Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಎಲ್‌ಇ ಸಂಸ್ಥಾಪನಾ ದಿನಾಚರಣೆ

ರೈತರಿಗೆ/ಎಫ್‌ಪಿಒಗಳಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ 

ನೇಸರಗಿ: ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ೧೧೧ ನೇ ಕೆಎಲ್‌ಇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು ಹಾಗೂ ಬೆಂಗಳೂರಿನ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಸಹಹೋಗದಲ್ಲಿ ರೈತರಿಗೆ/ಎಫ್‌ಪಿಒಗಳಿಗೆ ಕೃಷಿ ಉತ್ಪನ್ನಗಳ/ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಕುರಿತು ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. 
    ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ಮಾತನಾಡಿ, ಕೆಎಲ್‌ಇ ಸಂಸ್ಥೆಯನ್ನು ಸಂಸ್ಥಾಪಿಸಲು ಶ್ರಮಿಸಿದ ಏಳು ಜನ ಶಿಕ್ಷಕರಾದ, ಶ್ರೀ ಪಂಡಿತಪ್ಪ ಚಿಕ್ಕೋಡಿ, ಎಂ. ಆರ್. ಸಾಖರೆ, ಪ್ರೊ. ಎಸ್. ಎಸ್. ಬಸವನಾಳ, ಶ್ರೀ. ಹೆಚ್. ಎಫ್. ಕಟ್ಟಿಮನಿ ಮತ್ತು ಬಿ. ಬಿ. ಮಮದಾಪೂರ, ಬಿ. ಎಸ್. ಹಂಚಿನಾಳ ಮತ್ತು ಸರದಾರ ವೀರನಗೌಡ ಪಾಟೀಲ ಇವರ ಭಾವಚಿತ್ರಗಳ ಅಲಂಕರಿಸಿ ಅವರನ್ನು ಪೂಜಿಸಿ ಅವರ ಕಾರ್ಯವನ್ನು ಶ್ಲಾಘಿಸಿದರು. ಪೇಶ್ವೆಗಳ ಆಡಳಿತದಲ್ಲಿ ಕನ್ನಡದ ನೆಲವನ್ನು ಹದಗೊಳಿಸಿ ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಕನ್ನಡದ ಬೀಜವನ್ನು ಬಿತ್ತಿದ ಕೆಎಲ್‌ಇ ಸಂಸ್ಥಾಪಕರಿಗೆ ಕೃಷಿ ವಿಜ್ಞಾನ ಕೇಂದ್ರದ ಎಲ್ಲ ಸಿಬ್ಬಂದಿ ವರ್ಗದವರು ನಮನಗಳನ್ನು ಸಲ್ಲಿಸಿದರು. ಅದೇ ರೀತಿ ಏಳು ಜನ ಶಿಕಕ್ಷರಿಗೆ ಬೆಂಬಲವಾಗಿ ನಿಲ್ಲುತ್ತ ಪ್ರಾತಃಸ್ಮರಣಿಯಾದ ರಾವಬಹದ್ದೂರ ರುದ್ರಗೌಡ ಅರಟಾಳ, ರಾವಬಹದ್ದೂರ ವೈಜಪ್ಪ ಅನಿಗೋಳ, ರಾವಬಹದ್ದೂರ ವಿ. ಜಿ. ನಾಯಕ ದೇಸಾಯಿ, ಚಚಡಿ ಇವರ ಒಂದು ನಿಸ್ವಾರ್ಥ ಸೇವೆ ವ್ಯರ್ಥವಾಗದೇ ಇಡೀ ಸಮಾಜಕ್ಕೆ ಹೊಸ ಪ್ರಗತಿ ಹೆದ್ದಾರಿ ನಿರ್ಮಿಸಿದೆ. ಇಂಥ ಒಂದು ಸಂಸ್ಥೆಯನ್ನು ಮುಂದುವರೆಸಿಕೊಂಡು ಅಷ್ಟಮ ಋಷಿಯಾಗಿ ಕಳೆದ ೪೧ ವರ್ಷಗಳಲ್ಲಿ ೩೧೬ ಸಂಸ್ಥೆಗಳನ್ನು ಹುಟ್ಟು ಹಾಕಿ ಜಗತ್ತಿನಾದ್ಯಂತ ಕೆಎಲ್‌ಇ ಸಂಸ್ಥೆಯ ಹೆಸರನ್ನು ರಾರಾಜಿಸುವಂತೆ ಮಾಡಿದ ಡಾ.ಪ್ರಭಾಕರ ಕೋರೆಯವರ ಕಾರ್ಯವು ಅವಿಸ್ಮರಣೀಯ ಹಾಗೂ ಇತಿಹಾಸದಲ್ಲಿ ಬರೆದಿಡುವಂತಹ ಕಾರ್ಯವಾಗಿದೆ ಎಂದು ಸ್ಮರೀಸಿದರು. ಅದೇರೀತಿ, ಕೇಂದ್ರದ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ ಇವರು ಕೆಎಲ್‌ಇ ಸಂಸ್ಥೆಯು ೧೯೧೬ ರಿಂದ ನಡೆದು ಬಂದ ದಾರಿ ಕುರಿತು ಮಾತನಾಡಿದರು.
ತಾಂತ್ರಿಕ ಅಧಿವೇಶನದಲ್ಲಿ ಬೆಂಗಳೂರಿನ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಂPಇಆಂ) ದ ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್, ಶ್ರೀ ಕಾರಂತ್ ಬಿ ಇವರು ಕೃಷಿ ಉತ್ಪನ್ನಗಳಿಗೆ ಇರುವ ರಫ್ತು ಅವಕಾಶಗಳ ಕುರಿತು ಹಾಗೂ ಮಾರ್ಗಸೂಚಿಗಳ ಕುರಿತು ವಿವರವಾದ ಮಾಹಿತಿ ನೀಡಿ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 
  ಶ್ರೀ ರಾಜಶೇಖರ ಪಾಟೀಲ, ಕರ್ನಾಟಕ ನೀರಾವರಿ ನಿಗಮ, ಹಿಡಕಲ್ ಡ್ಯಾಂ, ಹುಕ್ಕೇರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ರೈತರು ತಾವು ಬೆಳೆದಿರುವಂತಹ ಬೆಳೆಗಳಿಗೆ ಒಳ್ಳೆಯ ಬೆಲೆ ಬರಲು ಬೆಳೆಯನ್ನು ಶ್ರೇಣೀಕರಿಸಿ ಮಾರುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದರು.
  ಕೇಂದ್ರದ ವಿಜ್ಞಾನಿ ಎಸ್. ಎಮ್. ವಾರದ ಇವರು ಸ್ವಾಗತಿಸಿ, ಕಾರ್ಯಕ್ರಮ ಕುರಿತು ಕಿರುಪರಿಚಯ ನೀಡಿದರು. ಕೇಂದ್ರದ ವಿಜ್ಞಾನಿಗಳಾದ ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಡಾ. ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ವಿನೋದ ಕೋಚಿ, ಮಂಜುನಾಥ ಪಿ. ಐ., ಬಸವರಾಜ ಅಮ್ಮಿನಬಾವಿ ಹಾಗೂ ಶ್ರೀಮತಿ ವೀಣಾ ಬನ್ನೂರ ಇವರು ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ೫೦ ಕ್ಕೂ ಹೆಚ್ಚು ಜನ ರೈತರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ  ಕೇಂದ್ರದ ಗೃಹ ವಿಜ್ಞಾನಿ ಡಾ. ಭಾವಿನಿ ಪಾಟೀಲ ವಂದಿಸಿದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹ: ಆರಂಭಿಕ ಕ್ರಮವೇ ಪರಿಹಾರದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹ: ಆರಂಭಿಕ ಕ್ರಮವೇ ಪರಿಹಾರಮಹಾರಾಣಾ ಪ್ರತಾಪಸಿಂಹ ಅವರ ಪುತ್ಥಳಿ ಅನಾವರಣ ಹೆಮ್ಮೆಯ ಸಂಗತಿ-ಕೂಚಬಾಳಮುದ್ದೇಬಿಹಾಳದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಹಸಿರು ತೋರಣ ಬಳಗದಿಂದ ಸನ್ಮಾನಗೋದಾವರಿ ಬಯೋರಿಫೈನರೀಸ್‌ನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ: ಕೇನ್ ಕ್ಯಾರಿಯರ್ ಪೂಜೆ ನೆರವೇರಿಕೆಸಿಗ್ನಲ್ ಇಲ್ಲ, ವೈಜ್ಞಾನಿಕ ಹಂಪ್‌ಗಳಿಲ್ಲ, ಪಾದಚಾರಿ ಮಾರ್ಗವೂ ಇಲ್ಲ; ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ!"ಮೂಡಲಗಿಯಲ್ಲಿ ಶ್ರೀ ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ"ಕಲಾ ಪ್ರತಿಭೆಯೂ ಮಕ್ಕಳ ಭವಿ? ರೂಪಿಸುತ್ತದೆ: ಎ.ಆರ್. ಛಬ್ಬಿಕನ್ನಡದ ಶಕ್ತಿ ಮಹಾಕವಿ ರನ್ನ: ಚಂದ್ರಶೇಖರ ದೇಸಾಯಿಜುಜಾಟದ ಮೇಲೆ ಪೊಲೀಸರ ದಾಳಿ