ಧಾರವಾಡ. ಸಂಭ್ರಮದ ಕೃಷ್ಣ ಜನ್ಮಾಷ್ಟಮಿ ಆಚರಣೆ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರಾಧಾಕೃಷ್ಣರ ವೇಶ ಧರಿಸಿ ಮಕ್ಕಳು ಶ್ರೀ ಕೃಷ್ಣನನ್ನು ಪೂಜಿಸಿದರು. ಕಾರ್ಯಕ್ರಮಕ್ಕೆ ಜನತಾ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿಗಳಾದ ಶ್ರೀಯುತ ಅರಿಹಂತ್ ಪ್ರಸಾದ್ ಇವರು ಆಗಮಿಸಿ ಶ್ರೀ ಕೃಷ್ಣನ ಪೂಜೆಯನ್ನು ನೆರವೇರಿಸಿದರು. ಶ್ರೀ ಕೃಷ್ಣನ ಜೀವನವೇ ನಮಗೆ ಸಂದೇಶ ಎಂದರು.
ಮಕ್ಕಳು ಶ್ರೀ ಕೃಷ್ಣನ ಜನ್ಮ, ಗೋವರ್ಧನ ಗಿರಿಧಾರಿ, ಗೀತಾ ಸಾರ, ಕಂಸ ವದೆ, ಮೊಸರು ಗಡಿಗೆ ಒಡೆಯುವ ದೃಶ್ಯ , ಯಶೋದೆಗೆ ತನ್ನ ಬಾಯಿಯಲ್ಲಿ ಬ್ರಹ್ಮಾಂಡವನ್ನು ತೋರಿಸಿದ ದೃಶ್ಯ, ಕೃಷ್ಣನ ಭಜನೆಗಳು ಹಾಗೂ ಶ್ರೀ ಕೃಷ್ಣನ ಪ್ರಿಯ ನೃತ್ಯವನ್ನು ಮಾಡಿ ತಮ್ಮ ಭಕ್ತಿಯನ್ನು ಪ್ರಸ್ತುತಪಡಿಸಿದ್ದರು. ಬಾಲಕೃಷ್ಣನ ಪಾಲಕೀ ಸೇವಾ ಜೆಎಸ್ಎಸ್ ಆವರಣದಲ್ಲಿ ಮಕ್ಕಳ ಹರಿಕೃಷ್ಣ ಹರೇ ರಾಮ ನಾಮಸ್ಮರಣೆ ಯೊಂದಿಗೆ ಎಲ್ಲೆಡೆಯೂ ಮೊಳಗಿತು. ಕೃಷ್ಣ ಜನ್ಮಾಷ್ಟಮಿಯು ಮಕ್ಕಳಲ್ಲಿ ಭಕ್ತಿ ಭಾವವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮ ದಲ್ಲಿ ಶಾಲಾ ಪ್ರಾಚಾರ್ಯ ಶ್ರೀಮತಿ ರಜನಿ ಪಾಟೀಲ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ತಿಳಿಸುವಲ್ಲಿ ಸಹಕಾರಿಯಾಗುತ್ತವೆ ಇದರಿಂದ ಮಕ್ಕಳಿಗೆ ವಿಷಯಗಳು ಮನದಟ್ಟಾಗುತ್ತವೆ ಎಂದರು. ಶಿಕ್ಷಕ ವೃಂದ ಹಾಗೂ ಮಕ್ಕಳು ಭಾಗಿಯಾಗಿದ್ದರು.