LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಹಿಂಡಾಲ್ಕೋದಿಂದ ಭಾರತದ ಮೊದಲ ಸೂಪರ್ ಫೈನ್ PPT ATH ಘಟಕ ಕಾರ್ಯಾರಂಭ

 


ಬೆಳಗಾವಿ: ಆದಿತ್ಯ ಬಿರ್ಲಾ ಸಮೂಹದ ಲೋಹ ಉದ್ಯಮದ ಪ್ರಮುಖ ಸಂಸ್ಥೆಯಾಗಿರುವ ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್, ಬೆಳಗಾವಿಯಲ್ಲಿ ಭಾರತದ ಮೊದಲ ಸೂಪರ್ ಫೈನ್ PPT ATH (Precipitated Aluminium Trihydrate) ಉತ್ಪಾದನಾ ಘಟಕವನ್ನು ಕಾರ್ಯಾರಂಭಗೊಳಿಸಿದ್ದು, ಹಿಂಡಾಲ್ಕೋ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಪೈ ಅವರು ನೂತನ ಘಟಕಕ್ಕೆ ಚಾಲನೆ ನೀಡಿದರು.

 

ವಾರ್ಷಿಕ 30,000 ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಗ್ರೀನ್‌ಫೀಲ್ಡ್ ಘಟಕವು ದೇಶದಲ್ಲಿ ಉನ್ನತ ಮೌಲ್ಯದ ವಿಶೇಷ ಅಲ್ಯೂಮಿನಾ ಉತ್ಪನ್ನಗಳ ದೇಶೀಯ ಉತ್ಪಾದನೆಗೆ ಮಹತ್ವದ ಹೆಜ್ಜೆಯಾಗಿದೆ.

PPT ATH ಒಂದು ಉನ್ನತ ಮೌಲ್ಯದ, ಹ್ಯಾಲೋಜನ್‌ರಹಿತ ಜ್ವಾಲೆ ನಿರೋಧಕ ವಸ್ತುವಾಗಿದ್ದು, ಹ್ಯಾಲೋಜನ್‌ರಹಿತ ಜ್ವಾಲೆ ನಿರೋಧಕ ಕೇಬಲ್‌ಗಳು (HFFR), ಪಾಲಿಮರ್ ಇನ್ಸುಲೇಟರ್‌ಗಳು, ತಾಪ ನಿರೋಧಕ ವಸ್ತುಗಳು, ಕಾಂಪೋಸಿಟ್‌ಗಳು ಹಾಗೂ ಪೇಂಟ್‌ಗಳಲ್ಲಿ ಬಳಸಲಾಗುತ್ತದೆ. ಕೇಬಲ್‌ಗಳಂತಹ ಅನ್ವಯಿಕೆಗಳಲ್ಲಿ ಜ್ವಾಲೆಯ ಹರಡುವಿಕೆ ಮತ್ತು ಹೊಗೆ ಉತ್ಪತ್ತಿಯನ್ನು ನಿಯಂತ್ರಿಸಲು ಇದು ಸಹಕಾರಿಯಾಗಿದೆ. ಅಲ್ಲದೆ, ಹ್ಯಾಲೋಜನ್ ಆಮ್ಲ ಅನಿಲಗಳನ್ನು ಬಿಡುಗಡೆ ಮಾಡದಿರುವುದರಿಂದ ವಿದ್ಯುತ್ ಮತ್ತು ಮೂಲಸೌಕರ್ಯ ವ್ಯವಸ್ಥೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಕಟ್ಟುನಿಟ್ಟಾದ ಅಗ್ನಿ ಸುರಕ್ಷತಾ ಮಾನದಂಡಗಳು, ಎಲೆಕ್ಟ್ರಿಕ್ ವಾಹನಗಳ (EV) ಹೆಚ್ಚುತ್ತಿರುವ ಬಳಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸುಸ್ಥಿರ ಮತ್ತು ಉನ್ನತ ಕಾರ್ಯಕ್ಷಮತೆಯ ವಸ್ತುಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ PPT ATH ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಅವಕಾಶಗಳು ಸೃಷ್ಟಿಯಾಗುತ್ತಿವೆ.

ಈ ಸಂದರ್ಭದಲ್ಲಿ  ಹಿಂಡಾಲ್ಕೋ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಪೈ ಮಾತನಾಡಿ, “ಬೆಳಗಾವಿಯಲ್ಲಿ ಸೂಪರ್ ಫೈನ್ ಪ್ರಿಸಿಪಿಟೇಟೆಡ್ ಹೈಡ್ರೇಟ್ ಘಟಕದ ಕಾರ್ಯಾರಂಭವು ನಮ್ಮ ನಾಯಕತ್ವದ ಸ್ಥಾನವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಭಾರತದಲ್ಲಿನ ಉನ್ನತ ಮೌಲ್ಯದ ವಿಶೇಷ ಅಲ್ಯೂಮಿನಾ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸಲಿದೆ. ಈ ಹೂಡಿಕೆಯು ಮೌಲ್ಯ ಸೃಷ್ಟಿ, ಮೌಲ್ಯ ಸರಪಳಿಯಲ್ಲಿ ಮೇಲ್ದರ್ಜೆಗೆ ಸಾಗುವುದು ಹಾಗೂ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಸುಧಾರಿತ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದರು.

ಹಿಂಡಾಲ್ಕೋ ಅಲ್ಯೂಮಿನಾ ಬಿಸಿನೆಸ್ ವಿಭಾಗದ ಸಿಇಒ ಸೌರಭ್ ಖೇಡೆಕರ್ ಮಾತನಾಡಿ, “ಸೂಪರ್ ಫೈನ್ PPT ATH ಸೇರ್ಪಡೆಯಿಂದ ನಮ್ಮ ವಿಶೇಷ ಅಲ್ಯೂಮಿನಾ ಉತ್ಪನ್ನಗಳ ಶ್ರೇಣಿ ಮತ್ತಷ್ಟು ಬಲಗೊಂಡಿದೆ. ನಮ್ಮ InnoSafe ಪರಿಹಾರವು ಜ್ವಾಲೆಯ ಹರಡುವಿಕೆಯನ್ನು ತಡೆಗಟ್ಟುವ ಮತ್ತು ಹೊಗೆಯನ್ನು ನಿಯಂತ್ರಿಸುವ ಮೂಲಕ ಅಗ್ನಿ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಭಾರತದ ಮೊದಲ ಸೂಪರ್ ಫೈನ್ ಪ್ರಿಸಿಪಿಟೇಟೆಡ್ ಹೈಡ್ರೇಟ್ ತಯಾರಕರಾಗಿ, ಆಮದು ಅವಲಂಬನೆಯನ್ನು ಕಡಿಮೆ ಮಾಡಿ ಸ್ವಾವಲಂಬನೆಯನ್ನು ಬಲಪಡಿಸುವ ವಿಶ್ವಮಟ್ಟದ ದೇಶೀಯ ಪರಿಹಾರವನ್ನು ಒದಗಿಸುತ್ತಿರುವುದಕ್ಕೆ ಹೆಮ್ಮೆ ಇದೆ” ಎಂದು ತಿಳಿಸಿದರು.

ವಿಶೇಷ ಅಲ್ಯೂಮಿನಾ ಉತ್ಪನ್ನಗಳ ಪ್ರಮುಖ ಸಂಸ್ಥೆ: ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್ ಆದಿತ್ಯ ಬಿರ್ಲಾ ಗ್ರೂಪ್‌ನ ಲೋಹ ಉದ್ಯಮದ ಪ್ರಮುಖ ಕಂಪನಿಯಾಗಿದೆ. ಸಂಸ್ಥೆಯು ಭಾರತದಲ್ಲಿ ಪ್ರಮುಖ ವಿಶೇಷ ಅಲ್ಯೂಮಿನಾ ಉತ್ಪಾದಕರಾಗಿದ್ದು, ಲೋಹೇತರ ಬಳಕೆಗಳಿಗಾಗಿ 120ಕ್ಕೂ ಹೆಚ್ಚು ವಿಧದ ವಿಶೇಷ ಅಲ್ಯೂಮಿನಾ ಉತ್ಪನ್ನಗಳನ್ನು ತಯಾರಿಸುತ್ತಿದೆ.

ಇವು ರಿಫ್ರಾಕ್ಟರೀಸ್, ಸೆರಾಮಿಕ್ಸ್, ವೈರ್ ಮತ್ತು ಕೇಬಲ್, ರೈಲ್ವೆ, ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ಸ್, ನೀರು ಸಂಸ್ಕರಣೆ ಸೇರಿದಂತೆ ಹಲವು ಕೈಗಾರಿಕೆಗಳಲ್ಲಿ ಬಳಕೆಯಾಗುತ್ತಿವೆ. ಕಂಪನಿಯ ವಿಶೇಷ ಅಲ್ಯೂಮಿನಾ ಉತ್ಪನ್ನಗಳು 42 ದೇಶಗಳಲ್ಲಿನ 1,000ಕ್ಕೂ ಹೆಚ್ಚು ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿವೆ.

ಸಾಮಾಜಿಕ ಅಭಿವೃದ್ಧಿಗೂ ಒತ್ತು: ಬೆಳಗಾವಿಯಲ್ಲಿ ಹಿಂಡಾಲ್ಕೋ ಸಂಸ್ಥೆಯ ಚಟುವಟಿಕೆಗಳು ಕೈಗಾರಿಕಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕಂಪನಿಯ CSR ಕಾರ್ಯಕ್ರಮಗಳ ಮೂಲಕ ಬೆಳಗಾವಿ ನಗರದ ಕೆಲವು ಭಾಗಗಳು ಸೇರಿದಂತೆ ಏಳು ಗ್ರಾಮಗಳ 82,000ಕ್ಕೂ ಹೆಚ್ಚು ಜನರಿಗೆ ವಿವಿಧ ರೀತಿಯ ನೆರವು ನೀಡಲಾಗುತ್ತಿದೆ.

ಶಿಕ್ಷಣ, ಆರೋಗ್ಯ, ಜೀವನೋಪಾಯ, ಗ್ರಾಮೀಣ ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 21 ಸರ್ಕಾರಿ ಶಾಲೆಗಳಿಗೆ ಬೆಂಬಲ ನೀಡುವುದರ ಜೊತೆಗೆ, 25,000ಕ್ಕೂ ಹೆಚ್ಚು ಜನರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಕಾರ್ಯದಲ್ಲೂ ಸಂಸ್ಥೆ ತೊಡಗಿದೆ.

‘ಪ್ರಾಜೆಕ್ಟ್ ಸಕ್ಷಮ್’ ಮೂಲಕ ಪ್ರತಿವರ್ಷ 200ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಸುಸ್ಥಿರ ಕೃಷಿ ಮತ್ತು ಜೀವವೈವಿಧ್ಯ ಸಂರಕ್ಷಣಾ ಕಾರ್ಯಕ್ರಮಗಳ ಮೂಲಕ 160 ಹೆಕ್ಟೇರ್ ಪ್ರದೇಶದಲ್ಲಿರುವ 800 ಕೃಷಿಕ ಕುಟುಂಬಗಳಿಗೆ ಪ್ರಯೋಜನವಾಗುತ್ತಿದೆ.

ಈ ಸಂದರ್ಭದಲ್ಲಿ ಸಿಇಒ ಸೌರಭ್ ಖೇಡೆಕರ್ , ಕೌಶಿಕಿ ಶರಣ ಮಿತ್ರಾ, ದಿನೇಶ್ ನಾಯಕ ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೧೦೦ ಮೀಟರ್ ಓಟದಲ್ಲಿ ದ್ವಿತೀಯ: ಜಿಲ್ಲಾ ಮಟ್ಟಕ್ಕೆ ಚೇತನ ನ್ಯಾಮಗೌಡಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆ