ಘಟಪ್ರಭಾ. ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿ ಮಠದ ಪೀಠಧಿಪತಿಗಳಾದ ಪೂಜ್ಯ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ಘಟಪ್ರಭಾ ಹೊಸಮಠದ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು.
ಇತ್ತೀಚೆಗೆ ಕೈಲಾಸ ಪರ್ವತ ಮಾನಸ ಸರೋವರ ಯಾತ್ರೆ ಕೈಗೊಂಡು ಘಟಪ್ರಭಾದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿ ತಾಯ್ನಾಡಿಗೆ ಮರಳಿದ ಗುಬ್ಬಲಗುಡ್ಡ ಕೆಂಪಯ್ಯಾಸ್ವಾಮಿ ಮಠ ಹಾಗೂ ಮುಂಡರಗಿ ಮಠದ ಜಗದ್ಗುರುಗಳಾದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನು ಮಠದಲ್ಲಿ ಸನ್ಮಾನಿಸಿ, ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಗುರುಬಸಯ್ಯಾ ಕರ್ಪೂಮಠ, ಯುವ ಮಖಂಡರಾದ ನವೀನ ತುಕ್ಕಾನಟ್ಟಿ, ಪ್ರಶಾಂತ ಶಿವಾಪುರೆ ,ಶಂಕರ ವಾಘ, ಶಿವು ಮತ್ತು ಚನ್ನು ಕರ್ಪೂರಮಠ ಸಹೋದರರು
ಸೇರಿದಂತೆ ಹಲವಾರು ಭಕ್ತರು ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದರು.
