Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಡಿ ಮಾತ್ರೆ ಮಾರದಿದ್ರೆ ಪರವಾನಗಿ ಅಮಾನತು!

ಬೆಂಗಳೂರು: ಬಿಡಿ ಮಾತ್ರೆಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದ ನಗರದ ಮೆಡಿಕಲ್ ಶಾಪ್​ವೊಂದರ​​ ಪರವಾನಗಿಯನ್ನು ಔಷಧ ನಿಯಂತ್ರಣ ಇಲಾಖೆಯು ಎರಡು ದಿನಗಳ‌ ಕಾಲ ಅಮಾನತುಗೊಳಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇಲಾಖೆಯ ಆದೇಶದ ಅನ್ವಯ ಜುಲೈ 9 ಮತ್ತು 10ರಂದು ಮೆಡಿಕಲ್‌ ಶಾಪ್ ಮುಚ್ಚಲಾಗಿತ್ತು.


ಬಿಡಿ ಮಾತ್ರೆ ಮಾರಾಟ ನಿರಾಕರಣೆ, ಬಿಲ್ ನೀಡಲು ವಿಳಂಬ‌ ಸೇರಿ ಪರವಾನಗಿಯಲ್ಲಿನ ಷರತ್ತುಬದ್ಧ ಅಂಶಗಳ ಉಲ್ಲಂಘನೆ ಕಂಡುಬಂದಿದ್ದರಿಂದ ಹಲಸೂರಿನ ಕೆಂಬ್ರಿಡ್ಜ್ ರಸ್ತೆಯ ಟ್ರಸ್ಟ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಮೆಡಿಕಲ್ ಶಾಪ್ ಪರವಾನಗಿಯನ್ನು ಎರಡು ದಿನಗಳ ಕಾಲ ಔಷಧ ನಿಯಂತ್ರಣ ಇಲಾಖೆಯು ರದ್ದುಗೊಳಿಸಿತ್ತು. ಈ ಅವಧಿಯಲ್ಲಿ ಔಷಧ ಮಾರಾಟ, ಖರೀದಿ ಹಾಗೂ ವಿತರಣೆ ಮಾಡಕೂಡದು ಎಂದು ಸಹಾಯಕ ಔಷಧ ನಿಯಂತ್ರಕಿ ಎ.ಎಂ.ಸನೋಫರ್ ಜಾನ್ ತಮ್ಮ ಆದೇಶದಲ್ಲಿ ತಿಳಿಸಿದ್ದರು.


ಪ್ರಕರಣ ವಿವರ: ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಬುವರು ತಮಗೆ ಅನಾರೋಗ್ಯ ಹಿನ್ನೆಲೆ ವೈದ್ಯರ ಸೂಚನೆ ಮೇರೆಗೆ ಮಾತ್ರೆಗಳನ್ನ ಖರೀದಿಸಲು ಕಳೆದ ಮೇ 5ರಂದು ಮೆಡಿಕಲ್ ಶಾಪ್​ಗೆ ಹೋಗಿ ಎರಡು ಬಿಡಿ ಮಾತ್ರೆಗಳನ್ನು ಕೇಳಿದ್ದರು. ಆದರೆ, ಮೆಡಿಕಲ್​ ಶಾಪ್​ನವರು ಎರಡು ಮಾತ್ರೆ ನೀಡುವುದಿಲ್ಲ.‌ ಖರೀದಿಸಿದರೆ 874 ರೂಪಾಯಿ ಕೊಟ್ಟು 14 ಮಾತ್ರೆವಿರುವ ಶೀಟ್ ಪಡೆಯಬೇಕು ಎಂದು ಶಾಪ್ ಸಿಬ್ಬಂದಿ ಹೇಳಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*