LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಸೈಬರ್​ ಕ್ರೈಂ ತಡೆಗಟ್ಟಲು ಸಹಾಯವಾಣಿ ಆರಂಭ

ಬೆಂಗಳೂರು, ಜುಲೈ 20: ಇತ್ತೀಚಿಗೆ ಕರ್ನಾಟಕದಲ್ಲಿ ಸೈಬರ್​ ವಂಚನೆ  ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಂತೂ ಬೆಂಗಳೂರಿನಲ್ಲಿ  ಸೈಬರ್​ ವಂಚನೆ ಅಧಿಕವಾಗಿದೆ. ನಗರದಲ್ಲಿ ಸೈಬರ್ ವಂಚಕರ ಹಾವಳಿ ಮಿತಿ ಮೀರಿದ್ದು, ಪ್ರತಿ ವರ್ಷ ಹತ್ತು ಸಾವಿರಕ್ಕು ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್​​ ವಂಚಕರ ಬಲೆಗೆ ಬಿದ್ದು ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಸೈಬರ್​ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್​ ಇಲಾಖೆ 1930 ಎಂಬ ಸಹಾಯವಾಣಿ ಆರಂಭಿಸಿದೆ.

ಈ ಕುರಿತು ಟ್ವೀಟ್​ ಮಾಡಿದ ರಾಜ್ಯ ಪೊಲೀಸ್​ ಇಲಾಖೆ, “ಆತ್ಮೀಯ ಆನ್​ಲೈನ್​ ಬಳಕೆದಾರರೇ ಸೈಬರ್​ ವಂಚನೆಯಿಂದ ದೂರ ಇರಲು ನಿಮ್ಮ ನಡೆಯ ಯಾವುದೇ ಸುಳಿವು ವಂಚಕರಿಗೆ ನೀಡಬೇಡಿ. ಒಂದು ವೇಳೆ ನೀವು ಸೈಬರ್​ ಬಲೆಯಲ್ಲಿ ಸಿಲುಕಿದ್ದರೆ ಹತ್ತರಿದ ಪೊಲೀಸ್​ ಠಾಣೆಗೆ ದೂರು ನೀಡಿ. ಅಥವಾ ಸೈಬರ್​ ಕ್ರೈಂ ಸಹಾಯವಾಣಿ 1930 ಗೆ ಕರೆ ಮಾಡಿ” ಎಂದು ಸಾಮಾಜಿಕ ಮಾಧ್ಯಮ ಎಕ್ಸ್​​ ಖಾತೆಯಲ್ಲಿ ಟ್ವೀಟ್​​ ಮಾಡಿದ್ದಾರೆ.

ಶುಕ್ರವಾರ ಮೈಕ್ರೋಸಾಫ್ಟ್ ಕ್ಲೌಡ್ ಸರ್ವೀಸ್​ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಜಾಗತಿಕವಾಗಿ ತಾಂತ್ರಿಕ ಬಿಕ್ಕಟ್ಟು ತಲೆದೋರಿತ್ತು. ಲಕ್ಷಾಂತರ ಜನರು ಬ್ಲೂ ಸ್ಕ್ರೀನ್ ಆಫ್ ಡೆತ್ (BSOD) ದೋಷವನ್ನು ಎದುರಿಸಿದ್ದರು. ಈ ಬ್ಲೂ ಸ್ಕ್ರೀನ್​ಲ್ಲೇ ರಾಜ್ಯ ಪೊಲೀಸ್​ ಇಲಾಖೆ ಸೈಬರ್​ ವಂಚಕರಿಂದ ಎಚ್ಚರ ವಹಿಸಿ ಎಂಬ ಸಂದೇಶ ಬರೆದು ಟ್ವೀಟ್​ ಮಾಡಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ