ಕುಕನೂರು : ಪಟ್ಟಣದ ಬಸ್ ನಿಲ್ದಾಣದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣವನ್ನು ಸಾರಿಗೆ ಘಟಕ ವ್ಯವಸ್ಥಾಪಕರಾದ ವೆಂಕಟಾಚಲಪತಿ ನೆರವೇರಿಸಿದರು.
ನಂತರ ಸಾರಿಗೆ ಘಟಕ ವ್ಯವಸ್ಥಾಪಕರಾದ ವೆಂಕಟಾಚಲಪತಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವು ನಮ್ಮ ನಾಡಿನ ಇತಿಹಾಸದಲ್ಲಿ ಮಹತ್ವದ ದಿನವಾಗಿದ್ದು, ಈ ಭಾಗದ ವಿಮೋಚನೆಗಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಹೇಳಿದರು.
ಧ್ವಜಾರೋಹಣದಲ್ಲಿ ಗವಿಶಿದ್ದೇಶ್ವರ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಎಸ್. ಎಂ ಹಿರೇಮಠ ಪಾಲ್ಗೋಂಡಿದ್ದರು. ಈ ಸಂದರ್ಭದಲ್ಲಿ ಸಂಚಾರಿ ನಿಯಂತ್ರಕರಾದ ವೀರಯ್ಯ ಹಿರೇಮಠ, ಬಸನಗೌಡ, ಮಜರ್ ಹುಸೇನ್ ಬಾಬಾ, ಬಸಯ್ಯ ಹಿರೇಮಠ, ಎಎಸ್ಕೆ ಬಸವರಾಜ ಚಕ್ರಿ, ಮಂಜುನಾಥ ಮುಧೋಳ ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಸಾರ್ವಜನಿಕರು ಇದ್ದರು.