ಜಮಖಂಡಿ; ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಗೆ ಎಂಆರ್‌ಎನ್ ಫೌಂಡೇಶನ್ ವತಿಯಿಂದ ಸತತ ಮೂರನೇ ಬಾರಿಗೆ ಹಮ್ಮಿಕೊಂಡಿದ್ದ ಕೃಷ್ಣಾರತಿ , ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಅವರ 61ನೇ ಜನ್ಮದಿನದ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ಮುರುಗೇಶ ನಿರಾಣಿ ಅವರನ್ನು ಸಮೀತಿಯ ಪದಾಧಿಕಾರಿಗಳು ಹಾಗೂ ಸಮೀತಿಯ ಸದಸ್ಯರ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು, ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿರು ಅದ್ದೂರಿಯಾಗಿ ಬರಮಾಡಿ ಕೊಂಡರು. ಕೇನ್‌ನ ಸಹಾಯ ದಿಂದ ಬೃಹತ್ ಪುಷ್ಪ ಮಾಲೆಯನ್ನು ಹಾಕುವ ಮೂಲಕ ಸ್ವಾಗತಿಸಲಾಯಿತು, ಡೊಳ್ಳು, ಕೊಂಬು, ಕಹಳೆ, ಸಹಿತ ಹಲವಾರು ವಾದ್ಯ ಮೇಳಗಳಿಂದ ಮೆರವಣಿಗೆ ಮೂಲಕ ಆರತಿ ಸ್ಥಳಕ್ಕೆ ಅವರನ್ನು ಬರ ಮಾಡಿ ಕೊಳ್ಳಲಾಯಿತು. ಉತ್ತರ ಕರ್ನಾಟಕದ ಆರ್‌ಎಸ್‌ಎಸ್‌ನ ಕಾರ್ಯಕಾರಿಣಿ ಸದಸ್ಯ ಅರವಿಂದ ರಾವ ದೇಶಪಾಡೆ. ಉದ್ಯಮಿ ಸಂಗಮೇಶ ನಿರಾಣಿ, ರೈತ ಮುಖಂಡರು, ಹಿರಿಯರು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸಾಕ್ಷಿಯಾದರು.
ಪುಣ್ಯಸ್ನಾನ ; ಮಾಜಿ ಸಚಿವ ಮುರುಗೇಶ ನಿರಾಣಿ ದಂಪತಿಗಳಿಗೆ ವಿವಿಧ ಮಠಾ ಧೀಶರ ಸನ್ಮುಖದಲ್ಲಿ ಕೃಷ್ಣಾ ಪುಣ್ಯಸ್ನಾನದ ವಿಧಿ ವಿಧಾನ ಗಳನ್ನು ನೆರವೇರಿಸಲಾಯಿತು, ವೇದ ಘೋಷ ಮಂತ್ರಗಳಿಂದ ಪವಿತ್ರ ಕೃಷ್ಣಾ ಸ್ನಾನ ವಿಧಿವತ್ತಾಗಿ ನೆರವೇರಿಸಲಾಯಿತು, ದೇವಗಿರಿಬಾಬಾ ಹಾಗೂ ವಿವಿಧ ಮಠಾ ಧೀಶರ ಸನ್ಮುಖ ದಲ್ಲಿ ಧಾರ್ಮಿಕ ವಿಧಿವಿಧಾನ ಗಳು ನೆರವೇರಿದವು. ಶ್ರೀ ಕೃಷ್ಣನ ತೊಟ್ಟಿಲೋತ್ಸವ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.