LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಬ್ಯಾಂಕ್ ಎಂಬುದು ಸ್ಪಂದನ ಪ್ರತಿಸ್ಪಂದನದಿಂದ ಬೆಳೆಯುವ ಕ್ಷೇತ್ರ-ಶ್ರೀಕಾಂತ


ತಾಳಿಕೋಟೆ,  ತಾಳಿಕೋಟೆಯಲ್ಲಿ ಅಣ್ಣಬಸವಣ್ಣನವರ ಹೆಸರಿನಿಂದ ಪ್ರಾರಂಭಗೊಂಡ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘವು ೧೯ ವರ್ಷಗಳಲ್ಲಿ ಎಲ್ಲರ ಸಹಕಾರದೊಂದಿಗೆ ಮುನ್ನಡೆಯುವದರೊಂದಿಗೆ ಜನಪ್ರೀಯತೆಯನ್ನು ಗಳಿಸಿಕೊಂಡಿದೆ ಎಂದು ಜೆಎಸ್‌ಜಿ ಪೌಂಡೇಶನ್‌ದ ಕಾರ್ಯದರ್ಶಿಯಾದ ಶ್ರೀಕಾಂತ ಪತ್ತಾರ ಅವರು ನುಡಿದರು. 
   ಮಂಗಳವಾರರಂದು ಸ್ಥಳೀಯ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘ ನಿಯಮಿತದ ವತಿಯಿಂದ ಎಪಿಎಂಸಿ ಸಭಾಭವನದಲ್ಲಿ ಏರ್ಪಡಿಸಲಾದ ಸಂಘದ ೧೯ ನೇಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು ಯಾವರೀತಿ ನೆಟ್ಟ ಸಸಿ ಸಮೃದ್ದಿತನದಿಂದ ಬೆಳೆದು ಸಮಾಜಕ್ಕೆ ಆದರ್ಶಪ್ರೀಯವಾಗುತ್ತದೆಯೋ ಅದೇ ರೀತಿ ಈ ಸಂಘ ಮಾದರೀಯ ಸಂಘವಾಗಿ ಸಹಕಾರಿ ಕ್ಷೇತ್ರದಲ್ಲಿ ಪರಿಣಮಿಸಿದೆ ಎಂದರು. ಈ ಸಂಘವನ್ನು ಸ್ಥಾಪಿಸಿದ ದಿ. ಜಿ.ಎಸ್. ಕಶೆಟ್ಟಿ ಅವರು ಕಣ್ಮರೆಯಾಗಿದ್ದರೂ ಅವರ ಆಡಳಿತದಲ್ಲಿದ್ದ ಇಗಿನ ಆಡಳಿತ ಮಂಡಳಿಯವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದಿದ್ದಾರೆ ಈ ಸಂಘದಲ್ಲಿ ಶಿಸ್ತು, ಬದ್ದತೆ, ನಿಯತ್ತು, ಗೌರವದೊಂದಿಗೆ ಎಲ್ಲ ಕ್ಷೇತ್ರಗಳಿಗೆ ಸಾಲ ನೀಡುವ ಮೂಲಕ ವಸೂಲಾತಿ ಮಾಡುವದರೊಂದಿಗೆ ಮುನ್ನಡೆದು ಪ್ರಗತಿಗೆ ಕಾರಣವಾಗಿದ್ದರಿಂದ ವರ್ಷದ ಅಂತ್ಯಕ್ಕೆ ೩೫ ಲಕ್ಷ ರೂ. ನಿವ್ಹಳ ಲಾಭ ಗಳಿಸಲು ಕಾರಣವಾಗಿದೆ ಎಂದ ಶ್ರೀಕಾಂತ ಅವರು ಸಮಾಜದ ಸಹಕಾರಕ್ಕೆ ನಮ್ಮನ್ನೂ ಕೂಡಾ ಬೆಳವಣಿಗೆಯತ್ತಾ ಸಾಗಲು ಸಹಕಾರಗಳು ಸೌಹಾರ್ಧತೆಗಳು ಕೂಡಾ ಮಾಡಲಾಗಿದೆ ಎಂದರು. 
    ಇನ್ನೋರ್ವ ಬಸವೇಶ್ವರ ಪತ್ತಿನ ಸೌಹಾರ್ಧ ಪತ್ತಿನ ಸಂಘದ ಅಧ್ಯಕ್ಷರಾದ ಕಾಶೀನಾಥ ಮುರಾಳ ಅವರು ಮಾತನಾಡಿ ಕೇವಲ ೧೫ ರಿಂದ ೨೦ ಲಕ್ಷ ಬಂಡವಾಳದೊಂದಿಗೆ ಪ್ರಾರಂಭಗೊಂಡ ಈ ಸಂಘ ಈಗ ಕೋಟಿ ಬಂಡವಾಳದೊಂದಿಗೆ ಮುನ್ನಡೆದಿದೆ ಈ ಸಲ ೩೫ ಲಕ್ಷ ರೂ ಲಾಭ ಗಳಿಸಿದೆ ಎಂದರು. ೨೪೦ ಲಕ್ಷ ನಿಧಿಗಳು, ೨೭೨೧ ಲಕ್ಷ ರೂ. ಠೇವುಗಳು ಹಾಗೂ ೩೧೧೭ ಲಕ್ಷ ದುಡಿಯುವ ಬಂಡವಾಳದೊಂದಿಗೆ ಮುನ್ನಡೆದ ಈ ಸಂಘದಲ್ಲಿ ಈ ಸಲಾ ಶೇ. ೧೦ ರಂತೆ ಡಿವಿಡೆಂಟ್ ಕೊಡಲು ಶಿಫಾರಸ್ಸು ಮಾಡಲಾಗಿದೆ ಮುಂದಿನ ವರ್ಷ ಶೇ. ೧೨ ರಷ್ಟು ಡಿವಿಡೆಂಟ್ ನೀಡುವ ಕಾರ್ಯ ಮಾಡಲಾಗುತ್ತದೆ ಎಂದು ಸಂಘದ ಠೇವುದಾರರ ಗ್ರಾಹಕರ ಸಹಕಾರವೇ ಸಂಘ ಬೆಳೆಯಲು ಕಾರಣವಾಗಿದೆ ಎಂದರು. 
    ಇನ್ನೋರ್ವ ವ್ಹಿ.ವ್ಹಿ. ಸಂಘದ ಅಧ್ಯಕ್ಷ ವ್ಹಿ.ಜಿ. ಹಿರೆಮಠ ಅವರು ಮಾತನಾಡಿ ಬಸವೇಶ್ವರ ಪತ್ತಿನ ಈ ಸಂಘ ಆರಂಭವಾದ ಸಂಧರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ದಿ. ಈ.ಎಸ್. ಕಶೆಟ್ಟಿ ಅವರು ಸಂಘದ ಉದ್ದೇಶ ಹಾಗೂ ಬೆಳವಣಿಗೆಯ ಕುರಿತು ಸಮಾಜದ ಜನತೆಗೆ ತಿಳಿಸುವ ಮೂಲಕ ಈ ಸಂಘದ ಕಾರ್ಯಾರಂಭಕ್ಕೆ ಪ್ರೋತ್ಸಾಹ ನೀಡಿದ್ದಾರೆಂದು ಸ್ಮರಿಸಿದರು. 
    ದಿವ್ಯ ಸಾನಿದ್ಯ ವಹಿಸಿದ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವರಿ ವೇ|| ಮುರುಘೇಶ ವಿರಕ್ತಮಠ ಅವರು ಮಾತನಾಡಿ ಸಹಕಾರ ಸಂಸ್ಥೆಯ ಅಭಿವೃದ್ದಿಯಲ್ಲಿ ಸದಸ್ಯರು ಗ್ರಾಹಕರು ಹಾಗೂ ಆಡಳಿತ ಮಂಡಳಿಯ ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ ಈ ಹಿಂದಿನಿಂದಲೂ ಈ ಸಂಸ್ಥೆ ಅಭಿವೃದ್ದಿ ಪಥದತ್ತ ಸಾಗುತ್ತಾ ಬಂದಿದೆ ಇನ್ನಷ್ಟು ಅಭಿವೃದ್ದಿ ಹೊಂದಿ ಸದಸ್ಯರ ಹಾಗೂ ಗ್ರಾಹಕರ ಹೆಚ್ಚಿನ ಸೇವೆ ಒದಗಿಸುವ ಮೂಲಕ ಮತ್ತಷ್ಟು ಪ್ರಗತಿಯತ್ತ ದಾಪುಗಾಲು ಹಾಕಲಿ ಎಂದು ಆಶೀರ್ವದಿಸಿದರು. 
    ಸಂಘದ ನಿರ್ಧೇಶಕರಾದ ಎಂ.ಎಸ್. ಸರಶೆಟ್ಟಿ ವರದಿವಾಚಿಸಿದರು.
    ಜಿಲ್ಲಾ ಸೌಹಾರ್ಧ ಸಹಕಾರಿಯ ಕಾರ್ಯಕಾರಿಣಿ ಸದಸ್ಯರಾಗು ಆಯ್ಕೆಯಾದ ರಾಜು ಹಂಚಾಟೆ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
       ಸಂಗೀತಗಾರರಾದ ಅಂಬ್ರೇಶ ಇಂಗಳಗಿ ಪ್ರಾರ್ಥಿಸಿದರು. ವೇದಿಕೆಯ ಮೇಲೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕಾಶೀನಾಥ ಸಜ್ಜನ, ಮಾಜಿ ಅಧ್ಯಕ್ಷರಾದ ಎಚ್.ಬಿ. ಬಾಗೇವಾಡಿ, ಸಂಘದ ಮುಖ್ಯಕಾರ್ಯನಿರ್ವಾಹಕ ಮುತ್ತುಗೌಡ ಪಾಟೀಲ, ಸಂಘದ ಉಪಾಧ್ಯಕ್ಷ ಈರಣ್ಣ ಸಜ್ಜನ, ನಿರ್ಧೇಶಕರಾದ ಅಶೋಕ ಜಾಲವಾದಿ, ಚನ್ನಬಸಪ್ಪ ರೂಢಗಿ, ಸುಭಾಸ ಹೂಗಾರ, ಪ್ರಕಾಶ ಕಶೆಟ್ಟಿ,ಶ್ರೀಮತಿ ಶಿಲ್ಪಾ ಕಿಣಗಿ, ಶ್ರೀಮತಿ ಮುರುಗೆಮ್ಮ ಯರನಾಳ, ಶ್ರೀಮತಿ ಶ್ರೀದೇವಿ ನಾಯಕೋಡಿ ಮೊದಲಾದವರು ಉಪಸ್ತಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೌರಕಾರ್ಮಿಕರು ಸ್ವಚ್ಚತೆಯ ಕಾವಲುಗಾರರು-ಸಿದ್ದಲಿಂಗಶ್ರೀಶಿವಾಪೂರ(ಹ) ಪ್ರಾಥಮಿಕ ಕೃಷಿ ಸಹಕಾರಿ ಸಂಘಕ್ಕೆ ೨೬ ಲಕ್ಷ ರೂ. ಲಾಭಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಪ್ರವಾದಿ ಮಹಮ್ಮದರ ಸಂದೇಶ.ಪೌರ ಕಾರ್ಮಿಕರು ಸಮಾಜದ ನಿಜವಾದ ಕರ್ಮಯೋಗಿಗಳು: ಮಹೇಶ ಮಣ್ಣಯ್ಯನ್ನವರಮಠಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಪ್ರೊ. ಎ. ಪಿ. ಜ್ಞಾನ ಪ್ರಕಾಶ ಬ್ಯಾಂಕ್ ಎಂಬುದು ಸ್ಪಂದನ ಪ್ರತಿಸ್ಪಂದನದಿಂದ ಬೆಳೆಯುವ ಕ್ಷೇತ್ರ-ಶ್ರೀಕಾಂತಸಂಕೇಶ್ವರ ಸೌಹಾರ್ದ ಸಹಕಾರಿಗೆ ₹91.76 ಲಕ್ಷ ನಿವ್ವಳ ಲಾಭ: ಸದಸ್ಯರಿಗೆ ಶೇ. 25 ಡಿವಿಡೆಂಡ್ ಘೋಷಣೆಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಆಯುರ್ವೇದದ ಪಾತ್ರ ಮಹತ್ವದ್ದು: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರ ದಿನಾಚರಣೆಅರ್ಹ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಲಿ: ವಿಪುಲ್ ಬನ್ಸಲ್