*ಬಳ್ಳಾರಿ, ಆ.29:. ನಗರದ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (BITM) ಕಾಲೇಜಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ "ರಾಷ್ಟ್ರ ರಕ್ಷಣೆಯಲ್ಲಿ ಪ್ಯಾರಾ ಮಿಲಿಟರಿಗಳ ಪಾತ್ರ" ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಅರೆ ಸೈನಿಕರು ಹಾಗೂ ಬಳ್ಳಾರಿ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್, ರಾಷ್ಟ್ರಸೇವಾ ಪ್ರಶಸ್ತಿ ಹಾಗೂ ಬಳ್ಳಾರಿ ಸಾಧಕ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ಶೇಕ್ ಸಾಬ್ ಹಾಗೂ ಮಾಜಿ ಅರೆ ಸೈನಿಕ, ದೇಶ ಸೇವಾ ರತ್ನ ಪ್ರಶಸ್ತಿ ಹಾಗೂ ಕರ್ನಾಟಕ ಸಾಧಕ ರತ್ನ ಪ್ರಶಸ್ತಿ ಪುರಸ್ಕೃತ ಬಿ.ಎನ್. ಪ್ರಹ್ಲಾದ್ ರೆಡ್ಡಿ ಅವರು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವನ್ನು ಸುಮಾರು 200 ವರ್ಷಗಳ ಬ್ರಿಟಿಷರ ಆಳ್ವಿಕೆಯಿಂದ 1947ರ ಆಗಸ್ಟ್ 15ರಂದು ಮುಕ್ತಿಗೊಳಿಸಲಾಯಿತು. ಈ ದಿನವನ್ನು ನಾವು ಸ್ವಾತಂತ್ರ್ಯ ದಿನಾಚರಣೆಯಾಗಿ ಆಚರಿಸುತ್ತೇವೆ ಎಂದರು.
ಭಾರತ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿದ್ದು, ಯಾವ ರಾಜ್ಯಗಳು ಯಾವ ರಾಷ್ಟ್ರಗಳ ಗಡಿಭಾಗಗಳನ್ನು ಹೊಂದಿವೆ, ಅವುಗಳ ವಿಸ್ತೀರ್ಣವೆಷ್ಟು, ಅಲ್ಲಿ ಯಾವ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೆ ಎಂಬುದನ್ನು ವಿವರಿಸಿದರು.
ಉಗ್ರವಾದಿಗಳೆಂದರೇನು, ನಕ್ಸಲ್ ಎಂದರೇನು, ಇವರಲ್ಲಿರುವ ವ್ಯತ್ಯಾಸವೇನು, ಒಬ್ಬ ಸೈನಿಕ ದಟ್ಟ ಕಾಡು ಹಾಗೂ ಹಿಮ ಪರ್ವತಗಳಲ್ಲಿ ದೇಶವನ್ನು 24x7 ಯಾವ ರೀತಿ ಕಾಯುತ್ತಾನೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಒಬ್ಬ ತಾಯಿ ತನ್ನ ಮಗುವನ್ನು 9 ತಿಂಗಳು ಗರ್ಭದಲ್ಲಿ ಲಾಲನೆ ಪಾಲನೆ ಮಾಡುವಂತೆ, ಸೈನಿಕನು ಈ ಭಾರತಾಂಬೆಯನ್ನು ಕಾಪಾಡುತ್ತಾನೆ. ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತದ ಪ್ರಜೆಗಳು. ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ತಂದೆ-ತಾಯಿಯರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ ಎಂದು ಕರೆ ನೀಡಿದರು.
ವರ್ಷದಲ್ಲಿ ಬರುವ ಎರಡು ರಾಷ್ಟ್ರೀಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಬೇಕು, ರಾಷ್ಟ್ರಧ್ವಜವನ್ನು ಗೌರವಿಸಬೇಕು, ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಭಾರತವನ್ನು ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಕೊಂಡೊಯ್ಯಲು ಇಸ್ರೇಲ್ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಕೇವಲ 98 ಲಕ್ಷ ಜನಸಂಖ್ಯೆ ಹೊಂದಿರುವ ಇಸ್ರೇಲ್ ಇಂದು ವಿಶ್ವದ ಬಲಿಷ್ಠ ರಾಷ್ಟ್ರವಾಗಿದೆ. ಅಲ್ಲಿನ ಮಾದರಿಯಲ್ಲಿ ಪ್ರತಿಯೊಬ್ಬರೂ ಸೈನ್ಯ ಹಾಗೂ ಕೃಷಿ ತರಬೇತಿ ಪಡೆದುಕೊಳ್ಳಬೇಕು ಎಂದರು.
ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಎರಡು ನಿಮಿಷಗಳ ಶಪಥ ಗ್ರಹಣ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಯಾದವ್ ವಲ್ಲಿ, ಉಪನ್ಯಾಸಕರಾದ ಬಸವರಾಜ್, ಕಮಲ್ ಕಿಶೋರ್, ಶ್ರೀಧರ್, ಹೇಮಂತ್ ಕಪಾಲಿ, ಗಣಿತಶಾಸ್ತ್ರ ಉಪನ್ಯಾಸಕರಾದ ಜೆ.ಎಸ್.ಟಿ. ಸ್ವಾಮಿ ಹಾಗೂ ಆಡಳಿತ ಮಂಡಳಿಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದ