ಅಥಣಿ : ಗ್ರಾಮೀಣ ಜನರ ಕಸಬು ಕೂಲಿ ಹಾಗೂ ಒಕ್ಕಲುತನ, ದಿನಪೂರ್ತಿ ದುಡಿಬಂದು ರಾತ್ರಿ ಸಮಯದಲ್ಲಿ ಮಕ್ಕಳೊಂದಿಗೆ ಪುರಾತನ ಕತೆ ಹಾಗೂ, ನೃತ್ಯ, ವಿವಿಧ ಪ್ರಕಾರದ ಮೂಲ ಕಲೆಗಳು ಹೇಳುತ್ತಾ ತಮ್ಮ್ ದಣಿವನ್ನು ದುರುಮಾಡಲು ಜೀವ ಕಳೆ ತುಂಬಲು ಜಾನಪದ ಕಲೆಗಳು ಗ್ರಾಮೀಣ ಜನರ ಜೀವನ ಜೀವಾಳ ಎಂದು ಪುರಸಭೆ ಅಧ್ಯಕ್ಷರು ಶಿವಲೀಲಾ ಎಸ್ ಬೂಟಾಳೆ ಹೇಳಿದರು.
ಅವರು ನಗರದ ಆದರ್ಶನಗರದ ಸರ್ ಎಂ ವಿಶ್ವೇಶ್ವರಯ್ಯ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು. ಮತ್ತು ಶ್ರೀ ಮುರಸಿದ್ದೇಶ್ವರ ಕಲಾ ಪೋಷಕ ಸಂಘ ಮುರಗುಂಡಿ ಹಾಗೂ ಸಪ್ತಸ್ವರ ಸಂಗೀತ ಕಲಾ ಬಳಗ ಇವರು ಸಂಯುಕ್ತ ಆಶ್ರಯದಲ್ಲಿ ಜರುಗಿದ ಹಳ್ಳಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ನಾವೆಲ್ಲ ಪಾಶ್ಚಿಮಾತ್ಯ ಕಲೆಗಳ ಹೊಡೆತಕ್ಕೆ ಮಾರುಹೋಗಿ ಮೂಲ ಜಾನಪದ ಕಲೆಗಳಾದ ಸೋಭಾನ ಪದಗಳು, ಕರಬಲ್, ರಿವಾಯತ್, ಸಮುದಾಯದ ನೃತ್ಯ, ಕೋಲಾಟ್, ಬಿಸುಕಲ್ಲಿನ ಪದಗಳು, ಡೊಳ್ಳು ಕುಣಿತ, ಡೊಳ್ಳಿನ ಪದಗಳು, ಇಂತಹ ಹಲವಾರು ಕಲೆಗಳು ಮಾಯವಾಗುವ ಹಂತದಲ್ಲಿ ಇದ್ದಾವೆ. ಕಾರಣ ಈ ಕಲೆಗಳು ನಸಿಸಿ ಹೋಗಬಾರದೆಂದು ಕರ್ನಾಟಕ ಸರಕಾರ, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ಇವರು ಮೂಲ ಜನಪದ ಕಲೆಗಳಿಗೆ ಜೀವ ತುಂಬುತ್ತಿರುವದು ತುಂಬಾ ಸಂತೋಷದ ವಿಷಯವೆಂದು ಜಾನಪದ ಅಕಾಡೆಮಿಗೆ ಅಭಿನಂದನೆಗಳು ಸಲ್ಲಿಸಿ ಮಾತುನಾಡುದರು.
ಕಾರ್ಯಕ್ರಮದಲ್ಲಿ ಡಾ. ಕಾಡಯ್ಯ್ ಹಿರೇಮಠ್ ಮಹಾ ಸ್ವಾಮಿಗಳು ಹಾಗೂ ಪ ಪೂ ಶೀಲಾ ಅಮ್ಮನವರು ದಿವ್ಯ ಸಾನಿಧ್ಯವಹಿಸಿದ್ದರು. ಜ್ಯೋತಿ ಪ್ರಜ್ವಲನೆಯನ್ನು ಪುರಸಭೆಯ ಉಪಾಧ್ಯಕ್ಷರಾದ ಭುವನೇಶ್ವರಿ ಯಂಕಚ್ಚಿ, ಹ್ಯೂಮನ್ ರೈಟ್ಸ್ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಪ್ರೀತಿ ನಾಯಿಕ, ಜಿಲ್ಲಾ ಅಧ್ಯಕ್ಷರಾದ ಶ್ರೀದೇವಿ ಗಡದೆ, ಕೈಲಾಸ ಮಾದಬಾವಿ, ಅನೀಲ್ ಕಾಂಬಳೆ, ಪುಷ್ಪ ಕಾಂಬಳೆ, ಮುದಕಪ್ಪ ಜಮಖಂಡಿ,ಪ್ರೀತಿ ಪೂಜಾರಿ, ಅಲ್ಲವುದ್ದಿನ್ ಶೇಕ್, ಶಿವು ಕೋಳಿ, ರಾಜೇಶ್ ಮಕನದಾರ, ರವಿ ಹಾದಿಮನಿ ಅಪ್ಪು ಪೂಜಾರಿ, ಕುಮಾರ ಶೇಮಡೆ, ಅಜೀತ್ ಬೆಳ್ಳಂಕಿ, ಮುರಗೆಪ್ಪ ಪಾಟೀಲ್, ಕುಮಾರ ಗಸ್ತಿ, ಉಪಸ್ಥಿತರಿದ್ದರು.
ಹಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಉಗಾರ ಖುರ್ದ್, ದೇವರದ್ದೇರಟ್ಟಿ, ಅಡಹಳ್ಳಿ, ಬಡಚಿ, ಕೋಹಳ್ಳಿ, ಸುಟ್ಟಟ್ಟಿ, ಮುರಗುಂಡಿ, ಕೆಂಪವಾಡ, ಅಥಣಿ, ಕ್ರಷ್ಣ ಕಿತ್ತೂರ, ಐನಾಪುರ ಕಾಡವಾಡ, ಮಸರಗುಪ್ಪಿ, ತೆವರಟ್ಟಿ, ತಾಂವಸಿ, ತಾಲೂಕಿನ ವಿವಿಧ ಗ್ರಾಗಳಿಂದ 27 ತಂಡಗಳ ಭಾಗಿಯಾಗುಳಿದ್ದವು. ಕಾರ್ಯಕ್ರಮವನ್ನು ಸುರೇಶ ವಾಘಮೋಡೆ ನಿರೂಪಿಸಿದರು.