LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Gadag

ಅರ್ಹ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಲಿ: ವಿಪುಲ್ ಬನ್ಸಲ್

ಮತದಾರರ ಪಟ್ಟಿಯ ವೀಕ್ಷಕ ವಿಪುಲ್ ಬನ್ಸಲ್ ನೇತೃತ್ವದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಗತಿ ಪರಿಶೀಲನೆ





ಗದಗ  23: "ಅರ್ಹ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ. ಹೀಗಾಗಿ, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ನಿಖರವಾಗಿ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು" ಎಂದು ವಾಣಿಜ್ಯ ತೆರಿಗೆಗಳ ಇಲಾಖೆ ಆಯುಕ್ತರು ಹಾಗೂ ಗದಗ ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕರಾದ ವಿಪುಲ್ ಬನ್ಸಲ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸೆಪ್ಟೆಂಬರ್ (23) ರವರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಸಭೆ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅರ್ಹ ಮತದಾರರ ನೋಂದಣಿ 18 ವರ್ಷ ತುಂಬಿದ ಯುವಕ- ಯುವತಿಯರು ಹಾಗೂ ಇಲ್ಲಿಯವರೆಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗದ ಅರ್ಹ ನಾಗರಿಕರ ಹೆಸರುಗಳನ್ನು ಆದ್ಯತೆಯ ಮೇರೆಗೆ ಸೇರ್ಪಡೆಗೊಳಿಸಲು ಕ್ರಮವಹಿಸಬೇಕು ಎಂದು ಹೇಳಿದರು.

ದೋಷರಹಿತ ಮತದಾರರ ಪಟ್ಟಿಯಲ್ಲಿ ಮತದಾರರ ಪಟ್ಟಿಯಲ್ಲಿರುವವರ ಹೆಸರು, ವಿಳಾಸ, ಭಾವಚಿತ್ರ ಮುಂತಾದ ತಿದ್ದುಪಡಿಗಳನ್ನು (ನಮೂನೆ 8) ರಲ್ಲಿ ತ್ವರಿತವಾಗಿ ಪರಿಶೀಲಿಸಿ ಸರಿಪಡಿಸುವುದು ಹಾಗೂ ಮೃತಪಟ್ಟ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳನ್ನು (ನಮೂನೆ 7) ನಿಯಮಾನುಸಾರ ತೆಗೆದುಹಾಕುವುದು. ಬಿ.ಎಲ್.ಓ.ಗಳ ಕರ್ತವ್ಯ ಜವಾಬ್ದಾರಿ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಮಾತನಾಡಿ ಗದಗ ಜಿಲ್ಲೆಯಲ್ಲಿ ಒಟ್ಟು 122 ಗ್ರಾಮ ಪಂಚಾಯಿತಿಗಳಿದ್ದು ವಿಧಾನ ಸಭಾ ಮತ ಕ್ಷೇತ್ರವನ್ನು ನಾಲ್ಕು ವಿಭಾಗಗಳಾಗಿ ಶಿರಹಟ್ಟಿ 65' ಗದಗ 66' ರೋಣ 67' ನರಗುಂದ 68 ವಿಂಗಡಿಸಲಾಗಿದೆ. ಒಟ್ಟು 353 ಗ್ರಾಮಗಳು ಮತ್ತು 203 ವಾರ್ಡ್ ಗಳಿವೆ. ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳಾದ ಐ.ಎನ್.ಸಿ. 967, ಬಿಜೆಪಿ 967, ಜೆಡಿಎಸ್ 62, ಸಿಪಿಐಎಮ್ 30 ಬಿಎಲ್ಎಗಳನ್ನು ಮಾಡಿವೆ.

ಜಿಲ್ಲಾಧ್ಯಂತ ಚುನಾವಣಾ ಮತಗಟ್ಟೆಗಳು 983 ಇವೆ, ಬಿಎಲ್ಓ ಗಳು 983 ಜನ ಮತ್ತು ಬಿಎಲ್ಓ ಸೂಪರ್ವೈಸರ್ಸ್ 97 ಜನ ನೇಮಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಮಾತನಾಡಿ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 9,02,947 ಮತದಾರರು ಇದ್ದು 7,82,232 ಡಿಜಿಟಲಿಕರಣಗೊಂಡಿದ್ದು ಪ್ರತಿಶತ 86.63 ಎನುಮರೇಷನ ಫಾರ್ಮ್ ಡಿಜಿಟಲಿಕರಣಗೊಂಡಿವೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್ ಮಾತನಾಡಿ ಗದಗ ಜಿಲ್ಲೆಯಲ್ಲಿ ಯುವ ಮತದಾರರು ಪಟ್ಟಿಯಲ್ಲಿ ಪುರುಷರು 2232 ಮತ್ತು ಮಹಿಳೆಯರು 1903 ಒಟ್ಟು 4135 ಯುವ ಮತದಾರರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವಿಶೇಷ ಅಭಿಯಾನದಲ್ಲಿ ಪಾಲ್ಗೊಂಡು ನೊಂದಾಯಿಸಿದ್ದಾರೆ. ಮತದಾರ ಪಟ್ಟಿ ವಿಶೇಷ ಅಭಿಯಾನದಲ್ಲಿ ಒಟ್ಟು 8166 ಹೊಸಬರು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಎಸಿ ಗಂಗಪ್ಪ ಎಂ, ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ತಹಶೀಲ್ದಾರ ಶ್ರೀನಿವಾಸ ಮೂರ್ತಿ, ಆಹಾರ ಇಲಾಖೆಯ ಉಪನಿರ್ದೇಶಕ ಎಮ್ ಎಸ್  ಪಾಟೀಲ್, ಚುನಾವಣಾ ಶಾಖೆಯ ತಹಶಿಲ್ದಾರ ಸಂತೋಷ ಹಿರೇಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ.ನಂದಾ ಹಣಬರಹಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಂ ಎಂ ತುಂಬರಮಟ್ಟಿ, ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಇತರ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೌರಕಾರ್ಮಿಕರು ಸ್ವಚ್ಚತೆಯ ಕಾವಲುಗಾರರು-ಸಿದ್ದಲಿಂಗಶ್ರೀಶಿವಾಪೂರ(ಹ) ಪ್ರಾಥಮಿಕ ಕೃಷಿ ಸಹಕಾರಿ ಸಂಘಕ್ಕೆ ೨೬ ಲಕ್ಷ ರೂ. ಲಾಭಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಪ್ರವಾದಿ ಮಹಮ್ಮದರ ಸಂದೇಶ.ಪೌರ ಕಾರ್ಮಿಕರು ಸಮಾಜದ ನಿಜವಾದ ಕರ್ಮಯೋಗಿಗಳು: ಮಹೇಶ ಮಣ್ಣಯ್ಯನ್ನವರಮಠಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಪ್ರೊ. ಎ. ಪಿ. ಜ್ಞಾನ ಪ್ರಕಾಶ ಬ್ಯಾಂಕ್ ಎಂಬುದು ಸ್ಪಂದನ ಪ್ರತಿಸ್ಪಂದನದಿಂದ ಬೆಳೆಯುವ ಕ್ಷೇತ್ರ-ಶ್ರೀಕಾಂತಸಂಕೇಶ್ವರ ಸೌಹಾರ್ದ ಸಹಕಾರಿಗೆ ₹91.76 ಲಕ್ಷ ನಿವ್ವಳ ಲಾಭ: ಸದಸ್ಯರಿಗೆ ಶೇ. 25 ಡಿವಿಡೆಂಡ್ ಘೋಷಣೆಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಆಯುರ್ವೇದದ ಪಾತ್ರ ಮಹತ್ವದ್ದು: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರ ದಿನಾಚರಣೆಅರ್ಹ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಲಿ: ವಿಪುಲ್ ಬನ್ಸಲ್