ಬಿ

 

ಮಹಾಲಿಂಗಪುರ: ನ. ೧೩: ಅಂಕಗಳ ಸಾಧನೆಯ? ಮಕ್ಕಳ ಭವಿ? ರೂಪಿಸುವುದಿಲ್ಲ, ಅವರಲ್ಲಿರುವ ಕಲಾ ಪ್ರತಿಭೆ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ಅಭಿರುಚಿಗಳೂ ಭವಿ?ದ ಸಾಧನೆಗೆ ಭದ್ರ ಬುನಾದಿಯಾಗುತ್ತವೆ ಎಂದು ಸಮನ್ವಯಾಧಿಕಾರಿ ಎ.ಆರ್. ಛಬ್ಬಿ ಹೇಳಿದರು.

ರಬಕವಿ-ಬನಹಟ್ಟಿ ತಾಲೂಕಿನ ಬಿಸನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುಧೋಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸೈದಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಭಾ ಕಾರಂಜಿಯು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸುವ ಮಹತ್ವದ ಶೈಕ್ಷಣಿಕ ವೇದಿಕೆಯಾಗಿದೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಭಾ?ಣ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಕ್ಕಳ ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಶೈಕ್ಷಣಿಕ ವ?ದ ಮೊದಲ ಹಂತದಲ್ಲಿ ಕ್ರೀಡಾಕೂಟ ಆಯೋಜಿಸಿ ಕ್ರೀಡಾ ಸಾಧಕರನ್ನು ಗುರುತಿಸಿ ಗೌರವಿಸಿದರೆ, ಎರಡನೇ ಹಂತದಲ್ಲಿ ಪ್ರತಿಭಾ ಕಾರಂಜಿ ಮೂಲಕ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಮುಂದಿನ ಹಂತದ ಸ್ಪರ್ಧೆಗಳಿಗೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾಲಿಂಗಪ್ಪ ಮೋಪಗಾರ ಮಾತನಾಡಿ, ಗ್ರಾಮದ ಪ್ರಮುಖರು, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಪಾಲಕ-ಪೋ?ಕರ ಸಹಕಾರದಿಂದ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾದ ವೇದಿಕೆ ಸಿದ್ಧಪಡಿಸಲಾಗಿದೆ. ಮಕ್ಕಳ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ದೊರೆತಾಗ ಅವರು ಉತ್ತಮ ಸಾಧನೆ ಮಾಡಲು ಸಾಧ್ಯ. ಪ್ರತಿಭಾ ಕಾರಂಜಿ ಮಕ್ಕಳ ಭವಿ?ಕ್ಕೆ ಬೆಳಕಿನ ದಾರಿಯಾಗಲಿ ಎಂದು ಶುಭ ಹಾರೈಸಿ, ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರನ್ನು ಅಭಿನಂದಿಸಿದರು.

ಮುಖ್ಯಶಿಕ್ಷಕ ಎಂ.ಕೆ. ಮೆಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಶಿರೋಳ ಮಾತನಾಡಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವುದರ ಜೊತೆಗೆ ಪ್ರತಿಯೊಂದು ಮಗುವೂ ಒಂದಲ್ಲ ಒಂದು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪಾಲಕರು ಹಾಗೂ ಶಿಕ್ಷಕರು ಪ್ರೋತ್ಸಾಹಿಸಬೇಕು. ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮತ್ತು ಅನುಭವವೇ ನಿಜವಾದ ಸಾಧನೆ ಎಂದು ಹೇಳಿದರು.

ಅನು?ನ ಅಧಿಕಾರಿಗಳಾದ ಬಿ.ಕೆ. ಸಬರದ, ಎಸ್.ಎಂ. ಮುಗೆನ್ನವರ ಹಾಗೂ ಪ್ರಕಾಶ ಉದಗಟ್ಟಿ ನಿರ್ಣಾಯಕರಾಗಿ ಭಾಗವಹಿಸಿದ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳ ರೂಪುರೇ?ಗಳನ್ನು ತಿಳಿಸಿ, ಮೌಲ್ಯಮಾಪನದಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ನ್ಯಾಯಯುತವಾಗಿ ಅಂಕಗಳನ್ನು ನೀಡುವಂತೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜ ಮುನ್ನೊಳ್ಳಿ (ಪಿಡಿಒ), ಪರಪ್ಪ ಬ್ಯಾಕೋಡ, ಲಾಲಸಾಬ ಪೆಡಾರಿ, ಭೀಮಶಿ ಸಸಾಲಟ್ಟಿ, ಗಿರೀಶ ಸುಳ್ಳಣ್ಣವರ, ಗೌರೀಶ ನಾಯಕ, ಮಹಾಲಿಂಗ ಮುಗಳಖೋಡ, ಮಾರುತಿ ಕರೋಶಿ, ಕಲ್ಲಪ್ಪಗೌಡ ಪಾಟೀಲ, ಚಂದು ನಾಯಕ, ಚೆನ್ನು ದೇಸಾಯಿ, ಮುರಿಗೆಪ್ಪ ಶಿರೋಳ, ಜ್ಯೋತೆಪ್ಪ ಕಪರಟ್ಟಿ, ಅರ್ಜುನ ಮರನೂರ, ಎಸ್.ಎಂ. ಹಾರೂಗೊಪ್ಪ, ಸಿ.ಕೆ. ಮುರಗೋಡ, ಪತ್ರಕರ್ತ ರಾಘವೇಂದ್ರ ನೀಲಣ್ಣವರ, ಸವಿತಾ ಪೂಜಾರಿ, ಶಿವನವ್ವ ದೇಶನೂರ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹ: ಆರಂಭಿಕ ಕ್ರಮವೇ ಪರಿಹಾರದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹ: ಆರಂಭಿಕ ಕ್ರಮವೇ ಪರಿಹಾರಮಹಾರಾಣಾ ಪ್ರತಾಪಸಿಂಹ ಅವರ ಪುತ್ಥಳಿ ಅನಾವರಣ ಹೆಮ್ಮೆಯ ಸಂಗತಿ-ಕೂಚಬಾಳಮುದ್ದೇಬಿಹಾಳದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಹಸಿರು ತೋರಣ ಬಳಗದಿಂದ ಸನ್ಮಾನಗೋದಾವರಿ ಬಯೋರಿಫೈನರೀಸ್‌ನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ: ಕೇನ್ ಕ್ಯಾರಿಯರ್ ಪೂಜೆ ನೆರವೇರಿಕೆಸಿಗ್ನಲ್ ಇಲ್ಲ, ವೈಜ್ಞಾನಿಕ ಹಂಪ್‌ಗಳಿಲ್ಲ, ಪಾದಚಾರಿ ಮಾರ್ಗವೂ ಇಲ್ಲ; ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ!"ಮೂಡಲಗಿಯಲ್ಲಿ ಶ್ರೀ ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ"ಕಲಾ ಪ್ರತಿಭೆಯೂ ಮಕ್ಕಳ ಭವಿ? ರೂಪಿಸುತ್ತದೆ: ಎ.ಆರ್. ಛಬ್ಬಿಕನ್ನಡದ ಶಕ್ತಿ ಮಹಾಕವಿ ರನ್ನ: ಚಂದ್ರಶೇಖರ ದೇಸಾಯಿಜುಜಾಟದ ಮೇಲೆ ಪೊಲೀಸರ ದಾಳಿ