Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

*ಮಲ್ಲಿಕಾರ್ಜುನ ಕುಂಬಾರ ಮತ್ತು ಮೊಹಮ್ಮದ್ ಉಸ್ಮಾನ್ ಅಲಿ ದ್ವಿತೀಯ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನೆ*

ಬಳ್ಳಾರಿ09:: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ
ಶ್ರೀ ಹುಲಿಕುಂಟೆ ರಾಯ ತೊಗಲುಗೊಂಬೆ ಕಲಾತಂಡ (ರಿ.) ರವರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಮಕ್ಕಳ ದಿನಾಚರಣೆ - 2026ರ ಅಂಗವಾಗಿ ‘ಹುಲಿಕುಂಟೆ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಚಿತ್ರಕಲಾ ಪ್ರದರ್ಶನವನ್ನು 
 ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಲಾವಿದರಾದ ಮಲ್ಲಿಕಾರ್ಜುನ ಕುಂಬಾರ (ಬಳ್ಳಾರಿ) ಹಾಗೂ ಮೊಹಮ್ಮದ್ ಉಸ್ಮಾನ್ ಅಲಿ (ಸಿಂಧನೂರು) ಇವರ ಜಂಟಿ ‘ದ್ವಿತೀಯ ವ್ಯಕ್ತಿ ಚಿತ್ರಕಲಾ ಪ್ರದರ್ಶನ’ವನ್ನು ಪ್ರಸಿದ್ಧ ಕನ್ನಡ ಸಾಹಿತಿ ಕುಂಬಾರ ವೀರಭದ್ರಪ್ಪ ಅವರು ರಿಬ್ಬನ್ ಕತ್ತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.
ಬಳಿಕ ಪ್ರದರ್ಶನದಲ್ಲಿದ್ದ ಕ್ಯಾನ್ವಾಸ್ ಕಲಾಕೃತಿಗಳನ್ನು ಕುಲಂಕುಶವಾಗಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ ಸಾಹಿತಿ ಕುಂಬಾರ ವೀರಭದ್ರಪ್ಪನವರು, "ಇಬ್ಬರೂ ಕಲಾವಿದರು ರಚಿಸಿರುವ ಚಿತ್ರಗಳು ನೈಜತೆಯಿಂದ ಕೂಡಿದ್ದು, ಅತ್ಯಂತ ಅದ್ಭುತವಾಗಿ ಮೂಡಿಬಂದಿವೆ" ಎಂದು ಮುಕ್ತ ಕಂಠದಿಂದ ಶ್ಲಾಘಿಸಿ, ಕಲಾವಿದರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಹುಲಿಕುಂಟೆ ರಾಯ ತೊಗಲುಗೊಂಬೆ ಕಲಾತಂಡದ ಮುಖ್ಯಸ್ಥರಾದ ಹೊನ್ನೂರು ಸ್ವಾಮಿ, ಪ್ರಮುಖ ಸಾಹಿತಿಗಳು, ಶಿಕ್ಷಕರು, ನೃತ್ಯ ಗುರುಗಳು, ಕಲಾಭಿಮಾನಿಗಳು ಹಾಗೂ ಅಪಾರ ಸಂಖ್ಯೆಯ ಮಕ್ಕಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮದುರ್ಗ: ₹3.80 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಶೋಕ ಪಟ್ಟಣ ಭೂಮಿಪೂಜೆವಿವಿಧ ಸಂಸ್ಥೆಗಳಲ್ಲಿ ದೀಪಾವಳಿ ಲಕ್ಷ್ಮೀ ಪೂಜೆ: ಸಿಬ್ಬಂದಿಗೆ ಲಕ್ಷ್ಮೀ ಹೆಬ್ಬಾಳಕರ್ ಶುಭಾಶಯಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ : ಜಿ.ಪಿ. ಘೋರ್ಪಡೆಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಮತ್ತು ಕವಿಗೋಷ್ಠಿಗಳಿಗಾಗಿ ಲೇಖನಗಳ, ಕವಿತೆಗಳ ಆಹ್ವಾನ.      ರಾಯಬಾಗ: ಹೊನಲು ಬೆಳಕಿನ ರಾಷ್ಟ್ರಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ತೆರೆ – ದೇಶಿ ಕ್ರೀಡೆಗಳ ರಕ್ಷಣೆಗೆ ಪಿ. ರಾಜೀವ್ ಕರೆಹುನಗುಂದ: ದೀಪಾವಳಿ ಸಂಭ್ರಮದ ನಡುವೆ ಬೆಲೆ ಏರಿಕೆ ಬಿಸಿ - ತತ್ತರಿಸಿದ ಜನಸಾಮಾನ್ಯರುಹುನಗುಂದ ಎಟಿಎಂಗಳಲ್ಲಿ ಹಣದ ಕೊರತೆ; ದೀಪಾವಳಿ ಹಬ್ಬಕ್ಕೆ ಸಾರ್ವಜನಿಕರ ಪರದಾಟಕುಡುತಿನಿ ಕೈಗಾರಿಕಾ ಪ್ರದೇಶದ ಭೂಮಿಯನ್ನು ಅಕ್ರಮವಾಗಿ ಉತ್ತಮ ಗಾಲ್ವಾ ಕಂಪನಿಗೆ ಮಾಡಿರುವ ವರ್ಗಾವಣೆ ರದ್ದು ಪಡಿಸಲು ಭೂ ಸಂತ್ರಸ್ಥರ ಅಗ್ರಹಅಸುಂಡಿ ಹೊನ್ನೂರಪ್ಪ ಅವರಿಂದ  ನಾಮ ರತ್ನಯ್ಯ ಮತ್ತು ನಾಮ ಸಾವಿತ್ರಮ್ಮ  ಸ್ಮರಣಾರ್ಥ  ಆಸ್ಪತ್ರೆಗೆ  ಧನಸಹಾಯ ನವಂಬರ್ 14, 15 ರಂದು ಬಳ್ಳಾರಿ ಜಿಲ್ಲಾ 23 ನೇ ಕನ್ನಡ ಸಾಹಿತ್ಯ ಸಮ್ಮೇಳನ : ನಿಷ್ಠಿ ರುದ್ರಪ್ಪ