ಜಮಖಂಡಿ: ಕೃಷ್ಣ ಜನ್ಮಾಷ್ಟಮಿ ಹಾಗೂ ಮುರುಗೇಶ ನಿರಾಣಿಯವರ ಜನ್ಮದಿನದ ನಿಮಿತ್ಯ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಠದ ಹತ್ತಿರ ಉತ್ತರಾಭಿಮುಖವಾಗಿ ಹರಿದಿರುವ ನದಿಗೆ ಪೂಜೆ ಸಲ್ಲಿಸಿ ಗಂಗಾರತಿ ಮಾದರಿಯಲ್ಲಿ ಕೃಷ್ಣಾರತಿ ಮಾಡುವ ಕಾರ್ಯಕ್ರಮಕ್ಕೆ ಕೃಷ್ಣಾ ತೀರದ ರೈತರು ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ.
ಮೂರನೇ ಬಾರಿಗೆ ನಡೆಯುತ್ತಿರುವ ಈ ಬೃಹತ್ ಧಾರ್ಮಿಕ ಉತ್ಸವ ಈ ಬಾರಿಯೂ ಮತ್ತೊಂದು ಐತಿಹಾಸಿಕ ಯಶಸ್ಸು ಗಳಿಸುವ ಎಲ್ಲ ಲಕ್ಷಣಗಳು ನಿಚ್ಚಳವಾಗಿವೆ, ಕೃಷ್ಣಾ ಉತ್ಸವ ಹಾಗೂ ಆರತಿಯ ಸಾನಿಧ್ಯವನ್ನು ನೊಣವಿನಕೇರಿಯ ಶ್ರೀ ವೀರಗಂಗಾಧರ ಅಜ್ಜಯ್ಯ, ಉತ್ತರ ಪ್ರದೇಶದ ದೇವಗಿರಿ ಬಾಬಾ, ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭುಜೀ ಬೆನ್ನಾಳ ಮಹಾರಾಜರು, ನಿಡಸೋಸಿಯ ನಿಜಲಿಂಗೇಶ್ವರ ಶ್ರೀಗಳು ವಹಿಸಿಕೊಳ್ಳಲಿದ್ದಾರೆ. ಆರ್.ಎಸ್.ಎಸ್. ಪ್ರಮುಖರಾದ ಅರವಿಂದರಾವ್ ದೇಶಪಾಂಡೆ, ಗಣಪತಿ ಹೆಗಡೆ, ರಾಘವೇಂದ್ರ ಕಾಗವಾಡ ಹಾಗೂ ಹಿಂದೂ ಜಾಗರಣಾ ವೇದಿಕೆ ಜಗದೀಶ ಕಾರಂತ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮುರುಗೇಶ ನಿರಾಣಿ ಹಾಗೂ ಸಾವಯವ ಕೃಷಿ ಹಾಗೂ ಗೋ ರಕ್ಷಣೆಯಲ್ಲಿ ತೊಡಗಿಕೊಂಡ ಇಬ್ಬರು ವೇದಿಕೆ ಮೇಲೆ ಉಪಸ್ಥಿತರಿರಲಿದ್ದಾರೆ.
ಸಾಯಂಕಾಲ 3.30 ಕ್ಕೆ ಕೃಷ್ಣಾ ಉತ್ಸವಕ್ಕೆ ಶೋಭಾಯಾತ್ರೆ ಮೂಲಕ ಚಾಲನೆ ದೊರೆಯಲಿದ್ದು, ಸಂಜೆ 7 ಗಂಟೆಗೆ ಭವ್ಯಆರತಿ ನೆರವೇರಲಿದೆ, ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಠದ ಆವರಣದ ಕೃಷ್ಣಾ ನದಿ ತೀರದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಕಾರ್ಯಕ್ರಮಕ್ಕಾಗಿ ಶ್ರೀಶೈಲ ದೇವಸ್ಥಾನದ ಪುರೊಹಿತರೊಂದಿಗೆ ಧರ್ಮರಥ ಆಗಮಿಸಿದ್ದು, ಕೃಷ್ಣಾ ಆರತಿ ಮಾಡಲು ಕಾಶಿಯ ಪಂಡಿತರು ಈಗಾಗಲೇ ಬಂದಿದ್ದಾರೆ, ನದಿಯಲ್ಲಿ ಪೂಜೆ ಹಾಗೂ ಆರತಿ ಮಾಡುವದಕ್ಕೆ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಬೋಟ್‌ಗಳನ್ನು ತರಿಸಲಾಗುವುದು, ಹಿಪ್ಪರಗಿ ಜಲಾಶಯ ಹಾಗೂ ಮಠದ ಆವರಣ ಅಲಂಕೃತ ವಿದ್ಯುತ್ ದೀಪಗಳಿಂದ ಜನಮನ ಸೆಳೆಯುತ್ತಿದೆ. ವಾದ್ಯಮೇಳಗಳು, ಕಲಾತಂಡಗಳು ಆಗಮಿಸಲಿದ್ದು, ಬೃಹತ್ ಶಾಮಿಯಾನ, ಭೋಜನ ವ್ಯವಸ್ಥೆ ಸೇರಿದಂತೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ.
ಶ್ರೀಶೈಲ ಮಲ್ಲಿಕಾರ್ಜುನ ಕಲ್ಯಾಣೋತ್ಸವ, ಶ್ರೀಶೈಲದಿಂದ ಆಗಮಿಸುವ ಧರ್ಮರಥದ ಶೋಭಾ ಯಾತ್ರೆ, ರೈತರಿಗೆ ಗೋಧಾನ, ಜಲಾಶಯಕ್ಕೆ ಬಾಗಿನ ಅರ್ಪಣೆ, ಸಸಿ ನೆಡುವದು, ಸಾವಯವ ಕೃಷಿಗೆ ಉತ್ತೇಜನ, ಹೋಮ ಹವನ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೃಷ್ಣಾ ಆರತಿ ಈ ಭಾಗದ ಪ್ರತಿ ಮನೆಯ ಹಬ್ಬ. ಜೀವನಕೊಟ್ಟ ಮಹಾಮಾಯಿಗೆ ದೀಪ ಬೆಳುಗುವುದು ನಮ್ಮ ಪಾಲಿಗೆ ದೀಪಾವಳಿ.ಕಳೆದ 2 ವರ್ಷಗಳಿಗಿಂತ ಈ ಬಾರಿ ಹೆಚ್ಚು ಜನ ಸೇರಲಿದ್ದಾರೆ.ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ.
ಸಂಗಮೇಶ ಆರ್. ನಿರಾಣಿ ಕಾರ್ಯನಿರ್ವಾಹಕ ನಿರ್ದೇಶಕರು ನಿರಾಣಿ ಫೌಂಡೇಶನ್