Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ರ ಚಳುವಳಿ ಅಭಿಯಾನ


ಇಂಡಿ,ಜು,೧೦ : ಇಂಡಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಯಶವಂತರಾಯಗೌಡ ವ್ಹಿ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ತಾಲೂಕಿನ ಭಾರತಿಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಇಂಡಿ ವತಿಯಿಂದ ಪ್ರಜಾಪ್ರಭುತ್ವದ ಮಾರ್ಗದಲ್ಲಿ ವಿಶಿಷ್ಟವಾದ ಸಹಿ ಸಂಗ್ರಹ ಹಾಗೂ ಪತ್ರ ಚಳುವಳಿ  ಅಭಿಯಾನದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಅಭಿಪ್ರಾಯ ಮತ್ತು ಆಶಯಗಳನ್ನು ಸಂಗ್ರಹಿಸಿ, ಮಾನ್ಯ ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರಿಗೆ ಅಂಚೆ ಮುಖಾಂತರ ಮನವಿ ಪತ್ರವನ್ನು ಕಳುಹಿಸಲಾಯಿತು.

ಶಿಕ್ಷಣ, ನೀರಾವರಿ, ರಸ್ತೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇಂಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯಶವಂತರಾಯಗೌಡ ಪಾಟೀಲ ಅವರ ಸೇವೆಯನ್ನು ಗುರುತಿಸಿ, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದೆ.

Advertisement

ಈ ಅಭಿಯಾನವು ಕ್ಷೇತ್ರದ ಜನರ ಅಭಿಮಾನ, ವಿಶ್ವಾಸ ಮತ್ತು ಆಶಯಗಳ ಪ್ರತೀಕವಾಗಿದ್ದು, ಇಂಡಿ ಕ್ಷೇತ್ರದ ಧ್ವನಿಯನ್ನು ಸರ್ಕಾರದ ಗಮನಕ್ಕೆ ತರುವ ಒಂದು ಮಹತ್ವದ ಪ್ರಯತ್ನವಾಗಿದೆ.
ಅಭಿಯಾನದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಅನೀಲಕುಮಾರ ಅತನೂರ, ರಾಹುಲ ಮಡ್ಡಿಮನಿ, ಪ್ರಕಾಶ, ಸುದೀಪ, ಸಂತೋಷ, ಅಕಬರ, ಗೋವಿಂದ, ಭರತ, ಈಶ್ವರ, ಸುರೇಶ ಸೇರಿದಂತೆ ಅನೇಕರು ಪಾಲ್ಗೋಂಡಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಜಪೂತ ಸಮೂದಾಯಗಳ ಅಭಿವೃದ್ದಿ ನಿಗಮ ಸ್ಥಾಪಿಸಲು ಮನವಿರೈತರ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ಪೂರೈಕೆಯಾಗದ ವಿದ್ಯುತ್ : ಸುರೇಬಾನ ಹೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆಸಂಸದ ಈರಣ್ಣ ಕಡಾಡಿ ಅವರ ನಿಧಿಯಿಂದ ಬಿ. ಕೆ. ಮಾಡೆಲ್ ಹೈಸ್ಕೂಲ್‌ಗೆ ಸ್ಮಾರ್ಟ್ ಬೋರ್ಡ್ ಕೊಡುಗೆ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಪದಗ್ರಹಣ ಇಂದುಖಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಶಾಸಕ ರಾಜು ಕಾಗೆ ಚಾಲನೆ ನೀಡಿದರು ಪವಾಡ ಬಸವೇಶ್ವರ ದೇವಸ್ಥಾನ ಕಳ್ಳತನ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ, ಮೂರ್ತಿ ಮರುಸ್ಥಾಪನೆಗೆ ಕ್ರಮ ? ಶಾಸಕ ಸಿ.ಎಸ್. ನಾಡಗೌಡವಿದ್ಯುತ್ ಅವಘಡ ಗುತ್ತಿಗೆ ನೌಕರ ಸಾವು ಬ್ರಿಟೀಷ್ ಭಾರತದಲ್ಲಿ ಇಳಕಲ್ ಒಂದು ಆಡಳಿತ ಕೇಂದ್ರವಾಗಿತ್ತು  : ಡಾ. ಎಸ್.ಆರ್ ನಾಗಣ್ಣನವರ್ಸಾಮಾಜಿಕ ಜವಾಬ್ದಾರಿ ಹಾಗೂ ಪರಿಸರ ಸಂರಕ್ಷಣೆಯ ಮನೋಭಾವ ಬೆಳೆಸಿಕೊಳ್ಳಬೇಕು : ನ್ಯಾ.ಜಿ.ಎ. ಮೂಲಿಮನಿ ಮತದಾರರ ಪಟ್ಟಿ ಪರಿಷ್ಕರಣೆ: ಜು.೧೧ ಮತ್ತು ೧೨ ರಂದು ಜಿಲ್ಲೆಯಲ್ಲಿ ವಿಶೇಷ ಅಭಿಯಾನ