Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bagalkot

ಗೋದಾವರಿ ಬಯೋರಿಫೈನರೀಸ್‌ನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ: ಕೇನ್ ಕ್ಯಾರಿಯರ್ ಪೂಜೆ ನೆರವೇರಿಕೆ


ಮಹಾಲಿಂಗಪುರ: ೨೦೨೬-೨೭ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಆರಂಭದ ಅಂಗವಾಗಿ ಸಮೀರವಾಡಿಯ ಗೋದಾವರಿ ಬಯೋರಿಫೈನರೀಸ್ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಕೇನ್ ಕ್ಯಾರಿಯರ್ ಪೂಜಾ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಕಾರ್ಖಾನೆಯ ಸುಗಮ ಕಾರ್ಯನಿರ್ವಹಣೆ, ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಕಬ್ಬು ನುರಿಸುವಿಕೆ ಹಾಗೂ ರೈತರು, ಕಾರ್ಮಿಕರು ಮತ್ತು ಕಾರ್ಖಾನೆಯ ಅಭಿವೃದ್ಧಿ ಹಾಗೂ ಸಮೃದ್ಧಿಗಾಗಿ ವಿಶೇ? ಪೂಜೆ ಸಲ್ಲಿಸಲಾಯಿತು. ಪೂಜಾ ಕಾರ್ಯಕ್ರಮವನ್ನು ವಲ್ಲಭ ಕವಟೇಕರ ಅವರು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಕಾರ್ಖಾನೆಯ ವಿ.ಎಸ್. ಕಣಬೂರ ಹಾಗೂ ನಿರ್ಮಲಕುಮಾರ ಜಾ ದಂಪತಿಗಳು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಸಕ್ಕರೆ ಕಾರ್ಖಾನೆಯ ಬೆಳವಣಿಗೆಯಲ್ಲಿ ರೈತರ ಪಾತ್ರ ಮಹತ್ವದ್ದಾಗಿದ್ದು, ರೈತರು ಮತ್ತು ಕಾರ್ಖಾನೆಯ ನಡುವಿನ ಉತ್ತಮ ಬಾಂಧವ್ಯದಿಂದ ಕಬ್ಬು ನುರಿಸುವ ಹಂಗಾಮು ಯಶಸ್ವಿಯಾಗಲಿ ಎಂದು ಆಶಿಸಿದರು. ಪ್ರಸಕ್ತ ಹಂಗಾಮಿನಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಕಾರ್ಖಾನೆಯು ಉತ್ತಮ ಕಾರ್ಯನಿರ್ವಹಣೆ ಮಾಡಲಿ ಎಂಬ ಆಶಯ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ರಾಮನಗೌಡ ಪಾಟೀಲ,ರಂಗನಗೌಡ ಪಾಟೀಲ, ಬಿ.ಜಿ. ಹೊಸುರ, ಲಕ್ಷ್ಮಣ ಹುಚರೆಡ್ಡಿ, ಕೆ.ಟಿ. ಪಾಟೀಲ,ಡಾ. ಎಂ.ವಿ. ಬಕ್ಷೀ,ಕಿಶೋರ ಮಸೂರಕರ, ಆರ್.ಕೆ. ಮಳಲಿ, ಭೀಮಸಿ ತೊಳಮಟ್ಟಿ,ಮಹಾಲಿಂಗ ಸನದಿ,ಮಲ್ಲಿಕಾರ್ಜುನ ಕಾನಗೌಡ, ಎಂ.ಜಿ. ಅಂಗಡಿ,ಕೆಂಪಣ್ಣ ಅಂಗಡಿ, ತಮ್ಮಣ್ಣ ನಾಯಿಕ, ಪರಪ್ಪ ಬ್ಯಾಕೋಡ, ಮಹಾದೇವ ಮಾರಾಪೂರ, ಮಹಾದೇವ ಕರೋಶಿ,ರಮೇಶ ಕಲ್ಲಾರ, ಪರಶು ಚಿನಗುಂಡಿ, ಶ್ರೀಶೈಲ ಮೈಗೂರ, ಲಕ್ಷ್ಮಣ ಕತ್ತಿ, ಎಂ.ಬಿ. ಪಾಟೀಲ, ಹಣಮಂತ ತೇರದಾಳ ಸೇರಿದಂತೆ ಹಲವು ರೈತ ಮುಖಂಡರು ಸೇರಿದಂತೆ ಸಿಪಿಐ ರಾಜು ಪಾಟೀಲ, ತಹಶೀಲ್ದಾರ ಗಿರೀಶ ಸ್ವಾದಿ, ಪಿಎ??? ಪ್ರೀತಮ ನಾಯಿಕ ಹಾಗೂ ಕಾರ್ಖಾನೆಯ ಅಧಿಕಾರಿಗಳಾದ ಬಿ.ಆರ್. ಬಕ್ಷೀ, ದಿನೇಶ ಶರ್ಮಾ, ನಂದಕುಮಾರ ಕುಂಚಗೆ,ವಿ.ಎಸ್. ಕಣಬೂರ, ಎಂ.ಕೆ. ಚೌಸ್,ಡಿ.ಎನ್. ಪಾಟೀಲ, ವಿ.ಕೆ. ಕಿಲಾರಿ, ಕೆ.ವಿ. ಗೌಡರ,ರವೀಂದ್ರ ಬಾಗೋಜಿ, ಆರ್.ವಿ. ಸೋನವಾಲ್ಕರ, ಎಂ. ರಾಮಚಂದ್ರ,ಸೋಮಶೇಖರ ಪೇಟಿಮನಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
೧೩ mಟಠಿ ೦೧ ಫೋಟೋ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹ: ಆರಂಭಿಕ ಕ್ರಮವೇ ಪರಿಹಾರದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹ: ಆರಂಭಿಕ ಕ್ರಮವೇ ಪರಿಹಾರಮಹಾರಾಣಾ ಪ್ರತಾಪಸಿಂಹ ಅವರ ಪುತ್ಥಳಿ ಅನಾವರಣ ಹೆಮ್ಮೆಯ ಸಂಗತಿ-ಕೂಚಬಾಳಮುದ್ದೇಬಿಹಾಳದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಹಸಿರು ತೋರಣ ಬಳಗದಿಂದ ಸನ್ಮಾನಗೋದಾವರಿ ಬಯೋರಿಫೈನರೀಸ್‌ನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ: ಕೇನ್ ಕ್ಯಾರಿಯರ್ ಪೂಜೆ ನೆರವೇರಿಕೆಸಿಗ್ನಲ್ ಇಲ್ಲ, ವೈಜ್ಞಾನಿಕ ಹಂಪ್‌ಗಳಿಲ್ಲ, ಪಾದಚಾರಿ ಮಾರ್ಗವೂ ಇಲ್ಲ; ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ!"ಮೂಡಲಗಿಯಲ್ಲಿ ಶ್ರೀ ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ"ಕಲಾ ಪ್ರತಿಭೆಯೂ ಮಕ್ಕಳ ಭವಿ? ರೂಪಿಸುತ್ತದೆ: ಎ.ಆರ್. ಛಬ್ಬಿಕನ್ನಡದ ಶಕ್ತಿ ಮಹಾಕವಿ ರನ್ನ: ಚಂದ್ರಶೇಖರ ದೇಸಾಯಿಜುಜಾಟದ ಮೇಲೆ ಪೊಲೀಸರ ದಾಳಿ