LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಯುಕೆಪಿಗೆ ಪ್ರತ್ಯೇಕ ಸಚಿವಸ್ಥಾನ ರಚನೆ ಮಾಡಲಿ- ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ

 

 ಜಮಖಂಡಿ; ಕಳೆದ 63 ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವ ಸ್ಥಾನ ನಿರ್ಮಿಸಬೇಕು, ಎಂ.ಬಿ.ಪಾಟೀಲ, ಎಚ್‌.ಕೆ. ಪಾಟೀಲ, ಅಥವಾ ಜೆ,ಟಿ,ಪಾಟೀಲ ಯಾರಾದರೂ ಒಬ್ಬ ಉತ್ತರ ಕರ್ನಾಟಕದ ನಾಯಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಈ ಭಾಗದ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕು ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಆಗ್ರಹಿಸಿದರು. ನಗರದ ರಮಾನಿವಾಸ ನಿರೀಕ್ಷಣ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ತಜ್ಞ ಕೃಷ್ಣ ಕೊಲ್ಲಾರ ಕುಲಕರ್ಣಿ ಅವರ ಸಲಹೆಯಂತೆ ಉತ್ತರ ಕರ್ನಾಟಕದ ರೈತರ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂಧಿಸಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಶುಕ್ರವಾರ ಜಿಲ್ಲೆಯ ಬರಗಾಲ ಪರಿಸ್ಥಿತಿ ಅಧ್ಯಯನಕ್ಕೆಂದು ಬಾಗಲಕೊಟೆಗೆ ಆಗಮಿಸಲಿದ್ದಾರೆ, ಈ ಸಂರ್ಭದಲ್ಲಿ ಉತ್ತರ ಕರ್ನಾಟಕದ ರೈತರ ಬಹುದಿನಗಳ ಬೇಡಿಕೆಯ ಕುರಿತು ಸೂಕ್ತ ನಿರ್ಧಾರ ಪ್ರಕಟಿಸಬೇಕು, ಕೂಡಲೇ 10 ಸಾವಿರ ಕೋಟಿರೂಗಳ ಅನುದಾನ ಬಿಡುಗಡೆ ಗೊಳಿಸುವ ಮೂಲಕ ಯುಕೆಪಿ ಸಂತ್ರಸ್ಥರಿಗೆ ಪರಿಹಾರ ನೀಡುವ ಕೆಲಸಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪರಿಹಾರದಲ್ಲಿ ತಾರತಮ್ಯ; ಬಿಡದಿಯ ಟೌನ್‌ಸಿಪ್‌ ನಿರ್ಮಾಣಕ್ಕೆ ಎಕರೆಗೆ 3 ಕೋಟಿ ನೀಡಲು ಮುಂದಾಗಿರುವ ಸರ್ಕಾರ ಉತ್ತರ ಕರ್ನಾಟಕದ ರೈತರಿಗೆ 40 ಲಕ್ಷ ನೀರಾವರಿ ಜಮೀನುಗಳಿಗೆ ಹಾಗೂ ಒಣ ಬೇಸಾಯಕ್ಕೆ ಪ್ರತಿ ಎಕರೆಗೆ 30 ಲಕ್ಷ ನೀಡಲು ಹಿಂದೇಟು ಹಾಕುತ್ತಿದೆ. ಸರ್ಕಾರಕ್ಕೆ ಅಂಗಲಾಚುತ್ತಿರುವ ಸಂತ್ರಸ್ಥ ರೈತರ ಧ್ವನಿ ತಲುಪುತ್ತಿಲ್ಲ. ಬಿಡದಿ ಹಾಗೂ ಕೃಷ್ಣಾ ತೀರದ ಜಮೀನು ಎರಡೂ ಒಂದೇ ಆಗಿದ್ದರೂ ಇಲ್ಲಿಯ ರೈತರ ಕಣ್ಣಿಗೆ ಸುಣ್ಣ ಒರೆಸಲಾಗುತ್ತಿದೆ ಎಂದು ದೂರಿದರು. ಸಿದ್ಧರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಬಳ್ಳಾರಿ ಯಿಂದ ಕೂಡಲಸಂಗಮದ ವರೆಗಿನ ಪಾದಯಾತ್ರೆಯಲ್ಲಿ 48 ಸಾವಿರ ಕೋಟಿ ರೂಗಳ ವಿಶೇಷ ಅನುದಾನ ಘೋಷಣೆ ಮಾಡಿದ್ದರು ಅದು ಬಿಡುಗಡೆ ಆಗಿಲ್ಲ. ಯುಕೆಪಿಯ ಪರಿಹಾರಕ್ಕೆ ಮೀಸಲಾಗಿರುವ 3 ಸಾವಿರ ಕೋಟಿ ಕರ್ಚು ಮಾಡುತ್ತಿಲ್ಲ. ಸರ್ವೆ ಕಾರ್ಯ ನಡೆದಿಲ್ಲ, ನ್ಯಾಯಾಲಯ ಮೆಟ್ಟಿಲೇರಿದ ಕೆಲ ರೈತರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ ಎಂದು ವಿವರಿಸಿದರು.

ಛಲಗಾರ; ಪಟ್ಟು ಸಡಿಲಿಸದ ಛಲಗಾರ ಖ್ಯಾತಿಯ ಸಿಎಂ ಡಿ,ಕೆ,ಶಿವಕುಮಾರ ಅವರು ಉತ್ತರ ಕರ್ನಾಟಕದ ರೈತರ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು, ಯುಕೆಪಿಗೆ ಪ್ರತ್ಯೇಕ ಸಚಿವಸ್ಥಾನ, 10 ಸಾವಿರ ಕೋಟಿ ವಿಶೇಷ ಅನುದಾನ ಬಿಡುಗಡೆ, ತಕ್ಷಣ ಜಮೀನುಗಳಿಗೆ ಸರ್ವೇಗೆ ಆದೇಶ, ಸೇರಿದಂತೆ ಸಮಗ್ರ ಯೋಜನೆಯ ತನಿಖೆ ನಡೆಸಿ ತಮಗಿರುವ 1.5 ವರ್ಷದ ಅಧಿಕಾರದ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು,

ಮಾಜಿ ವಿಧಾನ ಪರಿಷತ್‌ ಸದಸ್ಯ ಜಿ.ಎಸ್‌.ನ್ಯಾಮಗೌಡ ಮಾತನಾಡಿ ಶುಕ್ರವಾರ ಬಾಗಲಕೊಟೆಗೆ ರೈತರ ನಿಯೋಗ ದೊಂದಿಗೆ ಮುಖ್ಯ ಮಂತ್ರಿಗಳ ಭೇಟಿ ಮಾಡಿ ಮನವಿ ಸಲ್ಲಿಸುವರಿದ್ದೇವೆ, ಪಕ್ಷಾತೀತವಾಗಿ ಎಲ್ಲ ಮುಖಂಡರು, ಚುನಾಯಿತ ಪ್ರತಿನಿಧಿಗಳು ಸಾಥ ನೀಡ ಬೇಕು ಎಂದು ಮನವಿ ಮಾಡಿದರು,ಯುಕೆಪಿ ಯೋಜನೆ ಆಮೆಗತಿಯಲ್ಲಿ ಸಾಗಿದೆ. ತಾಲುಕು ಪ್ರದೇಶದಲ್ಲಿ ಒಂದು ಗುಂಟೆ ಜಾಗಕ್ಕೆ 40 ಲಕ್ಷ ರೂ ದರ ನಿಗದಿ ಯಾಗಿರುವ ಸಂದರ್ಭದಲ್ಲಿ ಸರ್ಕಾರ ಎಚ್ಚೆತ್ತು ಕೊಂಡು ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು, ಮುಖಂಡರಾದ ಸಿ,ಟಿ, ಉಪಾಧ್ಯಾಯ ಮಾತನಾಡಿ ಯುಕೆಪಿ ಬಗ್ಗೆ ಜಿಓ ಆಗಿಲ್ಲ, ನಿಖರವಾದ ನಿರ್ಧಾರ ಪ್ರಕಟವಾಗಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ, ಜನಾಂದೋಲನ ಇಲ್ಲದ ಕಾರಣ ಯುಕೆಪಿ ನೆನಗುದಿಗೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು, ಯೋಜನೆಯ ಲಾಭ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ತಲುಪಲಿದ್ದು 25 ಲಕ್ಷ ಎಕರೆಗೂ ಹೆಚ್ಚು ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು. ಸುರೇಶಗೌಡ ಪಾಟೀಲ, ಬಾಲು ನಾಗೋಡ ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರನ್ನ ಅಜರಾಮರ: ಮಲ್ಲಿಕಾರ್ಜುನ ಅರಬಿ೧೦೦ ಮೀಟರ್ ಓಟದಲ್ಲಿ ದ್ವಿತೀಯ: ಜಿಲ್ಲಾ ಮಟ್ಟಕ್ಕೆ ಚೇತನ ನ್ಯಾಮಗೌಡಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹ