LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ದಲಿತ ಸಮುದಾಯದಿಂದಲೇ ದಲಿತರ ಬಹಿಷ್ಕಾರ

ಮಂಡ್ಯ, ಅಕ್ಟೋಬರ್ 18: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ದಲಿತ ಸಮುದಾಯವೇ ದಲಿತರನ್ನು ಬಹಿಷ್ಕರಿಸಿರುವ ಆರೋಪ ಕೇಳಿ ಬರುತ್ತಿದೆ. ಕಾಲೋನಿಯ 7 ಕುಟುಂಬಗಳು ಬಹಿಷ್ಕಾರಕ್ಕೆ ಒಳಗಾಗಿದ್ದು, ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಕುಲದ ಮುಖಂಡರು ಆದೇಶ ಮಾಡಿದ್ದಾರೆ. ಇದೀಗ ಬಹಿಷ್ಕಾರಕ್ಕೊಳಗಾದ ಕುಟುಂಬಗಳು ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.

ಕಾಲೋನಿಯ ದಲಿತ ಸಮುದಾಯದವರು ಹಬ್ಬವನ್ನು ಆಚರಿಸಲು ಕಾಲೋನಿಯಲ್ಲಿ ಹಣ ಕೇಳಲಾಗುತ್ತಿತ್ತು. ಈ ಸಂದರ್ಭದಲ್ಲಿ 7 ಕುಟುಂಬದ ಸದಸ್ಯರು ಕುಲದ ವಿರುದ್ಧ ಮಾತನಾಡಿದ್ದರು. ಅಷ್ಟೇ ಅಲ್ಲದೇ ಹಬ್ಬಕ್ಕೆ ಹಣ ನೀಡುವುದಿಲ್ಲವೆಂದೂ ಹೇಳಿದ್ದರು. ಇದೇ ಕಾರಣಕ್ಕೆ ದಲಿತ ಸಮುದಾಯ ಪಂಚಾಯಿತಿಯ ಯಜಮಾನರು ಈ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರವೊಡ್ಡಿದ್ದಾರೆ.

ಬಹಿಷ್ಕಾರಕ್ಕೊಳಗಾದ ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಆದೇಶ ಮಾಡಲಾಗಿದೆ. ಅವರನ್ನು ಕುಲದ ಯಾವುದೇ ಕಾರ್ಯಕ್ರಮಗಳಿಗೂ ಕರೆಯಬಾರದೆಂದೂ, ಕರೆದರೂ ಆ ಕುಟುಂಬಗಳು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದೂ ಕಟ್ಟಾಜ್ಞೆ ಮಾಡಿದ್ದಾರೆ. ಬಹಿಷ್ಕೃತ ಕುಟುಂಬಗಳೊಂದಿಗೆ ಯಾವುದೇ ವ್ಯಾಪಾರ, ವ್ಯವಹಾರ ನಡೆಸದಂತೆ ಸೂಚಿಸಲಾಗಿದೆ.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ